For Quick Alerts
ALLOW NOTIFICATIONS  
For Daily Alerts

ಬಿಎಸ್ ಎನ್ ಎಲ್, ಎಂಟಿಎನ್ ಎಲ್, ಏರ್ ಇಂಡಿಯಾ ಭಾರೀ ನಷ್ಟದ ಸಂಸ್ಥೆಗಳು

|

2018-19ನೇ ಸಾಲಿಗೆ ಅತ್ಯಂತ ಲಾಭದಾಯಕ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಎನಿಸಿಕೊಂಡಿವೆ ಒಎನ್ ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಎನ್ ಟಿಪಿಸಿ. ಇನ್ನು ಬಿಎಸ್ ಎನ್ ಎಲ್, ಏರ್ ಇಂಡಿಯಾ ಮತ್ತು ಎಂಟಿಎನ್ ಎಲ್ ಸತತವಾಗಿ ಮೂರನೇ ವರ್ಷ ಅತಿ ಹೆಚ್ಚು ನಷ್ಟ ಅನುಭವಿಸಿದ ಕಂಪೆನಿಗಳಾಗಿವೆ.

 

ಸಂಸತ್ ನಲ್ಲಿ ಸೋಮವಾರ ಮಂಡಿಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. ಸಾರ್ವಜನಿಕ ಸಂಸ್ಥೆಗಳ ಸಮೀಕ್ಷೆ 2018-19ನಿಂದ ಎಲ್ಲ ಕೇಂದ್ರೀಯ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ವಾರ್ಷಿಕ ಆರ್ಥಿಕ ಸ್ಥಿತಿ ಮೌಲ್ಯಮಾಪನ ಮಾಡಲಾಗಿದೆ. ಕೇಂದ್ರ ಸರ್ಕಾರ ಸ್ವಾಮ್ಯದ 70 ಕಂಪೆನಿಗಳು ನಷ್ಟದಲ್ಲಿದ್ದು, ಆ ಪೈಕಿ ಟಾಪ್ ಹತ್ತು ಕಂಪೆನಿಗಳ ನಷ್ಟ ಪ್ರಮಾಣವೇ 94.04 ಪರ್ಸೆಂಟ್ ನಷ್ಟಿದೆ.

ಫೆಬ್ರವರಿ 1ರಿಂದ BSNL ಸಂಸ್ಥೆ ಅರ್ಧಕರ್ಧ ಖಾಲಿ: ಗ್ರಾಹಕರಿಗೆ ಪರದಾಟ ತಪ್ಪಿದ್ದಲ್ಲ

ಇನ್ನು ಲಾಭ ಗಳಿಸುತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಒಎನ್ ಜಿಸಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಎನ್ ಟಿಪಿ ಟಾಪ್ ಮೊದಲ ಮೂರು ಸ್ಥಾನದಲ್ಲಿವೆ. 2017-18ನೇ ಸಾಲಿನಲ್ಲಿ ಲಾಭದಲ್ಲಿದ್ದ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಎಂಎಸ್ ಟಿಸಿ ಮತ್ತು ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಾಭದಲ್ಲಿ ಇದ್ದವು. ಆದರೆ 2018-19ರಲ್ಲಿ ಇವುಗಳು ನಷ್ಟ ಅನುಭವಿಸಿವೆ.

ಬಿಎಸ್ ಎನ್ ಎಲ್, ಎಂಟಿಎನ್ ಎಲ್, ಏರ್ ಇಂಡಿಯಾ ಭಾರೀ ನಷ್ಟದ ಸಂಸ್ಥೆಗಳು

2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಕಂಪೆನಿಗಳು ಸೇರಿ 24,40,748 ಕೋಟಿ ಆದಾಯ ಬಂದಿದ್ದರೆ, 2017-18ರಲ್ಲಿ 20,32,001 ಕೋಟಿ ಬಂದಿತ್ತು. ಹೋಲಿಕೆ ಮಾಡಿದರೆ 20.12 ಪರ್ಸೆಂಟ್ ಬೆಳವಣಿಗೆ ದಾಖಲಿಸಿದೆ.

ಸಮೀಕ್ಷೆ ಪ್ರಕಾರ ಮಾರ್ಚ್ 31, 2019ಕ್ಕೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳು 348 ಇವೆ. ಅದರಲ್ಲಿ 249 ಕಾರ್ಯ ನಿರ್ವಹಿಸುತ್ತಿವೆ. ಬಾಕಿ 86 ನಿರ್ಮಾಣ ಹಂತದಲ್ಲಿ ಮತ್ತು 13 ಕಂಪೆನಿ ಇನ್ನೇನು ಮುಚ್ಚುವ ಹಂತದಲ್ಲಿದೆ.

English summary

BSNL, MTNL Top Loss Making PSU's

BSNL, MTNL and Air India top loss making PSU's. Here is the complete details.
Story first published: Tuesday, February 11, 2020, 14:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X