For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?

By ಅನಿಲ್ ಆಚಾರ್
|

ಕೇಂದ್ರ ಬಜೆಟ್ ದಾಖಲಾತಿಗಳ ಮುದ್ರಣ ನಡೆಯುವ ಮುಂಚೆ ಆಗುತ್ತಿದ್ದ ಹಲ್ವಾ ಕಾರ್ಯಕ್ರಮವು ಶನಿವಾರ (ಜನವರಿ 23, 2021) ನಡೆಯಲಿದೆ. ಕೇಂದ್ರ ಬಜೆಟ್ ಫೆಬ್ರವರಿ 1ನೇ ತಾರೀಕಿನಂದು ಮಂಡನೆ ಆಗುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ನಾರ್ಥ್ ಬ್ಲಾಕ್ ನಲ್ಲಿ ಹಲ್ವಾ ಕಾರ್ಯಕ್ರಮ ನಡೆಯಲಿದೆ. ಬಜೆಟ್ ಮಂಡನೆಗೆ ಮುನ್ನ ಪ್ರತಿ ವರ್ಷ ಸರ್ಕಾರದಿಂದ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗಿದೆ. ಈ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಬಜೆಟ್ ಮಂಡನೆಗೆ ಚಾಲನೆ ಸಿಕ್ಕಂತಾಗುತ್ತದೆ. ಈ ಕಾರ್ಯಕ್ರಮದ ನಂತರ, ಬಜೆಟ್ ಸಿದ್ಧತೆಯಲ್ಲಿ ತೊಡಗಿಕೊಳ್ಳುವವರು ಹತ್ತು ದಿನಗಳ ಕಾಲ ನಾರ್ಥ್ ಬ್ಲಾಕ್ ಬೇಸ್ ಮೆಂಟ್ ನಲ್ಲಿ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಲಿದ್ದಾರೆ.

 

ಬಜೆಟ್ 2021: ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾಗೆ ಮನವಿ

ಸಂಸತ್ ನಲ್ಲಿ ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರ ಆ ಸಿಬ್ಬಂದಿ ಹೊರಗೆ ಬರುತ್ತಾರೆ. ಮಂಡನೆ ಆಗುವ ಮುನ್ನ ಯಾವುದೇ ಸೋರಿಕೆ ಆಗಬಾರದು ಎಂದು ಹೀಗೆ ಮಾಡಲಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಎಂದು ಎಎನ್ ಐಗೆ ತಿಳಿಸಿದ್ದಾರೆ.

ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?

ಬಜೆಟ್ ನಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಶ್ರಮವನ್ನು ಗುರುತಿಸುವ ಉದ್ದೇಶಕ್ಕೆ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಬಜೆಟ್ ಅಧಿವೇಶನ ಜನವರಿ 29ರಂದು ಆರಂಭವಾಗಲಿದೆ. ಫೆಬ್ರವರಿ ಹದಿನೈದರ ತನಕ ನಡೆಯುತ್ತದೆ. ಎರಡನೇ ಭಾಗವು ಮಾರ್ಚ್ 8ರಿಂದ ಏಪ್ರಿಲ್ 8ರ ತನಕ ನಡೆಯುತ್ತದೆ.

English summary

Budget 2021: Halwa Ceremony On January 23, 2021

Budget 2021: Halwa ceremony on January 23, 2021. Union budget will be present on February 1st.
Story first published: Friday, January 22, 2021, 23:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X