For Quick Alerts
ALLOW NOTIFICATIONS  
For Daily Alerts

ಈದ್ ರಜೆ ಹಿನ್ನೆಲೆ: ಇಂದು ಬಿಎಸ್‌ಇ, ಎನ್‌ಎಸ್‌ಇ ಮುಚ್ಚಿವೆ

|

ಇಂದು ಈದ್ ರಜೆ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಷೇರು ಮಾರುಕಟ್ಟೆಯ ಹೊರತಾಗಿ, ದೇಶದ ಕರೆನ್ಸಿ, ಸರಕು ಮತ್ತು ಬಾಂಡ್ ಮಾರುಕಟ್ಟೆಗಳು ಸಹ ಮುಚ್ಚಲ್ಪಡುತ್ತವೆ. ದೇಶದ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ಈದ್ ಅನ್ನು ರಜಾದಿನವೆಂದು ಘೋಷಿಸಲಾಗಿದೆ.

 

ಇಂದು ರಜೆ ಹಿನ್ನೆಲೆಯಲ್ಲಿ ಈಗ ಎಲ್ಲಾ ಮಾರುಕಟ್ಟೆಗಳು ತಮ್ಮ ಸಮಯಕ್ಕೆ ಅನುಗುಣವಾಗಿ ಶುಕ್ರವಾರ ತೆರೆಯುತ್ತವೆ. ಮತ್ತೊಂದೆಡೆ, ಬುಧವಾರ ಷೇರು ಮಾರುಕಟ್ಟೆ ಭಾರಿ ಕುಸಿತದೊಂದಿಗೆ ಮುಚ್ಚಲ್ಪಟ್ಟಿತು.

ಈದ್ ರಜೆ ಹಿನ್ನೆಲೆ: ಇಂದು ಬಿಎಸ್‌ಇ, ಎನ್‌ಎಸ್‌ಇ ಮುಚ್ಚಿವೆ

ಬುಧವಾರ (ಮೇ 13) ಷೇರು ಮಾರುಕಟ್ಟೆ ಭಾರಿ ಕುಸಿತಕ್ಕೆ ಒಳಗಾಯಿತು. ಸೆನ್ಸೆಕ್ಸ್ ಸುಮಾರು 471.01 ಪಾಯಿಂಟ್‌ಗಳ ಕುಸಿತ ಕಂಡು 48690.80 ಮಟ್ಟದಲ್ಲಿ ಮುಚ್ಚಿದೆ. ಅದೇ ಸಮಯದಲ್ಲಿ, ನಿಫ್ಟಿ 154.30 ಪಾಯಿಂಟ್‌ಗಳ ಕುಸಿತ ಕಂಡಿದ್ದು, 14696.50 ರ ಮಟ್ಟದಲ್ಲಿ ಮುಚ್ಚಿದೆ.

ಇದಲ್ಲದೆ, ಒಟ್ಟು 3,233 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,587 ಷೇರುಗಳು ಏರಿಕೆಗೊಂಡರೆ, 1,488 ಷೇರುಗಳು ಕುಸಿದವು, ಅದೇ ಸಮಯದಲ್ಲಿ 158 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಇದಲ್ಲದೆ, ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ಇಳಿದು 73.42 ರೂ.ಗೆ ತಲುಪಿದೆ.

English summary

BSE NSE Shut Today On Account Of Ramzan Id

The National Stock Exchange of India (NSE) and the BSE will remain closed on May 13 on account of Id-Ul-Fitr (Ramzan Id).
Story first published: Thursday, May 13, 2021, 10:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X