For Quick Alerts
ALLOW NOTIFICATIONS  
For Daily Alerts

BSNLನಿಂದ 300 mbps ಗರಿಷ್ಠ ವೇಗದ, ಕನಿಷ್ಠ 449 ರುಪಾಯಿ ಪ್ಲಾನ್

|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ ಎಲ್) ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ಗಳನ್ನು ತರಲಿದೆ. ಅಕ್ಟೋಬರ್ 1ನೇ ತಾರೀಕಿನಿಂದ ಈ ಪ್ಲಾನ್ ಗಳು ಜಾರಿಗೆ ಬರಲಿದ್ದು, 449 ರುಪಾಯಿಗಳೊಂದಿಗೆ ಆರಂಭವಾಗಲಿದೆ. ಈಚೆಗೆ ಭಾರತ್ ಫೈಬರ್ ಪ್ಲಾನ್ ಗಳನ್ನು ಪರಿಚಯಿಸಿದ್ದು, ಸದ್ಯಕ್ಕೆ 399 ರುಪಾಯಿಯ ಪ್ಲಾನ್ ನೀಡಿರುವ ಜಿಯೋಫೈಬರ್ ಜತೆಗೆ ಸ್ಪರ್ಧಿಸಲಿದೆ.

 

BSNLನಿಂದ ತಿಂಗಳಿಗೆ 499 ರುಪಾಯಿಗೆ 100 ಜಿ.ಬಿ. ಡೇಟಾ

ಬಿಎಸ್ ಎನ್ ಎಲ್ 449, 799, 999 ಹಾಗೂ 1499 ರುಪಾಯಿಯ ನಾಲ್ಕು ಪ್ಲಾನ್ ಗಳನ್ನು ಆಯ್ದ ನಗರಗಳಲ್ಲಿ ನೀಡಲಿದೆ. ಇವುಗಳು ಪ್ರಮೋಷನಲ್ ಆಧಾರದಲ್ಲಿ ಬರಲಿವೆ. ಅಂದರೆ, ಅಕ್ಟೋಬರ್ 1ರಿಂದ 90 ದಿನಗಳ ಅವಧಿಗೆ ಇರುತ್ತದೆ. ಆ ಮೂರು ತಿಂಗಳ ನಂತರ ಪ್ಲಾನ್ ಅನ್ನು ಕೊನೆ ಮಾಡಬಹುದು ಅಥವಾ ವಿಸ್ತರಣೆ ಕೂಡ ಮಾಡಬಹುದು.

449 ರುಪಾಯಿ ಪ್ಲಾನ್ ಸೌಲಭ್ಯ ಏನು?

449 ರುಪಾಯಿ ಪ್ಲಾನ್ ಸೌಲಭ್ಯ ಏನು?

ಯಾವ ನಗರ ಅಥವಾ ಪ್ರದೇಶದಲ್ಲಿ ಪ್ರಬಲವಾದ ಪ್ರತಿಸ್ಪರ್ಧಿಗಳಿದ್ದಾರೋ ಅಂಥಲ್ಲಿ ಬಿಎಸ್ ಎನ್ ಎಲ್ ನಿಂದ ಈ ಭಾರತ್ ಫೈಬರ್ ಪ್ಲಾನ್ ಗಳನ್ನು ನೀಡಲಾಗುತ್ತದೆ. 449 ರುಪಾಯಿ ಪ್ಲಾನ್ ಅನ್ನು ಫೈಬರ್ ಬೇಸಿಕ್ ಎನ್ನಲಾಗುತ್ತದೆ. 30 mbps ವೇಗದಲ್ಲಿ 3300 ಜಿಬಿ ನೀಡಲಾಗುತ್ತದೆ. ಆ ನಂತರ ವೇಗವು 2 mbpsಗೆ ಇಳಿಯುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ಹೊರತುಪಡಿಸಿ ಇತರ ಎಲ್ಲ ವಲಯಗಳಲ್ಲಿಯೂ ಈ ಪ್ಲಾನ್ ಅನ್ನು ಆರಂಭಿಸಲಾಗುತ್ತದೆ.

3300 ಜಿಬಿ ತನಕ 100 mbps ವೇಗ

3300 ಜಿಬಿ ತನಕ 100 mbps ವೇಗ

ಎರಡನೇ ಪ್ಲಾನ್ ತಿಂಗಳಿಗೆ 799 ರುಪಾಯಿಯದು. 3300 ಜಿಬಿ ತನಕ 100 mbps ದೊರೆಯುತ್ತದೆ. ಆ ನಂತರ ವೇಗವು 2 mbpsಗೆ ಇಳಿಯುತ್ತದೆ. ಇದರ ಜತೆಗೆ ಲ್ಯಾಂಡ್ ಲೈನ್ ಉಚಿತ ಕರೆಗಳ ಸೌಲಭ್ಯ ಇದೆ. ಕಂಪೆನಿ ತಿಳಿಸಿರುವ ಪ್ರಕಾರ ಇದು ದೀರ್ಘಾವಧಿ ಪ್ಲಾನ್ ಅಲ್ಲ. ಈ ಪ್ಲಾನ್ ಗಳನ್ನು ತೆಗೆದುಕೊಂಡಲ್ಲಿ ಕನಿಷ್ಠ ಒಂದು ತಿಂಗಳು ಇಟ್ಟುಕೊಳ್ಳಲೇಬೇಕು.

ಬಿಎಸ್ ಎನ್ ಎಲ್ ನಿಂದ ಗರಿಷ್ಠ ವೇಗದ ಪ್ಲಾನ್
 

ಬಿಎಸ್ ಎನ್ ಎಲ್ ನಿಂದ ಗರಿಷ್ಠ ವೇಗದ ಪ್ಲಾನ್

ಇನ್ನು ಮೂರನೇ ಪ್ಲಾನ್ ಗೆ 999 ರುಪಾಯಿ. ಇದು ಸಂಪೂರ್ಣವಾಗಿ ಜಿಯೋ ಫೈಬರ್ ಪ್ಲಾನ್ 999ಕ್ಕೆ ಸ್ಪರ್ಧೆ ನೀಡುವ ಉದ್ದೇಶದಿಂದ ತರಲಾಗುವುದು. 3300 ಜಿಬಿ ತನಕ 200 mbps ವೇಗದಲ್ಲಿ ದೊರೆಯುತ್ತದೆ. ಆ ನಂತರ ವೇಗವು 2 mbpsಗೆ ಇಳಿಯುತ್ತದೆ. ಅನಿಯಮಿತವಾದ ಕರೆ ಸೌಲಭ್ಯವೂ ಇದೆ. 1499 ರುಪಾಯಿಯ ಪ್ಲಾನ್ ಅನ್ನು ಫೈಬರ್ ಅಲ್ಟ್ರಾ ಬ್ರಾಡ್ ಬ್ಯಾಂಡ್ ಪ್ಲಾನ್ ಎನ್ನಲಾಗುತ್ತದೆ. 300 mbps ವೇಗದಲ್ಲಿ ದೊರೆಯುತ್ತದೆ. ಇದು ಬಿಎಸ್ ಎನ್ ಎಲ್ ನಿಂದ ಒದಗಿಸುವ ಗರಿಷ್ಠ ವೇಗ. ಬಹುತೇಕ ನಗರಗಳಲ್ಲಿ ನೀಡುತ್ತಿರುವ ಗರಿಷ್ಠ ವೇಗ 200 mbps.

English summary

BSNL Will Launch Maximum Speed 300 mbps And Minimum Price 449 Broadband Plan From October 1

Government owned will launch broadband plan with 300 mbps and minimum charge of 449. Here is the various new plans of BSNL.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X