For Quick Alerts
ALLOW NOTIFICATIONS  
For Daily Alerts

ಬಾಷ್ ಲಿಮಿಟೆಡ್‌ನ ತ್ರೈಮಾಸಿಕ ನಿವ್ವಳ ಲಾಭ ಕುಸಿತ

|

ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾದ ಬಾಷ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದಲ್ಲಿ 9,842 ಕೋಟಿ ರುಪಾಯಿಗಳ(1.25 ಬಿಲಿಯನ್ ಯೂರೋ) ಒಟ್ಟಾರೆ ಆದಾಯವನ್ನು ಕಾರ್ಯಾಚರಣೆಗಳಿಂದ ಗಳಿಸಿರುವುದಾಗಿ ಪ್ರಕಟಿಸಿದೆ. ಆದರೆ ಈ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 18.6 ಪರ್ಸೆಂಟ್ ರಷ್ಟು ಇಳಿಕೆಯಾಗಿದೆ.

ಕಾರ್ಯಾಚರಣೆಗಳಿಂದ ಕಳೆದ ಸಾಲಿಗಿಂತ ಒಟ್ಟು ಆದಾಯದಲ್ಲಿ 29.9 ಪರ್ಸೆಂಟ್‌ರಷ್ಟು ಕುಸಿತವಾಗಿದೆ. ಇನ್ನು ಒಟ್ಟು ಆದಾಯದ ತೆರಿಗೆಪೂರ್ವ ಲಾಭ(ಪಿಬಿಟಿ) 1,636 ಕೋಟಿ ರುಪಾಯಿಗಳಾಗಿದೆ. 2019-20 ನೇ ಸಾಲಿನಲ್ಲಿ ಒಟ್ಟು ಆದಾಯದ ಪಿಬಿಟಿ 16.6 ಪರ್ಸೆಂಟ್‌ರಷ್ಟು ದಾಖಲಾಗಿದೆ.

ಬಾಷ್ ಲಿಮಿಟೆಡ್‌ನ ತ್ರೈಮಾಸಿಕ ನಿವ್ವಳ ಲಾಭ ಕುಸಿತ

 

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು, ''ಆಟೋಮೋಟಿವ್ ಉದ್ಯಮದಲ್ಲಿ ಹಣಕಾಸು ವ್ಯವಹಾರಗಳು ಇಳಿಮುಖವಾಗುತ್ತಿವೆ. ಈ ಸವಾಲಿನ ಸಂದರ್ಭದಲ್ಲಿ ಈ ಪರಿಸ್ಥಿತಿ ಕೆಲವು ಸಮಯದವರೆಗೆ ಮುಂದುವರಿಯುತ್ತದೆ ಮತ್ತು ಕೊರೊನಾವೈರಸ್‍ನ ಪರಿಣಾಮಗಳೊಂದಿಗೆ ನಾವು ವ್ಯವಹರಿಸಬೇಕಾಗಿದೆ. ಹಿಂದೆಂದಿಗಿಂತಲೂ, ಈಗ ಹೆಚ್ಚಾಗಿ ತಳಹಂತದ ಮತ್ತು ಗ್ರಾಹಕರೊಂದಿಗೆ ವ್ಯವಹರಿಸುವುದು ಅತ್ಯಂತ ಪ್ರಮುಖವಾದ ನಿರ್ಣಾಯಕ ಸಮಯವಾಗಿದೆ. 2020-21 ನೇ ಹಣಕಾಸು ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಸುದೀರ್ಘವಾದ ಹಿನ್ನಡೆ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ'' ಎಂದು ಅವರು ತಿಳಿಸಿದರು.

''ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಪಾಲಿಸುವ ಹಿನ್ನೆಲೆಯಲ್ಲಿ ಬಾಷ್ ಲಿಮಿಟೆಡ್ ದೇಶದಲ್ಲಿ ಕ್ರಮೇಣವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ನಾವು ಸಹವರ್ತಿಗಳ ಸುರಕ್ಷತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಸುಸ್ಥಿರ ಮತ್ತು ಸ್ಥಿರವಾದ ಪೂರೈಕೆಯನ್ನು ನೀಡುವ ಮೂಲಕ ನಮ್ಮ ಗ್ರಾಹಕರಿಗೆ ಎಂದಿನಂತೆ ಸೇವೆಗಳನ್ನು ಒದಗಿಸಲು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ'' ಎಂದು ಅವರು ಹೇಳಿದರು.

2019-20 ನೇ ಹಣಕಾಸು ಸಾಲಿನಲ್ಲಿ ಬಾಷ್ ಲಿಮಿಟೆಡ್ ಹಲವಾರು ಪುನರ್‌ರಚನೆ, ಪುನರ್‌ಕೌಶಲ್ಯ ಮತ್ತು ಪುನರ್ ಯೋಜನೆ ಉಪಕ್ರಮಗಳಿಗಾಗಿ 717 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈ ಹಣವನ್ನು ಕಂಪನಿಯ ರೂಪಾಂತರ ಯೋಜನೆಗಳು ಮತ್ತು ಎಲೆಕ್ಟ್ರೋ ಮೊಬಿಲಿಟಿ ಮತ್ತು ಇತರೆ ಸಾರಿಗೆ ಸಂಬಂಧಿತ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ. ಹೊರತಾದ ಉತ್ಪನ್ನಗಳ ನಂತರ ಪಿಬಿಟಿ 920 ಕೋಟಿ ರೂಪಾಯಿಗಳಾಗಿದೆ ಅಥವಾ ಒಟ್ಟು ಆದಾಯ 9.3 ಪರ್ಸೆಂಟ್‌ರಷ್ಟಾಗಿದೆ. ಹೊರತಾದ ತೆರಿಗೆ ಉತ್ಪನ್ನಗಳಿಗೆ ಮುನ್ನ ಮುಂದುವರಿದ ಕಾರ್ಯಾಚರಣೆಗಳಿಂದ ತೆರಿಗೆ ನಂತರದ ಲಾಭ(ಪಿಎಟಿ) 730 ಕೋಟಿ ರೂಪಾಯಿಗಳಾಗಿದೆ. ರಿಯಾಯ್ತಿಯಲ್ಲಿನ ತೆರಿಗೆ ದರದಿಂದಾಗಿ 22 ಪರ್ಸೆಂಟ್‌ರಷ್ಟು ಆಗಿದೆ.

English summary

Bosch Sharp Decline In Profits For The March Quarter

Leading automotive components maker Bosch on Friday announced a sharp decline in profits for the March quarter due to a slowdown in the automotive sector and exceptional expenses
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more