For Quick Alerts
ALLOW NOTIFICATIONS  
For Daily Alerts

JIO vs Airtel vs VI: ವೇಗದ 3 ಜಿಬಿ ಡೇಟಾ ನೀಡುವ ಪ್ರಿಪೇಯ್ಡ್‌ ಯೋಜನೆಗಳು

|

ನೀವು ಮನೆಯಿಂದಲೂ ಕೆಲಸ ಮಾಡುತ್ತಿದ್ದರೆ ಮತ್ತು ನಿಮಗೆ ಹೆಚ್ಚಿನ ಇಂಟರ್ನೆಟ್ ಡೇಟಾ ಅಗತ್ಯವಿದ್ದರೆ, ವೇಗದ ಇಂಟರ್ನೆಟ್‌ ಒದಗಿಸುವ ಪ್ರಿಪೇಯ್ಡ್‌ ಯೋಜನೆಗಳ ಮಾಹಿತಿ ಇಲ್ಲಿದೆ.

 

ಏರ್‌ಟೆಲ್, ಜಿಯೋ ಮತ್ತು ವಿಐ (ವೊಡಾಫೋನ್ ಐಡಿಯಾ) ದ ಕೆಲವು ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಹೈಸ್ಪೀಡ್‌ ಡೇಟಾ ಜೊತೆಗೆ ವಿಶೇಷ ಯೋಜನೆಯನ್ನು ಹೊಂದಿದೆ. ಈ ಯೋಜನೆಗಳು ನಿಮಗೆ ಪ್ರತಿದಿನ 3 ಜಿಬಿ ಡೇಟಾವನ್ನು ನೀಡುತ್ತವೆ.

ದಿನಕ್ಕೆ 3ಜಿಬಿ ಡೇಟಾ ನೀಡುವ ಜಿಯೋ , ಏರ್‌ಟೆಲ್‌ , ವಿಐನ ಬೆಸ್ಟ್ ಪ್ರಿಪೇಯ್ಡ್‌ ಯೋಜನೆಗಳು ಯಾವುವು ಎಂಬುದನ್ನು ಈ ಕೆಳಗೆ ಓದಿ ತಿಳಿದುಕೊಳ್ಳಿ.

ಏರ್‌ಟೆಲ್‌ನ 558 ರೂ.ಗಳ ಪ್ರಿಪೇಯ್ಡ್ ಯೋಜನೆ

ಏರ್‌ಟೆಲ್‌ನ 558 ರೂ.ಗಳ ಪ್ರಿಪೇಯ್ಡ್ ಯೋಜನೆ

ಭಾರ್ತಿ ಏರ್‌ಟೆಲ್‌ 558 ರೂ.ಗಳ ಪ್ರಿಪೇಯ್ಡ್ ಯೋಜನೆಗಳ ಅಡಿಯಲ್ಲಿ, ಗ್ರಾಹಕರಿಗೆ 3 ಜಿಬಿ ದೈನಂದಿನ ಹೈಸ್ಪೀಡ್ ಡೇಟಾವನ್ನು ಅನ್‌ಲಿಮಿಟೆಡ್‌ ಕರೆ ಸೌಲಭ್ಯಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಹೊಂದಿದೆ.

ಈ ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳೆಂದರೆ ಅಮೆಜಾನ್ ಪ್ರೈಮ್ ವೀಡಿಯೊದ ಮೊಬೈಲ್ ಆವೃತ್ತಿಗೆ 30 ದಿನಗಳ ಉಚಿತ ಚಂದಾದಾರಿಕೆ, ಎಕ್ಸ್‌ಸ್ಟ್ರೀಮ್ ಪ್ರೀಮಿಯಂಗೆ ಪ್ರವೇಶ, ಉಚಿತ ಹಲೋ ಟ್ಯೂನ್ಸ್, ಅಪೊಲೊ 24/7 ಆ್ಯಪ್ಗೆ ಮೂರು ತಿಂಗಳವರೆಗೆ ಪ್ರವೇಶ ಮತ್ತು ಉಚಿತ ವಿಂಕ್ ಮ್ಯೂಸಿಕ್ ಲಭ್ಯವಿದೆ, ಜೊತೆಗೆ 1 ವರ್ಷದ ಫಾಸ್ಟ್ಯಾಗ್ ಖರೀದಿಯ ಮೇಲೆ 100 ರೂ. ರಿಯಾಯಿತಿ ಅವಕಾಶವಿದೆ.

ವೊಡಾಫೋನ್ ಐಡಿಯಾ 801 ರೂ.ಗಳ ಪ್ರಿಪೇಯ್ಡ್ ಯೋಜನೆ

ವೊಡಾಫೋನ್ ಐಡಿಯಾ 801 ರೂ.ಗಳ ಪ್ರಿಪೇಯ್ಡ್ ಯೋಜನೆ

ವಿಐ 801 ರೂ.ಗಳ ಪ್ರಿಪೇಯ್ಡ್ ಯೋಜನೆಯಡಿ, ತನ್ನ ಗ್ರಾಹಕರಿಗೆ 3 ಜಿಬಿ ಹೈಸ್ಪೀಡ್ ದೈನಂದಿನ ಡೇಟಾವನ್ನು 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ. ಯೋಜನೆಯಲ್ಲಿ 48 ಜಿಬಿ ಹೆಚ್ಚುವರಿ ಡೇಟಾ, ಅನ್‌ಲಿಮಿಟೆಡ್‌ ಕರೆ ಮತ್ತು 100 ದೈನಂದಿನ ಎಸ್‌ಎಂಎಸ್ ಸಹ ಒಳಗೊಂಡಿದೆ. ಇದಲ್ಲದೆ ಕಂಪನಿಯು ಗ್ರಾಹಕರಿಗೆ ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ ಅನ್‌ಲಿಮಿಟೆಡ್‌ ಇಂಟರ್ನೆಟ್ ಒದಗಿಸುತ್ತದೆ.

ಈ ಯೋಜನೆಯು ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನ (ಈ ತಿಂಗಳು ಡೇಟಾ ಉಳಿದರೆ ಬಾಕಿ ಡೇಟಾ ಮುಂದಿನ ಅವಧಿಗೆ ಮುಂದುವರೆಯುವುದು), ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಸಹ ಒಳಗೊಂಡಿದೆ. ಕಂಪನಿಯು ಗ್ರಾಹಕರಿಗೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ 1 ವರ್ಷದ ಉಚಿತ ಚಂದಾದಾರಿಕೆ ನೀಡುತ್ತಿದೆ.

ರಿಲಯನ್ಸ್ ಜಿಯೋ ರೂ 999 ಪ್ರಿಪೇಯ್ಡ್ ಯೋಜನೆ
 

ರಿಲಯನ್ಸ್ ಜಿಯೋ ರೂ 999 ಪ್ರಿಪೇಯ್ಡ್ ಯೋಜನೆ

ರಿಲಯನ್ಸ್ ಜಿಯೋ ರೂ 999 ಪ್ರಿಪೇಯ್ಡ್ ಯೋಜನೆ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ, ಜಿಯೋ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆ ಮತ್ತು 100 ದೈನಂದಿನ ಎಸ್‌ಎಂಎಸ್ ಜೊತೆಗೆ, 3 ಜಿಬಿ ದೈನಂದಿನ ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ಇದಲ್ಲದೆ, ಕಂಪನಿಯು ಬಳಕೆದಾರರಿಗೆ ಜಿಯೋಟಿವಿ, ಜಿಯೋ ಮನಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆನ್‌ಲೈನ್ ಅಪ್ಲಿಕೇಶನ್‌ಗಳ ಸೂಟ್‌ಗೆ ಪ್ರವೇಶವನ್ನು ನೀಡುತ್ತದೆ.

English summary

Best prepaid plans: Vi, Airtel or Jio: 3GB High Speed data Plans

Here the details of Reliance jio, Airtel, VI 3 best prepaid plans of which gives 3 GB high speed data
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X