For Quick Alerts
ALLOW NOTIFICATIONS  
For Daily Alerts

ರಾಜಸ್ಥಾನದ ಈ ನಗರದಲ್ಲಿ ಲೀಟರ್ ಗೆ ರು. 100 ದಾಟಿತು ಬ್ರ್ಯಾಂಡೆಡ್ ಪೆಟ್ರೋಲ್ ದರ

|

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆದ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲ ಬೆಲೆ ಪ್ರತಿ ದಿನ ಹೊಸ ದಾಖಲೆಯ ಎತ್ತರಕ್ಕೆ ಏರುತ್ತಿದೆ. ತೈಲ ಮಾರುಕಟ್ಟೆ ಕಂಪೆನಿಗಳಿಂದ (OMC) ಬುಧವಾರ ಬೆಲೆ ಏರಿಕೆ ಮಾಡಿದ ಮೇಲೆ ರಾಜಸ್ಥಾನದ ನಗರದಲ್ಲಿ ಬ್ರ್ಯಾಂಡೆಡ್ ಅಥವಾ ಪ್ರೀಮಿಯಂ ಪೆಟ್ರೋಲ್ ದರ ಲೀಟರ್ ಗೆ ರು. 100 ದಾಟಿದೆ.

ಬುಧವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ ತಲಾ 25 ಪೈಸೆ ಏರಿಕೆಯಾಯಿತು. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರು. 86.30, ಮುಂಬೈನಲ್ಲಿ 93 ರುಪಾಯಿ ಸಮೀಪ ಇದೆ. ತೈಲದ ಮೇಲೆ ಹೆಚ್ಚಿನ ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಹಲವು ನಗರಗಳಲ್ಲಿ ರು. 93 ದಾಟಿದೆ. ಸ್ಥಳೀಯ ಮಾರಾಟ ತೆರಿಗೆ ಹಾಗೂ VAT ಆಧಾರದ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ರೀತಿ ದರವಿದೆ.

 

ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿ ಚಿನ್ನ, ಸತತ 5ನೇ ದಿನ ಇಳಿಕೆ

ರಾಜಸ್ಥಾನದ ಶ್ರೀಗಂಗಾನಗರ್ ನಲ್ಲಿ ಪ್ರೀಮಿಯಂ ಪೆಟ್ರೋಲ್ ದರ ಲೀಟರ್ ಗೆ ರು. 101 ದಾಟಿತು. ಸಾಮಾನ್ಯ ಪೆಟ್ರೋಲ್ ದರ ರು. 98.40 ಇತ್ತು. ಬ್ರ್ಯಾಂಡೆಡ್ ಪೆಟ್ರೋಲ್ ದರ ದೆಹಲಿಯಲ್ಲಿ ರು. 89.10 ಹಾಗೂ ಮುಂಬೈನಲ್ಲಿ ರು. 95.61 ಇದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಹೀಗೆ ಬೆಲೆ ಪರಿಷ್ಕರಣೆ ಮಾಡುತ್ತಾ ಸಾಗಿದರೆ ಸದ್ಯದಲ್ಲೇ ಪ್ರಮುಖ ನಗರಗಳಲ್ಲಿ ಲೀಟರ್ ಗೆ ರು. 90 ಮುಟ್ಟಲಿದೆ.

ಈ ನಗರದಲ್ಲಿ ಲೀಟರ್ ಗೆ ರು. 100 ದಾಟಿತು ಬ್ರ್ಯಾಂಡೆಡ್ ಪೆಟ್ರೋಲ್ ದರ

ಇನ್ನು ಡೀಸೆಲ್ ದರ ಕೂಡ ದೇಶದಾದ್ಯಂತ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಲೀಟರ್ ಡೀಸೆಲ್ ಈಗ ರು. 76.23 ಇದ್ದರೆ, ಮುಂಬೈನಲ್ಲಿ ರು. 83 ದಾಟಿದೆ. ಇನ್ನು ಎಲ್ಲ ರಾಜ್ಯಗಳ ಪೈಕಿ ರಾಜಸ್ಥಾನದಲ್ಲಿ ಡೀಸೆಲ್ ಬೆಲೆ ಹೆಚ್ಚಿದೆ. ಜೈಪುರ್ ನಲ್ಲಿ ಲೀಟರ್ ಡೀಸೆಲ್ ರು. 85.60 ಇದೆ. ಶ್ರೀಗಂಗಾನಗರ್ ನಲ್ಲಿ ಡೀಸೆಲ್ ದರವು ಒಂದು ಲೀಟರ್ ಗೆ ರು. 89.68 ಇದೆ.

English summary

Branded Petrol In This Rajasthan City Crossed Rs 100; Fuel Price Hit All Time High

Branded petrol price in this Rajasthan city crossed Rs 100. India's major cities petrol and diesel price record new all time high.
Company Search
COVID-19