For Quick Alerts
ALLOW NOTIFICATIONS  
For Daily Alerts

2024ರ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುತ್ತೀಕರಣ: ಪಿಯೂಷ್ ಗೋಯೆಲ್

|

2024ರ ವೇಳೆಗೆ ಭಾರತೀಯ ರೈಲ್ವೆ ಇಲಾಖೆಯು ಸಂಪೂರ್ಣ ವಿದ್ಯುತ್ತೀಕರಣದ ಗುರಿ ಹೊಂದಿದ್ದು ಎಲ್ಲಾ ರೈಲುಗಳು ವಿದ್ಯುತ್‌ಗೆ ಬದಲಾಗುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. ಈಗಾಗಲೇ ಡೀಸೆಲ್ ಮೂಲಕ ಸಾಗುವ ರೈಲ್ವೆ ಎಂಜಿನ್‌ಗಳು ಸೇವೆಯಿಂದ ಹೊರಗುಳಿಯುತ್ತಿವೆ ಎಂದಿದ್ದಾರೆ.

''2024ರ ಹೊತ್ತಿಗೆ, ಇಡೀ ಭಾರತದ ರೈಲ್ವೆ 100 ಪರ್ಸೆಂಟ್‌ನಷ್ಟು ವಿದ್ಯುತ್ ಚಾಲನೆಯಲ್ಲಿ ಸಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಹೀಗೆ ಸಾಧ್ಯವಾದಲ್ಲಿ ವಿದ್ಯುತ್‌ಚ್ಚಕ್ತಿ ಮೂಲಕವೇ ಸಂಪೂರ್ಣವಾಗಿ ಚಲಿಸುವ ಜಗತ್ತಿನ ಮೊದಲ ರೈಲ್ವೇ ನೆಟ್‌ವರ್ಕ್ ಆಗಲಿದೆ. ಪರಿಸರದ ಜವಾಬ್ದಾರಿ ಬಗ್ಗೆ ನಮಗೆ ಜಾಗೃತಿ ಇದೆ. ನಮ್ಮ ರೈಲು ಜಾಲದ ತ್ವರಿತ ವಿದ್ಯುದೀಕರಣವನ್ನು ನಾವು ಪ್ರಾರಂಭಿಸುತ್ತಿದ್ದೇವೆ'' ಎಂದು ಭಾರತ-ಬ್ರೆಜಿಲ್‌ ಬಿಜಿನೆಸ್ ವೇದಿಕೆಯಲ್ಲಿ ಪಿಯೂಷ್ ಗೋಯೆಲ್ ಹೇಳಿದರು.

2024ರ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುತ್ತೀಕರಣ

 

ಜನವರಿ 26 ರಿಂದ 27 ರವರೆಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಅಧಿಕೃತ ಭಾರತ ಭೇಟಿಯ ಸಂದರ್ಭದಲ್ಲಿ ಈ ವೇದಿಕೆಯನ್ನು ಆಯೋಜಿಸಲಾಗಿದೆ. ಬೋಲ್ಸನಾರೊ ಮತ್ತು ಇತರ ಮಂತ್ರಿಗಳು ಈ ಸಂದರ್ಭದಲ್ಲಿ ಭಾರತೀಯ ಮತ್ತು ಬ್ರೆಜಿಲ್ ವ್ಯಾಪಾರ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

2030 ರ ವೇಳೆಗೆ ಇಡೀ ರೈಲ್ವೆ ಜಾಲವನ್ನು "ನಿವ್ವಳ ಶೂನ್ಯ ಹೊರಸೂಸುವಿಕೆಯ ಜಾಲ" ವನ್ನಾಗಿ (Net zero emission network) ಮಾಡಲು ಭಾರತ ಯೋಜಿಸುತ್ತಿದೆ ಎಂದು ಕೇಂದ್ರ ಸಚಿವರು ಇದೇ ವೇಳೆಯಲ್ಲಿ ಹೇಳಿದರು.

English summary

By 2024 Indian Railways To Run 100 Percent On Electricity

Railways Minister Piyush Goyal on Monday said that the Indian Railways is expected to switch entirely to electricity by 2024
Story first published: Monday, January 27, 2020, 18:16 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more