ಷೇರುಪೇಟೆಯಲ್ಲಿ ಐಟಿ, ಲೋಹ, ರಿಯಾಲ್ಟಿ ಷೇರುಗಳು ಕುಸಿತ
ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಲ್ಲಾ ಕಂಪನಿಗಳು ಒಟ್ಟಾರೆ 2,53,394.63 ಕೋಟಿ ರು ಮೌಲ್ಯ ಇಳಿಸಿಕೊಂಡ ಬೆನ್ನಲ್ಲೇ ಸೋಮವಾರ ಶುಭಾರಂಭದ ನಿರೀಕ್ಷೆಯಿತ್ತು. ಆದರೆ, ಜನವರಿ 24ರಂದುದಿನದ ಆರಂಭದಿಂದಲೇ ಕೆಂಪು ಕೆಂಪಾಗಿ ಕಾಣುತ್ತಿದ್ದ ಷೇರುಪೇಟೆ ಸಂಜೆ ವೇಳೆಗೆ ಷೇರುಗಳು ಸಂಪೂರ್ಣ ಕೆಂಪುಶಾಯಿಯಲ್ಲಿ ಬರೆಯಲ್ಪಟ್ಟವು. ಜಾಗತಿಕ ಮಾರುಕಟ್ಟೆ ಏರಿಳಿತದ ನಡುವೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಲಾಗಿದೆ. ಯಾವೆಲ್ಲ ಕ್ಷೇತ್ರದ ಷೇರುಗಳು ಕುಸಿದಿವೆ ಎಂಬ ವಿವರ ಮುಂದಿದೆ..
ಜನವರಿ 24 ರಂದು ಮಾರುಕಟ್ಟೆ ಮುಕ್ತಾಯದ ವೇಳೆಗೆ ಸತ ಐದನೇ ಅಧಿವೇಶನದಲ್ಲಿ ಬೆಂಚ್ಮಾರ್ಕ್ ಸೂಚ್ಯಂಕಗಳು ಸುಮಾರು ಶೇ 3ರಷ್ಟು ಕಳೆದುಕೊಂಡಿವೆ.
ಮುಕ್ತಾಯದ ವೇಳೆಗೆ, ಸೆನ್ಸೆಕ್ಸ್ 1,545.67 ಪಾಯಿಂಟ್ ಅಥವಾ 57,491.51 ರಂತೆ ಶೇ 2.62ರಷ್ಟು ಇಳಿದಿದೆ ಮತ್ತು ನಿಫ್ಟಿ 468.10 ಪಾಯಿಂಟ್ ಅಥವಾ 17,149.10ರಂತೆ ಶೇ 2.66ರಷ್ಟು ತಲುಪಿದೆ. ಸುಮಾರು 450 ಷೇರುಗಳು ಮುನ್ನಡೆ ಸಾಧಿಸಿವೆ, 2938 ಷೇರುಗಳು ಕುಸಿದಿವೆ. ಮತ್ತು 100 ಷೇರುಗಳ ಸ್ಥಿತಿ ಬದಲಾಗಿಲ್ಲ.

ಆಟೋ, ಮೆಟಲ್, ಐಟಿ, ಪವರ್, ಫಾರ್ಮಾ, ರಿಯಾಲ್ಟಿ, ಎಫ್ಎಂಸಿಜಿ, ಕ್ಯಾಪಿಟಲ್ ಗೂಡ್ಸ್ ಶೇ.2-6ರಷ್ಟು ಇಳಿಕೆಯೊಂದಿಗೆ ಎಲ್ಲಾ ವಲಯದ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇ 4 ರಷ್ಟು ಕುಸಿದಿವೆ.
ಭಾರಿ ಕುಸಿತ ಕಂಡ ಷೇರುಗಳು
- ಜೆಎಸ್ ಡಬ್ಲೂ ಸ್ಟೀಲ್ -ಶೇ 6.67 ರಷ್ಟು ಕುಸಿತ
- ಟಾಟಾ ಸ್ಟೀಲ್-ಶೇ 6.03 ರಷ್ಟು ಕುಸಿತ
- ಬಜಾಜ್ ಫೈನಾನ್ಸ್ -ಶೇ 5.99 ರಷ್ಟು ಕುಸಿತ
- ಗ್ರಾಸಿಯಂ-ಶೇ 5.66 ರಷ್ಟು ಕುಸಿತ
- ಹಿಂಡಲ್ಕೋ-ಶೇ 5.59ರಷ್ಟು ಕುಸಿತ
- ವಿಪ್ರೋ-ಶೇ 5.34 ರಷ್ಟು ಕುಸಿತ
- ಟೆಕ್ ಮಹೀಂದ್ರಾ-ಶೇ 5.05 ರಷ್ಟು ಕುಸಿತ
- ಟೈಟಾನ್- ಶೇ 4.95 ರಷ್ಟು ಕುಸಿತ
- ಟಾಟಾ ಕಾನ್ಸ್- ಶೇ 4.83 ರಷ್ಟು ಕುಸಿತ
- ಟಾಟಾ ಮೋಟರ್ಸ್- ಶೇ 4.66 ರಷ್ಟು ಕುಸಿತ
ಮಾರುಕಟ್ಟೆ ತಜ್ಞರ ಪ್ರಕರಣ ಐಟಿ, ಲೋಹ, ಟೆಲಿಕಾಂ, ಆಟೋ ಸೇರಿದಂತೆ ಅನೇಕ ಕ್ಷೇತ್ರಗಳ ಷೇರುಗಳ ಕುಸಿತ ಮುಂದುವರೆಯುವ ಸಾಧ್ಯತೆಯಿದೆ. ಸಂಸ್ಥೆಗಳ ತ್ರೈಮಾಸಿಕ ವರದಿಯಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗದಿರುವುದು, ಜಾಗತಿಕ ವಿದ್ಯಮಾನ, ಭಾರತದ ಸದ್ಯದ ಪರಿಸ್ಥಿತಿ ನೋಡಿದರೆ ಕೇಂದ್ರ ಬಜೆಟ್ 2022 ಮುಗಿಯುವ ತನಕ ಷೇರುಪೇಟೆ ಇದೇ ರೀತಿ ಅಯೋಮಯ ಪರಿಸ್ಥಿತಿಗೆ ಹೊಂದುಕೊಳ್ಳಬೇಕಿದೆ. ಜನವರಿ 27 ರಂದು ಮಾರುಕಟ್ಟೆಗಳು ಸ್ವಲ್ಪ ಸಮತೋಲನವನ್ನು ಪಡೆಯಬಹುದು. ಆದರೆ ಫೆಬ್ರವರಿ 1, 2022 ರಂದು ಬಜೆಟ್ನಲ್ಲಿ ಬರುವ ಘೋಷಣೆಗಳು ಮಾರುಕಟ್ಟೆ ಚೇತರಿಕೆಯನ್ನು ಹೊಂದಲು ಕಾರಣವಾಗಬಹುದು.