For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ತೆಕ್ಕೆಗೆ ಬೀಳಲಿದೆಯಾ ಟಿಕ್ ಟಾಕ್? ಬದಲಾವಣೆ ನಿರೀಕ್ಷಿಸಿ...

|

ಅಲ್ಪಾವಧಿಯ ವಿಡಿಯೋ ಮಾಡುವ ಅಪ್ಲಿಕೇಷನ್ "ಟಿಕ್ ಟಾಕ್" ಭಾರತದ ವ್ಯವಹಾರವನ್ನು ಚೀನಾ ಮೂಲದ ಭೈಟ್ ಡ್ಯಾನ್ಸ್ ನಿಂದ ರಿಲಯನ್ಸ್ ಜಿಯೋಗೆ ಮಾರಾಟ ಮಾಡಬಹುದು ಎಂಬ ಬಗ್ಗೆ ಗುರುವಾರ ವರದಿಯೊಂದು ಬಂದಿದೆ. ಈಗಿನ್ನೂ ಆರಂಭಿಕ ಹಂತದ ಚರ್ಚೆ ನಡೆದಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

 

ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸಿದ ಟಿಕ್ ಟಾಕ್

ಟೆಕ್ ಕ್ರಂಚ್ ವರದಿ ಪ್ರಕಾರ, ಈ ಎರಡೂ ಕಂಪೆನಿಗಳು ಕಳೆದ ತಿಂಗಳ (ಜುಲೈ) ಕೊನೆ ಭಾಗದಲ್ಲೇ ಮಾತುಕತೆ ಆರಂಭಿಸಿವೆ. ಆದರೆ ವ್ಯವಹಾರ ಅಂತಿಮಗೊಳ್ಳಬೇಕಿದೆ. ಟಿಕ್ ಟಾಕ್ ಭಾರತದ ವ್ಯವಹಾರದ ಮೌಲ್ಯ 300 ಕೋಟಿ ಅಮೆರಿಕನ್ ಡಾಲರ್ ಎನ್ನಲಾಗಿದೆ. ಈ ಖರೀದಿ ಅಥವಾ ಮಾರಾಟ ವ್ಯವಹಾರದ ಬಗ್ಗೆ ಬೈಟ್ ಡ್ಯಾನ್ಸ್ ಆಗಲೀ ರಿಲಯನ್ಸ್ ಜಿಯೋ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೈಟ್ ಡ್ಯಾನ್ಸ್ ಗೆ 2 ಸಾವಿರದಷ್ಟು ಸಿಬ್ಬಂದಿ

ಬೈಟ್ ಡ್ಯಾನ್ಸ್ ಗೆ 2 ಸಾವಿರದಷ್ಟು ಸಿಬ್ಬಂದಿ

ಟಿಕ್ ಟಾಕ್ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಹಲವು ಸಿಬ್ಬಂದಿ ಹೊರಗೆ ಅವಕಾಶಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಭಾರತದಲ್ಲಿ ಟಿಕ್ ಟಾಕ್ ಅಪ್ಲಿಕೇಷನ್ ನಿಷೇಧಿಸಿರುವುದರಿಂದ ಈ ಪ್ಲಾಟ್ ಫಾರ್ಮ್ ಭವಿಷ್ಯ ಅನಿಶ್ಚಿತತೆಯಲ್ಲಿ ಇದೆ. ಆ ಹಿನ್ನೆಲೆಯಲ್ಲಿ ಸಿಬ್ಬಂದಿ ಇಂಥ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಬೈಟ್ ಡ್ಯಾನ್ಸ್ ಕಂಪೆನಿಗೆ ಭಾರತದಲ್ಲಿ 2 ಸಾವಿರದಷ್ಟು ಸಿಬ್ಬಂದಿ ಇದ್ದಾರೆ. ಸದ್ಯಕ್ಕೆ ಕಂಪೆನಿಯಿಂದ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರವು ಟಿಕ್ ಟಾಕ್ ಸೇರಿದಂತೆ ಇತರ 58 ಅಪ್ಲಿಕೇಷನ್ ಗಳನ್ನು ನಿಷೇಧಿಸಿದೆ. ಬೈಟ್ ಡ್ಯಾನ್ಸ್ ಸಿಇಒ ಹಾಗೂ ಸಿಒಒ ಆದ ಕೆವಿನ್ ಮೆಯರ್ ಮಾತನಾಡಿ, ಬೈಟ್ ಡ್ಯಾನ್ಸ್ ನ ಅತಿದೊಡ್ಡ ಶಕ್ತಿ ಅಂದರೆ ಉದ್ಯೋಗಿಗಳು ಮತ್ತು ಅವರ ಹಿತವೇ ನಮ್ಮ ಪ್ರಮುಖ ಆದ್ಯತೆ ಎಂದಿದ್ದಾರೆ.

ಜಾಗತಿಕ ವ್ಯವಹಾರ ಖರೀದಿಸಲು ಮೈಕ್ರೋಸಾಫ್ಟ್ ಆಸಕ್ತಿ
 

ಜಾಗತಿಕ ವ್ಯವಹಾರ ಖರೀದಿಸಲು ಮೈಕ್ರೋಸಾಫ್ಟ್ ಆಸಕ್ತಿ

ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂಬ ಅವರ ಭರವಸೆಯ ಮಾತುಗಳು ಉದ್ಯೋಗಿಗಳಲ್ಲಿ ನೆಮ್ಮದಿಯನ್ನು ತರುತ್ತಿಲ್ಲ. ಇನ್ನು ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದಲೂ ಟಿಕ್ ಟಾಕ್ ನಿಷೇಧದ ಮಾತು ಬಂದ ಮೇಲೆ ಆತಂಕ ಮತ್ತೂ ಹೆಚ್ಚಾಗಿದೆ. ಈ ಮಧ್ಯೆ ಯು.ಎಸ್., ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಟಿಕ್ ಟಾಕ್ ಖರೀದಿಸುವುದಾಗಿ ಮೈಕ್ರೋಸಾಫ್ಟ್ ಹೇಳಿದೆ. ಅದಕ್ಕೆ ಸೆಪ್ಟೆಂಬರ್ ಮಧ್ಯಭಾಗದ ಸಮಯ ಕೂಡ ಹೇಳಿದೆ. ಅದೇ ಸಮಯದ ಗಡುವನ್ನು ಟಿಕ್ ಟಾಕ್ ನಿಷೇಧಕ್ಕೆ ಡೊನಾಲ್ಡ್ ಟ್ರಂಪ್ ಕೂಡ ಇಟ್ಟುಕೊಂಡಿದ್ದಾರೆ. ಮತ್ತೊಂದು ವರದಿ ಪ್ರಕಾರ, ಭಾರತ ಹಾಗೂ ಯುರೋಪ್ ಸೇರಿದಂತೆ ಟಿಕ್ ಟಾಕ್ ನ ಜಾಗತಿಕ ವ್ಯವಹಾರವನ್ನೇ ಖರೀದಿಸಲು ಮ್ಮೈಕ್ರೋಸಾಫ್ಟ್ ಆಲೋಚಿಸುತ್ತಿದೆ.

ಭಾರತದ ಸ್ಟಾರ್ಟ್ ಅಪ್ ಗಳಿಗೆ ಅನುಕೂಲ

ಭಾರತದ ಸ್ಟಾರ್ಟ್ ಅಪ್ ಗಳಿಗೆ ಅನುಕೂಲ

ಇತ್ತ ಚೀನಾದೊಂದಿಗೆ ಗಡಿ ವ್ಯಾಜ್ಯದ ಕಾರಣಕ್ಕೆ ಭಾರತದಲ್ಲಿ ಸಿಟ್ಟಿದ್ದು, ಇಂಥ ಸಮಯದಲ್ಲಿ ಚೀನಾ ಕಂಪೆನಿಗಳಿಗೆ ಅನಿಶ್ಚಿತತೆ ಕಾಡುವುದು ಸಹಜ. ಇನ್ನು ಟಿಕ್ ಟಾಕ್ ನಿಷೇಧದಿಂದ ಭಾರತದ ಸ್ಟಾರ್ಟ್ ಅಪ್ ಗಳಿಗೆ ಲಾಭ ಆಗುವ ಕುರಿತು ಚರ್ಚೆ ಚಾಲ್ತಿಯಲ್ಲಿದೆ. ಏಕೆಂದರೆ ಟಿಕ್ ಟಾಕ್ ಅಪ್ಲಿಕೇಷನ್ ನಿಷೇಧದಿಂದ ಖಾಲಿಯಾದ ಸ್ಥಾನವನ್ನು ಭಾರತದ ಸ್ಟಾರ್ಟ್ ಅಪ್ ಗಳು ತುಂಬಬಬಹುದು. ಟಿಕ್ ಟಾಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯು ಪ್ರತಿಸ್ಪರ್ಧಿ ಕಂಪೆನಿಗಳಾದ ಚಿಂಗಾರಿ, ಟ್ರೆಲ್, ಬೋಲೋ ಇಂಡ್ಯಾ ಮತ್ತು ಶೇರ್ ಚಾಟ್ ಸೇರಿದಂತೆ ಇತರೆಡೆಗಳಲ್ಲಿ ಉದ್ಯೋಗಾವಕಾಶಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳಾಗಿವೆ.

English summary

ByteDance Likely To Sell TikTok India Business To Reliance Jio, Says Report

According to report, China based ByteDance likely to sell TikTok India business to Reliance Jio. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X