BSNLನತ್ತ ಮುಖಮಾಡುತ್ತಿರುವ ಗ್ರಾಹಕರು: ಸಿಗಲಿದ್ಯಾ ಮರುಜೀವ?
ಮುಂಬರುವ ದಿನಗಳಲ್ಲಿ ಏರ್ಟೆಲ್, ವೊಡಾಫೋನ್-ಐಡಿಯಾ, ಜಿಯೋ ಕಂಪನಿಗಳು ಕರೆ ಹಾಗೂ ಡೇಟಾ ದರ ಏರಿಸಲು ರೆಡಿಯಾಗಿವೆ. ಗ್ರಾಹಕರು ಯಾವ ನೆಟವರ್ಟ್ ಗೆ ಪೋರ್ಟ್ ಆಗುವುದು ಎಂಬ ಯೋಚನೆಯಲ್ಲಿದ್ದಾರೆ. ಈ ವೇಳೆ ನಷ್ಟದಲ್ಲಿ ಮುಳುಗುತ್ತಿರುವ ಬಿಎಸ್ಎನ್ಎಲ್ ನತ್ತ ಗ್ರಾಹಕರು ಮುಖ ಮಾಡಿದ್ದಾರೆ.
ಡಿಸೆಂಬರ್ನಿಂದ ಕರೆ ಹಾಗೂ ಡೇಟಾ ದರ ಏರಿಕೆ ಆಗಲಿದೆ ಎಂಬುದು ಗ್ರಾಹಕರ ಯೋಚನೆಯಾಗಿದೆ. ಆದರೆ ಇದೇ ವೇಳೆ ನಷ್ಟದಲ್ಲಿ ಮುಳುಗುತ್ತಿರುವ ಬಿಎಸ್ಎನ್ಎಲ್ ಮರುಜೀವ ಪಡೆಯುವ ಮುನ್ಸೂಚನೆ ನೀಡಿದೆ. 2019-20ರಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ತೊರೆಯುವುದಕ್ಕಿಂತ ಹೆಚ್ಚಾಗಿ ನೆಟ್ವರ್ಕ್ಗೆ ಸೇರುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಎಸ್ಎನ್ಎಲ್ ಹೇಳಿದೆ
2018-19ರಲ್ಲಿ 28.27 ಲಕ್ಷ ಗ್ರಾಹಕರು ಪೋರ್ಟ್ ಔಟ್ ಆಗಿದ್ರೆ, 53.64 ಲಕ್ಷ ಜನರು ಪೋರ್ಟ್ ಇನ್ ಆಗಿದ್ದಾರೆ. 2019 ಅಕ್ಟೋಬರ್ ವೇಳೆಗೆ 2.04 ಕೋಟಿ ಗ್ರಾಹಕರು ಪೋರ್ಟ್ ಇನ್ ಆಗಿದ್ದು, 1.80 ಕೋಟಿ ಜನರು ಪೋರ್ಟ್ ಔಟ್ ಆಗಿದ್ದಾರೆ.
ಬಿಎಸ್ಎನ್ಎಲ್ನ ಪೋರ್ಟ್ ಔಟ್ ಆಗುವ ಗ್ರಾಹಕರ ಸಂಖ್ಯೆಗಿಂತ ಪೋರ್ಟ್ ಇನ್ ಆಗುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ ಎಂದು ಬಿಎಸ್ಎನ್ಎಲ್ ಮಾಹಿತಿ ನೀಡಿದೆ. 2019-20ರಲ್ಲಿ(2019 ಅಕ್ಟೋಬರ್ವರೆಗೆ) ಬಿಎಸ್ಎನ್ಎಲ್ನ MNP(mobile number portability) ಸಕಾರಾತ್ಮಕವಾಗಿದೆ' ಎಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಶುಲ್ಕವನ್ನು ಹೆಚ್ಚಿಸಲು ರೆಡಿಯಾಗಿವೆ ಏರ್ಟೆಲ್, ವೊಡಾಪೋನ್, ಐಡಿಯಾ
ಟೆಲಿಫೋನ್ ಉದ್ಯಮದಲ್ಲಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬದಲಾವಣೆ ನಡೆಯುತ್ತಿದ್ದು, ಗ್ರಾಹಕರು ಉತ್ತಮ ನೆಟ್ವರ್ಕ್ ಆಯ್ಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಈ ವೇಳೆ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನೆಟ್ವರ್ಕ್ ಬಳಕೆದಾರರ ಸಂಖ್ಯೆ ಏರಿಕೆಯಾಗತೊಡಗಿದೆ. ಆಗಸ್ಟ್ 31ರ ವೇಳೆಗೆ ಬಿಎಸ್ಎನ್ಎಲ್ನ ಮೊಬೈಲ್ ಸಂಪರ್ಕಗಳ ಸಂಖ್ಯೆ 11.64 ಕೋಟಿಗೆ ತಲುಪಿದೆ.