ಬರ್ಗರ್ ಕಿಂಗ್ ಐಪಿಒಗೆ ರೀಟೇಲ್ ಹೂಡಿಕೆದಾರರಿಂದ 13 ಪಟ್ಟು ಬೇಡಿಕೆ
ಬರ್ಗರ್ ಕಿಂಗ್ ಐಪಿಒ ಸಬ್ ಸ್ಕ್ರಿಪ್ಷನ್ ಶುರುವಾದ ಮೊದಲ ದಿನವೇ 2.6 ಪಟ್ಟು ಹೆಚ್ಚು ಬೇಡಿಕೆ ಬಂದಿದೆ. 7.45 ಕೋಟಿ ಗಾತ್ರದ ಈಕ್ವಿಟಿ ಷೇರುಗಳಿಗೆ ಐಪಿಒ ಇದಾಗಿದ್ದು, 19.23 ಕೋಟಿ ಈಕ್ವಿಟಿ ಷೇರುಗಳಿಗೆ ಬೇಡಿಕೆ ಬಂದಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ದತ್ತಾಂಶಗಳಿಂದ ತಿಳಿದುಬಂದಿದೆ.
ಡಿಸೆಂಬರ್ 2ರಿಂದ 4 ಬರ್ಗರ್ ಕಿಂಗ್ ಐಪಿಒ; ಪ್ರತಿ ಷೇರಿಗೆ 59- 60
ಇದರಲ್ಲಿ ಆಂಕರ್ ಬುಕ್ ಭಾಗವು ಹೊರತಾಗಿದೆ. ರೀಟೇಲ್ ಹೂಡಿಕೆದಾರರು ಕೂಡ ಈ ಐಪಿಒನಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದಾರೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟಿದ್ದು ಹದಿಮೂರು ಪಟ್ಟು ಹೆಚ್ಚು ಸಬ್ ಸ್ಕೈಬ್ ಆಗಿದೆ. ಎನ್ ಐಐ ಹಾಗೂ ಕ್ಯೂಐಐ ಸಬ್ ಸ್ಕ್ರಿಪ್ಷನ್ ಕ್ರಮವಾಗಿ 40 ಪರ್ಸೆಂಟ್ ಹಾಗೂ 17 ಪರ್ಸೆಂಟ್ ಸಬ್ ಸ್ಕ್ರೈಬ್ ಆಗಿದೆ.
ಈಗಿನ ಐಪಿಒದಲ್ಲಿ ಹೊಸದಾಗಿ ವಿತರಣೆ 450 ಕೋಟಿ ರುಪಾಯಿ ಕೂಡ ಒಳಗೊಂಡಿದೆ ಮತ್ತು 6 ಕೋಟಿ ಈಕ್ವಿಟಿ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕ್ಯೂಎಸ್ ಆರ್ ಏಷ್ಯಾ ಮುಂದಾಗಿದೆ. ಡಿಸೆಂಬರ್ 4ರಂದು ಐಪಿಒ ಕೊನೆ ಆಗಲಿದೆ. ಪ್ರತಿ ಷೇರಿಗೆ 59-60 ರುಪಾಯಿ ದರ ನಿಗದಿ ಮಾಡಲಾಗಿದೆ.