For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ 'ನಮ್ಮ ಮೆಟ್ರೋ' ಸೆ. 7ರಿಂದ ಮತ್ತೆ ಕಾರ್ಯಾರಂಭ

|

ಬೆಂಗಳೂರಿನ 'ನಮ್ಮ ಮೆಟ್ರೋ' ಸೆಪ್ಟೆಂಬರ್ 7ನೇ ತಾರೀಕಿನಿಂದ ಕಾರ್ಯ ನಿರ್ವಹಣೆ ಆರಂಭಿಸಲಿದೆ. ಬೆಳಗ್ಗೆ 8ರಿಂದ 11ರ ತನಕ ಹಾಗೂ ಸಂಜೆ 4.30ರಿಂದ ರಾತ್ರಿ 7.30ರ ತನಕ ಪ್ರತಿ ಐದು ನಿಮಿಷಗಳಿಗೊಮ್ಮೆ ಸಂಚರಿಸಲಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ, ಪರ್ಪಲ್ ಲೈನ್ ರೈಲುಗಳು ಸೆ. 7ರಿಂದ ಕಾರ್ಯಾರಂಭ ಮಾಡುತ್ತವೆ. ಹಸಿರು ಲೈನ್ ನಲ್ಲಿ ಸೆ. 9ರಿಂದ ಆರಂಭವಾಗುತ್ತದೆ.

ಸೆಪ್ಟೆಂಬರ್ 11, 2020ರಿಂದ ಎರಡೂ ಲೈನ್ ನಲ್ಲಿ ಬೆಳಗ್ಗೆ 7ರಿಂದ ರಾತ್ರಿ 9ರ ತನಕ ಕಾರ್ಯ ನಿರ್ವಹಣೆ ಮಾಡಲಿದೆ. ಪೀಕ್ ಅವರ್ ನಲ್ಲಿ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಹಾಗೂ ಪೀಕ್ ಅವರ್ ಹೊರತುಪಡಿಸಿದ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ರೈಲು ಸಂಚಾರ ಇರುತ್ತದೆ.

ಬೆಂಗಳೂರಿನ 'ನಮ್ಮ ಮೆಟ್ರೋ' ಸೆ. 7ರಿಂದ ಮತ್ತೆ ಕಾರ್ಯಾರಂಭ

 

ರೈಲಿನಲ್ಲಿ ಪ್ರಯಾಣಿಸುವವರು ಸ್ಮಾರ್ಟ್ ಕಾರ್ಡ್ ಬಳಸಬೇಕಾಗುತ್ತದೆ. ಏಕೆಂದರೆ ಟೋಕನ್ ಮಾರಾಟ ಮಾಡುವುದಿಲ್ಲ. ಇನ್ನು ಎಲ್ಲ ಮೆಟ್ರೋ ಆವರಣದಲ್ಲಿ ಕಡ್ಡಾಯವಾಗಿ ಫೇಸ್ ಮಾಸ್ಕ್ ಬಳಸಿರಬೇಕು. ಇನ್ನು ಎರಡು ಮೀಟರ್ ಗಳ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಒಂದು ಪಾಯಿಂಟ್ ನಿಂದ ಮತ್ತೊಂದಕ್ಕೆ ಗರಿಷ್ಠ ನಾನೂರು ಪ್ರಯಾಣಿಕರು ಪ್ರಯಾಣಿಸಲು ಮಾತ್ರ ಅವಕಾಶ ಇದೆ. ಕೊರೊನಾ ಇರುವುದರಿಂದ ಒಂದು ಸೀಟಿನ ಪಕ್ಕ ಮತ್ತೊಂದು ಖಾಲಿ ಬಿಡಬೇಕಾಗುತ್ತದೆ.

English summary

Bengaluru Namma Metro Operation Will Start From September 7

Bengaluru Namma Metro resume it's service from September 7, 2020. Here is the complete details of service.
Company Search
COVID-19