For Quick Alerts
ALLOW NOTIFICATIONS  
For Daily Alerts

ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು

|

ಬ್ರಿಕ್ಸ್‌ ರಾಷ್ಟ್ರಗಳ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್(ಎನ್‌ಡಿಬಿ) ಭಾರತಕ್ಕೆ ಕೊರೊನಾವೈರಸ್ ಸಂಕಷ್ಟ ಸಮಯದಲ್ಲಿ ತುರ್ತು ಸಹಾಯ ಸಾಲವಾಗಿ 1 ಶತಕೋಟಿ ಡಾಲರ್ ಅಂದರ ಭಾರತದ ರುಪಾಯಿಗಳಲ್ಲಿ ಸುಮಾರು 7,549 ಕೋಟಿ ರುಪಾಯಿ ಆರ್ಥಿಕ ನೆರವು ನೀಡಿದೆ.

ಶಾಂಘೈ ಮೂಲದ ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ನ್ನು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಒಟ್ಟಾಗಿ 2014ರಲ್ಲಿ ಸ್ಥಾಪಿಸಿದ್ದವು. ಭಾರತದ ಹಿರಿಯ ಬ್ಯಾಂಕ್ ಅಧಿಕಾರಿ ಕೆ ವಿ ಕಾಮತ್ ಅದರ ಮುಖ್ಯಸ್ಥರು.

ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು

 

ಭಾರತಕ್ಕೆ ತುರ್ತು ನೆರವು ಕಾರ್ಯಕ್ರಮ ಸಾಲಕ್ಕೆ ಏಪ್ರಿಲ್ 30ರಂದು ಬ್ಯಾಂಕಿನ ನಿರ್ದೇಶಕರ ಮಂಡಳಿ ಒಪ್ಪಿಗೆ ನೀಡಿತ್ತು. ವಿಪತ್ತು ಸಮಯದಲ್ಲಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡಲು ನ್ಯೂ ಡೆವೆಲಪ್ ಮೆಂಟ್ ಬ್ಯಾಂಕ್ ಬದ್ಧವಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ಭಾರತಕ್ಕೆ ಆರ್ಥಿಕ ಮತ್ತು ಸಾಮಾಜಿಕ ನೆರವು ನೀಡಲು ತುರ್ತು ಹಣಕಾಸು ನೆರವು ನೀಡುತ್ತಿದ್ದೇವೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉಪಾಧ್ಯಕ್ಷ ಕ್ಸಿಯಾನ್ ಝು ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ಎನ್‌ಡಿಬಿ ಬ್ಯಾಂಕ್ ಚೀನಾಕ್ಕೆ 7 ಬಿಲಿಯನ್ ಯುವಾನ್ (ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್) ತುರ್ತು ಸಹಾಯ ಸಾಲವಾಗಿ ನೀಡಿತ್ತು.

English summary

BRICS Bank Loan 1 Billion Dollar To India To Fight Covid-19

The New Development Bank (NDB) of the BRICS countries has given a 1billion dollar loan to India to help fight and contain the Covid-19 pandemic
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more