For Quick Alerts
ALLOW NOTIFICATIONS  
For Daily Alerts

25% ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ Booking.com

By ಅನಿಲ್ ಆಚಾರ್
|

Booking.com ಎಂಬ ಟ್ರಾವೆಲ್ ವೆಬ್ ಸೈಟ್ ಮಾಲೀಕತ್ವ ಹೊಂದಿರುವ ಅಮೆರಿಕ ಮೂಲದ ಬುಕ್ಕಿಂಗ್ ಹೋಲ್ಡಿಂಗ್ ಕಂಪೆನಿಯು ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆ 17,000ದಲ್ಲಿ 25% ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧಾರ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಹೊಡೆತ ಬಿದ್ದಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮಂಗಳವಾರ ತಿಳಿಸಿದೆ.

ಕಂಪೆನಿಯ ವಕ್ತಾರರು ಈ ವರದಿಯನ್ನು ಖಾತ್ರಿ ಮಾಡಿರುವುದಾಗಿ ಡಚ್ ವೃತ್ತಪತ್ರಿಕೆಯಲ್ಲಿ ಬಂದಿದೆ. ಬುಕ್ಕಿಂಗ್.ಕಾಮ್ ಮುಖ್ಯಾಧಿಕಾರಿ ಗ್ಲೆನ್ ಫೊಗೆಲ್ ಅವರಿ ಸಿಬ್ಬಂದಿಗೆ ಈ ಕುರಿತು ಆಂತರಿಕವಾಗಿ ವಿಡಿಯೋ ಕಳಿಸಿದ್ದಾರೆ. ಇನ್ನು ಉದ್ಯೋಗ ಕಡಿತದ ಕುರಿತು ಪ್ರಶ್ನಿಸಿ ಕಳಿಸಿರುವ ಮೇಲ್ ಗೆ ಕಂಪೆನಿಯು ಪ್ರತಿಕ್ರಿಯಿಸಿದ್ದು, ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಹಾಗೂ ಹಣವನ್ನು ಉಳಿತಾಯ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದೆ.

 

ಕೊರೊನಾ ಎಫೆಕ್ಟ್: ಪೈಸಾಬಜಾರ್ ನಿಂದ 1500 ಉದ್ಯೋಗಕ್ಕೆ ಕತ್ತರಿ

ದುರದೃಷ್ಟದ ಸಂಗತಿ ಏನೆಂದರೆ, ಬಿಕ್ಕಟ್ಟಿನ ಪರಿಣಾಮವಾಗಿ ಇತರ ಟ್ರಾವೆಲ್ ಕಂಪೆನಿಗಳಂತೆಯೇ ನಾವು ಆಗಿದ್ದೇವೆ. ಜಾಗತಿಕವಾಗಿ ಉದ್ಯೋಗ ಕಡಿತ ಮಾಡುವ ಅನಿವಾರ್ಯ ಸ್ಥಿತಿಗೆ ಬಂದಿದ್ದೇವೆ. ವಿಶ್ವ ಮಟ್ಟದಲ್ಲಿ 25% ತನಕ ಸಿಬ್ಬಂದಿ ಮೇಲೆ ಇದರಿಂದ ಪರಿಣಾಮ ಆಗಲಿದೆ ಎಂದು ಕಂಪೆನಿ ತಿಳಿಸಿದೆ.

25% ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ Booking.com

ನಾಸ್ಡಾಕ್ ನಲ್ಲಿ ಈ ಕಂಪೆನಿ ಲಿಸ್ಟ್ ಆಗಿದೆ. ನಾರ್ವಾಕ್, ಕನೆಕ್ಟಿಕಟ್ ನಲ್ಲಿ ಮೂಲ ಹೊಂದಿದೆ. ಆಮ್ ಸ್ಟರ್ ಡಮ್, ನೆದರ್ಲೆಂಡ್ಸ್ ಗಳಲ್ಲಿ ಮುಖ್ಯವಾದ ಕಚೇರಿಗಳಿದ್ದು, 5500 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.

English summary

Booking.Com Announced To Cut Down 25 Percent Of Work Force

U.S. based Booking.com announced on Tuesday that to cut down 25% of global work force.
Company Search
COVID-19