For Quick Alerts
ALLOW NOTIFICATIONS  
For Daily Alerts

ಏರ್‌ಟೆಲ್‌ ಬಳಕೆದಾರರು ಉಚಿತ 6 ಜಿಬಿ ಡೇಟಾ ಪಡೆಯುವುದು ಹೇಗೆ?

|

ಏರ್‌ಟೆಲ್ ತನ್ನ ಕೆಲವು ಪ್ರಿಪೇಯ್ಡ್‌ ಯೋಜನೆಗಳಿಗೆ ಉಚಿತವಾಗಿ 6 ಜಿಬಿ ಡೇಟಾ ಕೂಪನ್‌ಗಳನ್ನು ನೀಡುತ್ತಿದ್ದು, ಅರ್ಹ ಯೋಜನೆಗಳ ಮೂಲಕ ಗ್ರಾಹಕರು ನಿಗದಿತ ರೀಚಾರ್ಜ್ ಬಳಿಕ 1 ಜಿಬಿ ಡೇಟಾ ಕೂಪನ್‌ಗಳ ರೂಪದಲ್ಲಿ ಪಡೆಯುತ್ತಾರೆ. ಈ ಮೂಲಕ ಉಚಿತ 6 ಜಿಬಿ ಡೇಟಾವನ್ನು ಚಂದಾದಾರರ ಖಾತೆಗೆ ಜಮಾ ಮಾಡಲಾಗುತ್ತದೆ.

 

ಕೇವಲ 219 ರೂಪಾಯಿ ಯೋಜನೆಗಳಿಂದ ಪ್ರಾರಂಭವಾಗುವ ಏರ್‌ಟೆಲ್ ದೈನಂದಿನ ಡೇಟಾ ಯೋಜನೆಗಳೊಂದಿಗೆ ವಿವಿಧ ಅನ್‌ಲಿಮಿಟೆಡ್‌ ಕಾಂಬೊ ಪ್ರಿಪೇಯ್ಡ್‌ ಯೋಜನೆಗಳನ್ನು ಹೊಂದಿದೆ.

ಏರ್‌ಟೆಲ್‌ ಬಳಕೆದಾರರು ಉಚಿತ 6 ಜಿಬಿ ಡೇಟಾ ಪಡೆಯುವುದು ಹೇಗೆ?

ರೀಚಾರ್ಜ್ ಮಾಡುವ ಪ್ಯಾಕ್‌ಗೆ ಅನುಗುಣವಾಗಿ, ಗ್ರಾಹಕರು ಉಚಿತ ಡೇಟಾ ಕೂಪನ್‌ಗಳನ್ನು ತಲಾ 1 ಜಿಬಿಯಂತೆ ಆರು ವೋಚರ್‌ಗಳನ್ನು ಗಳಿಸಬಹುದು.

ಉದಾಹರಣೆಗೆ, ಏರ್‌ಟೆಲ್‌ನ ಯಾವುದೇ ಅನಿಯಮಿತ ಕಾಂಬೊ ಪ್ಯಾಕ್‌ಗಳನ್ನು 28 ದಿನಗಳ ಮಾನ್ಯತೆಯೊಂದಿಗೆ ರೀಚಾರ್ಜ್ ಮಾಡುವ ಒಬ್ಬ ವ್ಯಕ್ತಿ, ನಂತರ ತಲಾ 1 ಜಿಬಿ ಡೇಟಾದ ಎರಡು ಕೂಪನ್‌ಗಳಿಗೆ ಅರ್ಹರಾಗಿರುತ್ತಾರೆ. 56 ದಿನಗಳು ಮತ್ತು 84 ದಿನಗಳ ಮಾನ್ಯತೆಯನ್ನು ಹೊಂದಿರುವ ಇತರ ಯೋಜನೆಗಳಲ್ಲಿ, ಗ್ರಾಹಕರು ಕ್ರಮವಾಗಿ ನಾಲ್ಕು ಮತ್ತು ಆರು ಕೂಪನ್‌ಗಳನ್ನು ಪಡೆಯಬಹುದು.

ಬಳಕೆದಾರರು 6 ಜಿಬಿ ಉಚಿತ ಡೇಟಾವನ್ನು ಪಡೆಯಲು ಬಯಸಿದರೆ ಅವರು ಏರ್‌ಟೆಲ್ ಥ್ಯಾಂಕ್ಸ್‌ ಅಪ್ಲಿಕೇಶನ್ ಬಳಸಿ ರೀಚಾರ್ಜ್ ಮಾಡಬೇಕು. ಅರ್ಹ ಗ್ರಾಹಕರು ಪ್ರಿಪೇಯ್ಡ್ ಯೋಜನೆಯನ್ನು ಖರೀದಿಸಿದ ನಂತರ ಎಸ್‌ಎಂಎಸ್ ಮೂಲಕ ಉಚಿತ ಡೇಟಾ ಕೊಡುಗೆಯ ಬಗ್ಗೆ ತಿಳಿಸಲಾಗುವುದು.

English summary

Bharti Airtel Prepaid Customers Can Avail 6GB Of Data: Here the Details

Airtel is offering 6GB of 'free data coupons' with some of its prepaid recharge plans. The free 6GB data in the form of 1GB data coupons will be credited to the subscriber's account
Story first published: Monday, February 15, 2021, 10:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X