For Quick Alerts
ALLOW NOTIFICATIONS  
For Daily Alerts

BigBasket ಗ್ರಾಹಕರ ಡೇಟಾ ಸೋರಿಕೆ ಯಾಕಿಷ್ಟು ಗಂಭೀರ ಸಂಗತಿ ಗೊತ್ತಾ?

By ಅನಿಲ್ ಆಚಾರ್
|

ಆನ್‌ಲೈನ್ ಸೂಪರ್ ಮಾರ್ಕೆಟ್ 'ಬಿಗ್‌ ಬ್ಯಾಸ್ಕೆಟ್' ಇತ್ತೀಚೆಗೆ ಸಮಸ್ಯೆಗೆ ಸಿಲುಕಿಕೊಂಡಿತು. ಆಕಸ್ಮಿಕವಾಗಿ 2 ಕೋಟಿ ಬಳಕೆದಾರರ ದತ್ತಾಂಶವನ್ನು (ಡೇಟಾ) ಬಹಿರಂಗ ಆಗಿರುವ ಬಗ್ಗೆ ಅದರ ಗಮನಕ್ಕೆ ಬಂದಿತು. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಬಿಗ್ ಬ್ಯಾಸ್ಕೆಟ್ ಮತ್ತು ಆ ಥರದ ವ್ಯವಹಾರಗಳಿಗೆ ಬೇಡಿಕೆ ಹೆಚ್ಚಾಯಿತು.

 

ಗ್ರಾಹಕರು ದಿನಸಿ ಮತ್ತು ತರಕಾರಿಗಳನ್ನು ಖರೀದಿ ಮಾಡುವುದಕ್ಕೆ ತಮ್ಮ ಮನೆ ಬಾಗಿಲಿಗೆ ತಲುಪಿಸುವಂಥ ಬಿಗ್ ಬ್ಯಾಸ್ಕೆಟ್ ಬಳಕೆ ಹೆಚ್ಚು ಮಾಡಿದರು. ಆದರೆ ತಮ್ಮ ಖಾಸಗಿ ದತ್ತಾಂಶವು ಅಪ್ಲಿಕೇಷನ್ ಮೂಲಕ ಸೋರಿಕೆ ಆಗಬಹುದು ಎಂಬ ಬಗ್ಗೆ ಅವರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ.

ಭಾರತದಲ್ಲಿ ಸೈಬರ್ ಅಪರಾಧದಿಂದ 2019ರಲ್ಲಿ 1.25 ಲಕ್ಷ ಕೋಟಿ ನಷ್ಟ

ಅಮೆಜಾನ್, ಫ್ಲಿಪ್ ಕಾರ್ಟ್ ಅಥವಾ ಬಿಗ್‌ಬಾಸ್ಕೆಟ್ ಮತ್ತು ಗ್ರೋಫರ್ಸ್ ಸೇರಿದಂತೆ ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಶಾಪಿಂಗ್ ಮಾಡುವಾಗ ಮತ್ತು ಆನ್‌ಲೈನ್ ಪಾವತಿ ಮಾಡುವಾಗ ಡೆಬಿಟ್ /ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಅಲ್ಲಿಂದ ಮುಂದೆ ಮಾಡುವ ವ್ಯವಹಾರಗಳು ಸಲೀಸಾಗಲಿ ಎಂಬ ಕಾರಣಕ್ಕೆ ಅಪ್ಲಿಕೇಷನ್ ನಲ್ಲಿ ಸಂಗ್ರಹಿಸಲಾಗುತ್ತದೆ.

BigBasket ಗ್ರಾಹಕರ ಡೇಟಾ ಸೋರಿಕೆ ಯಾಕಿಷ್ಟು ಗಂಭೀರ ಸಂಗತಿ ಗೊತ್ತಾ?

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ, ಸಿವಿವಿ ಜೊತೆಗೆ, ಗ್ರಾಹಕರ ಫೋನ್ ನಂಬರ್ ಗಳು, ವಿಳಾಸವನ್ನು ಸಹ ನಮೂದಿಸುತ್ತಾರೆ. ಯುಎಸ್ ಮೂಲದ ಸೈಬರ್ ಸೆಕ್ಯೂರಿಟಿ ಇಂಟೆಲಿಜೆನ್ಸ್ ಸಂಸ್ಥೆ ಸೈಬಲ್ ಪ್ರಕಾರ, ಬಿಗ್‌ ಬ್ಯಾಸ್ಕೆಟ್ ಗೆ ಸೇರಿದ 4 ಕೋಟಿಗೂ ಹೆಚ್ಚಿನ ಬಳಕೆದಾರರ ಸೂಕ್ಷ್ಮ ದತ್ತಾಂಶ ಬಯಲಾಗಿದೆ ಎನ್ನಲಾಗಿದೆ.

ಈ ದತ್ತಾಂಶ ಸೋರಿಕೆ ಬಗ್ಗೆ ಮುಖ್ಯ ಸಂಗತಿಗಳು ಹೀಗಿವೆ:
* ಬಿಗ್‌ ಬ್ಯಾಸ್ಕೆಟ್ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡಿದ್ದು, ಹ್ಯಾಕರ್ ಗಳ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದೆ. ಇನ್ನು ಈಗ ಸೋರಿಕೆ ಆಗಿರುವ ದತ್ತಾಂಶ ಅಂದರೆ, ಅದು ಫೋನ್ ನಂಬರ್ ಗಳು ಹಾಗೂ ವಿಳಾಸ ಮಾತ್ರ ಎಂದು ಹೇಳಿಕೊಂಡಿದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಸೋರಿಕೆ ಆಗಿಲ್ಲ ಎಂದಿದೆ.

 

"ಗ್ರಾಹಕರ ಖಾಸಗಿತನ ಮತ್ತು ಗೋಪ್ಯತೆ ನಮ್ಮ ಆದ್ಯತೆಯಾಗಿದೆ. ನಾವು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಸೇರಿದಂತೆ ಯಾವುದೇ ಹಣಕಾಸಿನ ದತ್ತಾಂಶ ಸಂಗ್ರಹಿಸುವುದಿಲ್ಲ ಮತ್ತು ಈ ಹಣಕಾಸಿನ ದತ್ತಾಂಶ ಸುರಕ್ಷಿತವಾಗಿದೆ ಎಂಬ ಭರವಸೆ ನಮಗಿದೆ," ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.

"ನಾವು ನಿರ್ವಹಿಸುವ ಗ್ರಾಹಕ ದತ್ತಾಂಶಗಳೆಂದರೆ ಇಮೇಲ್ ಐಡಿಗಳು, ಫೋನ್ ನಂಬರ್, ಆರ್ಡರ್ ವಿವರಗಳು ಮತ್ತು ವಿಳಾಸಗಳು. ಆದ್ದರಿಂದ ಇವುಗಳನ್ನು ಪಡೆಯುವ ಸಾಧ್ಯತೆ ಇದೆ. ನಮ್ಮ ಮಾಹಿತಿಯನ್ನು ನಿರ್ವಹಿಸಲು ಉತ್ತಮ ಗುಣಮಟ್ಟದ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳನ್ನು ಬಳಸುತೇವೆ," ಎಂದು ಬಿಗ್ ಬ್ಯಾಸ್ಕೆಟ್ ಹೇಳಿದೆ.

- ಸೈಬಲ್ ಎಂಬುದು ದತ್ತಾಂಶ ಸೋರಿಕೆ ಬಗ್ಗೆ ವರದಿ ಮಾಡಿದ ಸೈಬರ್ ಸೆಕ್ಯೂರಿಟಿ ಸಂಸ್ಥೆ. ಇದನ್ನು ಮೊದಲು ಅಕ್ಟೋಬರ್ 31 ರಂದು ಪತ್ತೆ ಮಾಡಿದೆ ಎಂದು ತಿಳಿಸಿದೆ.

"ನಮ್ಮ ವಾಡಿಕೆಯ ಡಾರ್ಕ್ ವೆಬ್ ಮಾನಿಟರಿಂಗ್ ಸಮಯದಲ್ಲಿ, ಸೈಬಲ್ ನಲ್ಲಿನ ಸಂಶೋಧನಾ ತಂಡದ ಗಮನಕ್ಕೆ ಬಂದಿದ್ದೇನೆಂದರೆ, ಸೈಬರ್ ನಲ್ಲಿ ಬಿಗ್ ಬಾಸ್ಕೆಟ್ ನ ಡೇಟಾ ಬೇಸ್ ಮಾರಾಟಕ್ಕೆ ಇದೆ. ಸೈಬರ್ ಕ್ರೈಂ ಮಾರುಕಟ್ಟೆಯಲ್ಲಿ ಅದು $ 40,000ಕ್ಕಿಂತ ಹೆಚ್ಚಿನ ಬೆಲೆ ಮಾರಾಟವಾಗಿದೆ. SQL ಫೈಲ್‌ನ ಗಾತ್ರ 15 ಜಿಬಿ ಇದ್ದು, ಇದು ಸುಮಾರು 20 ಮಿಲಿಯನ್ ಬಳಕೆದಾರ ದತ್ತಾಂಶವನ್ನು ಹೊಂದಿದೆ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಇದರಲ್ಲಿ ಪೂರ್ಣ ಹೆಸರು, ಇಮೇಲ್ ಐಡಿಗಳು, ಪಾಸ್‌ವರ್ಡ್ ಹ್ಯಾಶ್‌ ಗಳು (ಸಂಭಾವ್ಯವಾಗಿ ಹ್ಯಾಶ್ ಮಾಡಿದ ಒಟಿಪಿಗಳು), ಪಿನ್, ಸಂಪರ್ಕ ಸಂಖ್ಯೆಗಳು (ಮೊಬೈಲ್ + ಫೋನ್), ಪೂರ್ಣ ವಿಳಾಸಗಳು, ಹುಟ್ಟಿದ ದಿನಾಂಕ, ಸ್ಥಳ ಮತ್ತು ಲಾಗಿನ್‌ನ ಐಪಿ ಅಡ್ರೆಸ್ ಗಳು ಸೇರಿವೆ," ಎಂದು ಸೈಬಲ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಹಾಕಿದೆ.

- ನವೆಂಬರ್ 1ನೇ ತಾರೀಕಿನಂದು ಬಿಗ್ ಬ್ಯಾಸ್ಕೆಟ್ ಗೆ ಸೈಬಲ್ ಮಾಹಿತಿ ನೀಡಿತ್ತು. ಆ ಮೇಲೆ ಬಿಗ್ ಬ್ಯಾಸ್ಕೆಟ್ ನಿಂದ ಸೈಬರ್ ವಿಭಾಗಕ್ಕೆ ದೂರು ನೀಡಲಾಗಿದೆ. ಯಾವ ಪರಿಯಲ್ಲಿ ಸೋರಿಕೆ ಆಗಿದೆ ಎಂಬ ಮೌಲ್ಯಮಾಪನ ನಡೆದಿದೆ.

ಭಾರತದಲ್ಲಿ ಹೆಚ್ಚುತ್ತಿರುವ ದತ್ತಾಂಶ ಸೋರಿಕೆ ಪ್ರಕರಣಗಳು
ಅಕ್ಟೋಬರ್‌ ಆರಂಭದಲ್ಲಿ ಹೈದರಾಬಾದ್ ಮೂಲದ ಡಯಾಗ್ನೋಸ್ಟಿಕ್ಸ್ ಸೆಂಟರ್, ಡಾ. ರೆಡ್ಡಿ ಅವರ ಎಲ್ಲ ಪ್ರಯೋಗಾಲಯಗಳನ್ನು ಮುಚ್ಚಬೇಕಾಯಿತು. ಅದಕ್ಕೆ ಕಾರಣ ಆಗಿದ್ದು ಸರ್ವರ್‌ ಗಳಲ್ಲಿನ ದತ್ತಾಂಶ ಸೋರಿಕೆ. ರಷ್ಯಾದ ಕೋವಿಡ್ -19 ಲಸಿಕೆ- ಸ್ಪುಟ್ನಿಕ್ ವಿ ಅನ್ನು ಭಾರತದಲ್ಲಿ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮೋದನೆ ದೊರೆತ ಕೆಲವು ದಿನಗಳ ನಂತರ ಡಾ. ರೆಡ್ಡೀಸ್ ಸರ್ವರ್‌ಗಳ ಮೇಲೆ ದಾಳಿ ನಡೆಸಲಾಯಿತು.

ದಾಳಿಯ ಹಿನ್ನೆಲೆಯಲ್ಲಿ, ಕಂಪೆನಿಯು ಭಾರತ, ರಷ್ಯಾ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಬ್ರೆಜಿಲ್‌ನಲ್ಲಿ ತನ್ನ ಎಲ್ಲಾ ಸ್ಥಾವರಗಳನ್ನು ಮುಚ್ಚಿದೆ.

"ಸೈಬರ್ ದಾಳಿ ಪತ್ತೆಯಾದದ್ದರ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಎಲ್ಲಾ ಡೇಟಾ ಸೆಂಟರ್ ಸೇವೆಗಳನ್ನು ಪ್ರತ್ಯೇಕಿಸಿದ್ದೇವೆ. ಎಲ್ಲಾ ಸೇವೆಗಳು 24 ಗಂಟೆಗಳ ಒಳಗೆ ಮತ್ತೆ ಶುರು ಆಗಲಿವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಈ ಘಟನೆಯಿಂದಾಗಿ ನಮ್ಮ ಕಾರ್ಯಾಚರಣೆಗಳ ಮೇಲೆ ಯಾವುದೇ ದೊಡ್ಡ ಪರಿಣಾಮ ಆಗುವುದಿಲ್ಲ," ಎಂದು ಡಾ ರೆಡ್ಡೀಸ್ ಮುಖ್ಯ ಮಾಹಿತಿ ಅಧಿಕಾರಿ ಮುಕೇಶ್ ರಾಟಿ ಹೇಳಿಕೆಯಲ್ಲಿ ತಿಳಿಸಿದ್ದರು.

English summary

BigBasket Data Breach Confirmed; What We Know About It So Far

Here is the details of BigBasket data breach incident and what are the consequences other details we know so far.
Story first published: Monday, November 9, 2020, 21:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X