For Quick Alerts
ALLOW NOTIFICATIONS  
For Daily Alerts

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾಗೆ ಕೊರೊನಾ ಪಾಸಿಟಿವ್

|

ಬಯೋಫಾರ್ಮಾಸ್ಯುಟಿಕಲ್ ಕಂಪೆನಿಯಾದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಆಗಿದೆ. "ಟೆಸ್ಟ್ ಪಾಸಿಟಿವ್ ಆಗಿರುವುದರಿಂದ ನಾನು ಕೊರೊನಾ ಲೆಕ್ಕಕ್ಕೆ ಸೇರ್ಪಡೆ ಆಗಿದ್ದೀನಿ. ಅಲ್ಪ ಪ್ರಮಾಣದ ಲಕ್ಷಣಗಳಿವೆ, ಅದಕ್ಕಿಂತ ಹೆಚ್ಚಾಗದು ಎಂಬ ಭರವಸೆಯಲ್ಲಿ ಇದ್ದೀನಿ" ಎಂದು ಸೋಮವಾರ ರಾತ್ರಿ ಕಿರಣ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ರೋಗಿಗಳ ಜೀವ ಉಳಿಸಬಹುದಾದ ವಿಶ್ವದ ಮೊದಲ ಔಷಧ ಬಯೋಕಾನ್ ನಿಂದ

ಬೆಂಗಳೂರಿನ ನಿವಾಸಿ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಗೆ ನೂರಾರು ಮಂದಿ ಟ್ವೀಟ್ ಮಾಡಿದ್ದು, ಬೇಗ ಚೇತರಿಸಿಕೊಳ್ಳಿ ಹಾರೈಸಿದ್ದಾರೆ. ಹೀಗೆ ಅವರ ಚೇತರಿಕೆಗೆ ಹಾರೈಸಿರುವವರಲ್ಲಿ ಕಾಂಗ್ರೆಸ್ ಸಂಸದರಾದ ಶಶಿ ತರೂರ್ ಸಹ ಇದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 91 ಸಾವಿರ ದಾಟಿದೆ.

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾಗೆ ಕೊರೊನಾ ಪಾಸಿಟಿವ್

 

ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಜುಲೈ ತಿಂಗಳಲ್ಲಿ ಬಯೋಕಾನ್ ನಿಂದ Itolizumab ಇಂಜೆಕ್ಷನ್ ಸಲ್ಯೂಷನ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕೊರೊನಾದಿಂದ ಉಂಟಾಗುವ ಸೈಟೋಕಿನ್ ರಿಲೀಸ್ ಸಿಂಡ್ರೋಮ್ ಗೆ ಅದನ್ನು ಬಳಸಲಾಗುತ್ತದೆ.

English summary

Biocon Chief Kiran Mazumdar Shaw Tests Positive for Coronavirus

Bengaluru based bio pharmaceutical company Biocon's chief Kiran Mazumdar Shaw tests corona positive. She tweeted on Monday night.
Company Search
COVID-19