For Quick Alerts
ALLOW NOTIFICATIONS  
For Daily Alerts

BSNL ವರ್ಕ್ @ ಹೋಮ್ ಪ್ರಮೋಷನಲ್ ಆಫರ್ ಮೇ 19 ತನಕ ವಿಸ್ತರಣೆ

|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ ಎಲ್) ಈ ಹಿಂದೆ ನೀಡಿದ್ದ ಪ್ರಮೋಷನಲ್ ಬ್ರ್ಯಾಡ್ ಬ್ಯಾಂಡ್ ಆಫರ್ ಅನ್ನು ಮೇ 19ನೇ ತಾರೀಕಿನ ತನಕ ವಿಸ್ತರಣೆ ಮಾಡಿದೆ. ಮೊದಲ ಅವಧಿಯ ಲಾಕ್ ಡೌನ್ ಅವಧಿಯಲ್ಲಿ ಈ ಆಫರ್ ಘೋಷಣೆ ಮಾಡಲಾಗಿತ್ತು. ಏಪ್ರಿಲ್ 19ನೇ ತಾರೀಕಿನ ತನಕ ಮೊದಲಿಗೆ ಈ ಕೊಡುಗೆ ಇತ್ತು.

 

ಈ "ವರ್ಕ್ ಆಟ್ ಹೋಮ್" ಪ್ರಮೋಷನಲ್ ಬ್ರ್ಯಾಡ್ ಬ್ಯಾಂಡ್ ಆಫರ್ ನಲ್ಲಿ ಒಂದು ದಿನಕ್ಕೆ 5 GB ಡೇಟಾವನ್ನು 10 Mbps ವೇಗದಲ್ಲಿ ನೀಡಲಾಗುತ್ತದೆ. ಆ 5 GB ಡೇಟಾ ಪೂರ್ತಿ ಬಳಕೆಯಾದ ಮೇಲೆ 1 Mbpsಗೆ ವೇಗ ಕುಸಿಯುತ್ತದೆ. ಬಿಎಸ್ ಎನ್ ಎಲ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ಕೊಡುಗೆಯು ಈ ವರೆಗೆ ಯಾರು ಹೈ ಸ್ಪೀಡ್ ಇಂಟರ್ ನೆಟ್ ಸ್ಪೀಡ್ ಅನುಭವ ಪಡೆಯದಂಥವರಿಗೆ ಅದು ಸಿಗಲಿ ಎಂಬುದು ಉದ್ದೇಶ.

BSNL ವರ್ಕ್ @ ಹೋಮ್ ಪ್ರಮೋಷನಲ್ ಆಫರ್ ಮೇ 19 ತನಕ ವಿಸ್ತರಣೆ

ಆ ಕಾರಣಕ್ಕೆ ಯಾರು ಈಗಾಗಲೇ ಲ್ಯಾಂಡ್ ಲೈನ್ ಸಂಪರ್ಕ ಹೊಂದಿರುತ್ತಾರೋ ಅಂಥವರಿಗೆ ಈ ಕೊಡುಗೆ ಇದೆ. ಬಿಎಸ್ ಎನ್ ಎಲ್ ನಿಂದ ಉಚಿತ ಟೋಲ್ ಫ್ರೀ ಸಂಖ್ಯೆ ನೀಡಲಾಗಿದ್ದು, ಅದರ ಮೂಲಕ ಆಫರ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದರ ಜತೆಗೆ ವ್ಯಾಲಿಡಿಟಿ ಮುಗಿದ ಪ್ರೀಪೇಯ್ಡ್ ಗ್ರಾಹಕರಿಗೆ ಅವಧಿಯನ್ನು ಮೇ 5ನೇ ತಾರೀಕಿನವರೆಗೆ ವಿಸ್ತರಣೆ ಮಾಡಲಾಗಿದೆ.

English summary

BSNL Extends Work At Home Offer Till May 19

BSNL extends work at home offer till May 19. Here is the complete details.
Story first published: Sunday, April 26, 2020, 13:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X