ಬಿಟ್ಕಾಯಿನ್ ಶೇಕಡಾ 17ರಷ್ಟು ಕುಸಿತ: 45,000 ಡಾಲರ್ಗೆ ಇಳಿಕೆ
ಇತ್ತೀಚಿನ ಕೆಲವು ವಾರಗಳಲ್ಲಿ ಭಾರೀ ಸುದ್ದಿಯಲ್ಲಿದ್ದ ಕ್ರಿಪ್ಟೋಕರೆನ್ಸಿ ಬಿಟ್ಕಾಯಿನ್ ಮಂಗಳವಾರ ಶೇಕಡಾ 17ರಷ್ಟು ಕುಸಿತ ಕಂಡಿದ್ದು, ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಹೋಗಿ ತಲುಪಿದೆ.
ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಒಂದು ತಿಂಗಳಲ್ಲಿ ತನ್ನ ಅತಿದೊಡ್ಡ ದೈನಂದಿನ ಕುಸಿತವನ್ನು ಅನುಭವಿಸಿದ್ದು, $ 45,000 ಗೆ ಇಳಿದಿದೆ. 0939 GMT ನಲ್ಲಿ ಬಿಟ್ಕಾಯಿನ್ ಕೊನೆಯದಾಗಿ ಶೇಕಡಾ 11.3ರಷ್ಟು ಕುಸಿದಿದೆ.
ಈ ಕುಸಿತವು ಭಾನುವಾರದಂದು ದಾಖಲೆಯ ಗರಿಷ್ಠ, $58,354 ರಿಂದ ಸತತ ಐದನೇ ಕುಸಿತವನ್ನು ಕಂಡಿದೆ. ಆದರೂ ಬಿಟ್ಕಾಯಿನ್ ಈ ವರ್ಷದಲ್ಲಿ ಶೇಕಡಾ 60ರಷ್ಟು ಉಳಿದಿದೆ.
ಇನ್ನು ವಿಶ್ವದ ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿಯಾದ ಈಥರ್, ಬಿಟ್ಕಾಯಿನ್ನೊಂದಿಗೆ ಕುಸಿತ ಎದುರಿಸಿದ್ದು, ಇದು ಕೂಡ ಶೇಕಡಾ 17ಕ್ಕಿಂತಲೂ ಹೆಚ್ಚು ಕುಸಿದಿದೆ. ಕೊನೆಯದಾಗಿ 1,461 ಡಾಲರ್ಗೆ ಖರೀದಿಸಲ್ಪಟ್ಟಿದೆ. ಈಥರ್ ಕಳೆದ ವಾರದ ದಾಖಲೆಯ ಗರಿಷ್ಠ ಮಟ್ಟಕ್ಕಿಂತ ಸುಮಾರು ಶೇಕಡಾ 30ರಷ್ಟು ಕಡಿಮೆಯಾಗಿದೆ.
ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಕಂಪನಿಯು 1.5 ಬಿಲಿಯನ್ ಮೌಲ್ಯದ ಬಿಟ್ಕಾಯಿನ್ಗಳನ್ನು ಖರೀದಿಸಿತ್ತು. ಈ ಘೋಷಣೆಯ ಬಳಿಕ ಬಿಟ್ಕಾಯಿನ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಎಲೋನ್ ಮಸ್ಕ್ರ ಕಂಪನಿಯ ಷೇರುಗಳು ಸೋಮವಾರ ಶೇ. 8.6 ರಷ್ಟು ಕುಸಿದಿದ್ದು, ಟೆಸ್ಲಾ ನಿವ್ವಳ ಮೌಲ್ಯವು 15.2 ಬಿಲಿಯನ್ ಡಾಲರ್ನಷ್ಟು ಕುಸಿದಿದೆ.