ಏರ್ ಟೆಲ್- ಅಮೆಜಾನ್ ಸಹಯೋಗ; 89 ರು.ಗೆ ಮೊಬೈಲ್ ಓನ್ಲಿ ವಿಡಿಯೋ ಪ್ಲಾನ್
ಭಾರ್ತಿ ಏರ್ ಟೆಲ್ ಸಹಯೋಗದಲ್ಲಿ ಅಮೆಜಾನ್ ನಿಂದ ಮೊಬೈಲ್ ಓನ್ಲಿ ವಿಡಿಯೋ ಪ್ಲಾನ್ ಆರಂಭಿಸಲಾಗಿದೆ. ಇದರ ಆರಂಭಿಕ ಬೆಲೆ ರು. 89 ಇದೆ. "ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್" ಎಂಬುದು ಒಬ್ಬರೇ ಬಳಕೆದಾರರು ಬಳಸಬಹುದಾದ ಎಸ್ ಡಿ ಗುಣಮಟ್ಟದ ಸ್ಟ್ರೀಮಿಂಗ್ ಆಗಿದ್ದು, ಆರಂಭಿಕ ಬೆಲೆಯಾಗಿ ರು. 89ರಂತೆ ನೀಡಲಾಗುತ್ತಿದೆ.
ಏರ್ ಟೆಲ್ ನ ಎಲ್ಲ ಗ್ರಾಹಕರೂ ಪ್ರೀ ಪೇಯ್ಡ್ ಪ್ಯಾಕ್ ಜತೆಗೆ 30 ದಿನಗಳ ಉಚಿತ ಟ್ರಯಲ್ ಪಡೆಯಬಹುದು. ಇದಕ್ಕೆ ಮಾಡಬೇಕಾದದ್ದು ಏನೆಂದರೆ, ತಮ್ಮ ಮೊಬೈಲ್ ನಂಬರ್ ಬಳಸಿ, ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ಮೂಲಕ ಅಮೆಜಾನ್ ಗೆ ಸೈನ್ ಅಪ್ ಮಾಡಬೇಕು.
ಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭ
"ವಿಶ್ವದಲ್ಲೇ ಬಹಳ ಹೆಚ್ಚಿನ ಎಂಗೇಜ್ ಮೆಂಟ್ ದರ ಇರುವ, ತುಂಬ ವೇಗವಾಗಿ ಬೆಳೆಯುತ್ತಿರುವ ನಮ್ಮ ಪ್ರಾದೇಶಿಕ ಭಾಗದಲ್ಲಿ ಭಾರತ ಕೂಡ ಒಂದು. ಮೊಬೈಲ್ ನಲ್ಲಿ ಬ್ರಾಡ್ ಬ್ಯಾಂಡ್ ಬಳಕೆ ಬಹಳ ಹೆಚ್ಚಾಗಿದೆ. ಆ ಕಾರಣಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸ್ಟ್ರೀಮಿಂಗ್ ಗಾಗಿ ಬಳಸುವ ಸಾಧನ ಕೂಡ ಮೊಬೈಲ್ ಫೋನ್ ಆಗಿದೆ," ಎಂದು ಅಮೆಜಾನ್ ವಿಡಿಯೋ ವರ್ಲ್ಡ್ ವೈಡ್ ಉಪಾಧ್ಯಕ್ಷ ಜೇ ಮರೀನ್ ತಿಳಿಸಿದ್ದಾರೆ.
"ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಆರಂಭದ ಮೂಲಕ ಪ್ರತಿ ಭಾರತೀಯರನ್ನೂ ನಮ್ಮ ಎಕ್ಸ್ ಕ್ಲೂಸಿವ್ ಹಾಗೂ ಒರಿಜಿನಲ್ ಕಂಟೆಂಟ್ ಮೂಲಕ ಮನರಂಜಿಸಲು ಎದುರು ನೋಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಮೂವತ್ತು ದಿನಗಳ ಉಚಿತ ಟ್ರಯಲ್ ಅವಧಿ ಪೂರ್ಣಗೊಂಡ ನಂತರ ಏರ್ ಟೆಲ್ ಮೊಬೈಲ್ ಓನ್ಲಿ ವಿಡಿಯೋ ಪ್ಲಾನ್ ಅನ್ನು ಪ್ರೀಪೇಯ್ಡ್ ಶುಲ್ಕ ರು. 89ರೊಂದಿಗೆ ಮುಂದುವರಿಸಬಹುದು. ಅದರ ಅವಧಿ 28 ದಿನದ್ದಾಗಿರುತ್ತದೆ. 6 GB ಡೇಟಾ ಬರುತ್ತದೆ. ಅಥವಾ 299 ರುಪಾಯಿ ಪ್ಯಾಕ್ 28 ದಿನದ ವ್ಯಾಲಿಡಿಟಿ, ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಜತೆಗೆ ಅನಿನಿಯಮಿತ ಕರೆಗಳು, ಪ್ರತಿ ದಿನ 1.5 GB ಡೇಟಾ ದೊರೆಯುತ್ತದೆ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಅಮೆಜಾನ್ ಜತೆಗೆ ಗುಣಮಟ್ಟದ ಡಿಜಿಟಲ್ ಮನರಂಜನೆಯ ಸಹಭಾಗಿತ್ವ ವಹಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಭಾರ್ತಿ ಏರ್ ಟೆಲ್ ಸಿಒಒ ಶಾಶ್ವತ್ ಶರ್ಮಾ ಹೇಳಿದ್ದಾರೆ.