For Quick Alerts
ALLOW NOTIFICATIONS  
For Daily Alerts

Budget 2022: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ಶೇ.30 ತೆರಿಗೆ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡಿದ್ದಾರೆ. ಈ ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಥಿಕತೆ ಬಿಕ್ಕಟ್ಟಿನಲ್ಲಿ ಇರುವ ಸಂದರ್ಭದಲ್ಲಿ ಡಿಜಿಟಲ್‌ ಅಳವಡಿಕೆಗೆ ವೇಗ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಕೈಗೊಂಡಿದೆ. ಈ ನಡುವೆ ಡಿಜಿಟಲ್‌ ವಸ್ತುಗಳ ವರ್ಗಾವಣೆ ಮೂಲಕ ಗಳಿಸಿದ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.

 

ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತುದೆ. ಇದಕ್ಕೂ ಮುನ್ನವೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

Budget 2022: ಸೆನ್ಸೆಕ್ಸ್‌ 50 ಸಾವಿರದ ಗಡಿ ದಾಟಿ ವಹಿವಾಟು ಅಂತ್ಯ

ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಯಾವುದೇ ಆದಾಯ ಹೊಂದಾಣಿಕೆಗೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

 Budget 2022: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ಶೇ.30 ತೆರಿಗೆ

"ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಯಾವುದೇ ನಷ್ಟ ಉಂಟಾದಾಗ ಇತರ ಆದಾಯದ ವಿರುದ್ಧ ಹೊಂದಿಸಲಾಗುವುದಿಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ," ಎಂದು ನಿರ್ಮಲಾ ತಿಳಿಸಿದರು.

ಈ ನಡುವೆ ಈ ಬಗ್ಗೆ EY ಇಂಡಿಯಾದ ತೆರಿಗೆ ವಿಭಾಗದ ರಾಷ್ಟ್ರೀಯ ಪ್ರಮುಖರಾದ ಸುಧೀರ್ ಕಪಾಡಿಯಾ ಪ್ರತಿಕ್ರಿಯೆ ನೀಡಿದ್ದಾರೆ. "ಯಾವುದೇ ಸ್ವತ್ತಿನ ಪಾವತಿ, ಪೇಂಟಿಂಗ್ ಅಥವಾ ಇನ್ನೊಂದು ಕ್ರಿಪ್ಟೋ ಆಸ್ತಿಯನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಮಾಡಿದರೂ, ಅದು ಸ್ವೀಕರಿಸುವವರ ಕೈಯಲ್ಲಿ ಇನ್ನೂ ಆದಾಯವಾಗಿರುತ್ತದೆ. ಕ್ರಿಪ್ಟೋಕರೆನ್ಸಿಯು ಭಾರತೀಯ ರೂಪಾಯಿಯಲ್ಲಿ ಆಧಾರವಾಗಿರುವ ಮೌಲ್ಯವನ್ನು ಹೊಂದಿರುವುದರಿಂದ, ಅದನ್ನು ಆದಾಯವಾಗಿ ತೆರಿಗೆ ವಿಧಿಸಬೇಕು," ಎಂದು ಹೇಳಿದ್ದಾರೆ.

ಡಿಜಿಟಲ್ ಕರೆನ್ಸ್‌ ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ

 

"ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ನೀಡಲಾಗುತ್ತದೆ. ಇದನ್ನು 2022-23 ರಿಂದ ಆರ್‌ಬಿಐ ಬಿಡುಗಡೆ ಮಾಡುತ್ತದೆ. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ" ಎಂದು ನಿರ್ಮಾಲಾ ಸೀತಾರಾಮನ್‌ ಹೇಳಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಬಂಡವಾಳ ವೆಚ್ಚವನ್ನು (Capital Expenditure) ಶೇ 35.4ರಷ್ಟು ಹೆಚ್ಚಿಸಲಾಗಿದೆ. ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕೆ ಈ ನಿಧಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. 2022-2023ರ ಆರ್ಥಿಕ ವರ್ಷದಲ್ಲಿ ಭಾರತ ಸರ್ಕಾರವು 10.9 ಲಕ್ಷ ಕೋಟಿ ರೂ. ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಬಳಸಲು ನಿರ್ಧರಿಸಿದೆ.

ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ. 2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್​ಡೇಟೆಡ್​ ರಿಟರ್ನ್ ಫೈಲ್ ಮಾಡಬಹುದಾಗಿದೆ. ನಾವು ರಿಟರ್ನ್ ಫೈಲ್‌ ಮಾಡಿದ ಎರಡು ವರ್ಷದೊಳಗೆ ಮಾಡಬಹುದು. ದೇಶದಲ್ಲಿ ಹೊಸ ಆದಾಯ ತೆರಿಗೆ ರಿಟರ್ನ್ಸ್ ಪರಿಚಯ ಮಾಡಲು ಕೇಂದ್ರ ತೀರ್ಮಾನಿಸಿದೆ. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.

English summary

Budget 2022: The Government Will Tax Income From Digital Asset Transfers at 30%

Budget 2022: The government will tax income from digital asset transfers at 30%.
Story first published: Tuesday, February 1, 2022, 17:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X