For Quick Alerts
ALLOW NOTIFICATIONS  
For Daily Alerts

2022ಕ್ಕೆ ಷೇರುಪೇಟೆ ಪ್ರವೇಶಿಸಲಿದೆ ಎಲ್‌ಐಸಿ: ಕ್ಯಾಬಿನೆಟ್ ತಾತ್ವಿಕ ಒಪ್ಪಿಗೆ?

|

ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಯನ್ನು ಷೇರುಪೇಟೆ ವಹಿವಾಟಿನ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

 

LIC ಹೊಸ ಯೋಜನೆ: ಒಂದು ಬಾರಿ ಹಣ ಪಾವತಿ, ತಕ್ಷಣವೇ ಪಿಂಚಣಿ ಸೌಲಭ್ಯ

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿಯ ಐಪಿಒ ತರುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಎಲ್‌ಐಸಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರತಿ ಷೇರಿಗೆ 400 ರಿಂದ 600 ರೂ.ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಎಲ್‌ಐಸಿ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಮಾಡುವ ಮೂಲಕ 1.75 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಸರ್ಕಾರದ ಪ್ರಯತ್ನಗಳ ಒಂದು ಭಾಗವಾಗಿದೆ. ಮಾರ್ಚ್ 2022 ರಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದೊಳಗೆ ಎಲ್‌ಐಸಿ ಐಪಿಒ ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

2022ಕ್ಕೆ ಷೇರುಪೇಟೆ ಪ್ರವೇಶಿಸಲಿದೆ ಎಲ್‌ಐಸಿ

ಎಲ್ಐಸಿ ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿದ್ದು, ಇದು 77.61 ಪರ್ಸೆಂಟ್‌ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇದು ಒಟ್ಟು ಪ್ರೀಮಿಯಂ ಆದಾಯದ 70 ಪರ್ಸೆಂಟ್‌ಕ್ಕಿಂತ ಹೆಚ್ಚು. ಬಂಡವಾಳದ ಮೂಲವನ್ನು ಈಗಿರುವ 100 ಕೋಟಿ ರೂ.ಗಳಿಂದ 25 ಸಾವಿರ ಕೋಟಿಗೆ ಹೆಚ್ಚಿಸಲು ಸರ್ಕಾರ ಈಗಾಗಲೇ ಪ್ರಸ್ತಾಪಿಸಿದೆ. 25,000 ಕೋಟಿ ರೂ. ಪ್ರಸ್ತುತ ಕಡಿಮೆ ಬಂಡವಾಳದ ಆಧಾರದಲ್ಲಿ ಪಟ್ಟಿ ಮಾಡಲು ಅನುಕೂಲವಾಗುವಂತೆ ಐಪಿಒ ಬೆಲೆ ನಿಗದಿಪಡಿಸಲಿದ್ದು, ಪ್ರತಿ ಷೇರಿನ ಆಧಾರದ ಮೇಲೆ ಬಂಡವಾಳ ನಿಗದಿಯಾಗುತ್ತದೆ.

ಕೇಂದ್ರ ಸರ್ಕಾರ ಎಲ್ ಐಸಿಯಲ್ಲಿ ಶೇಕಡಾ 100ರಷ್ಟು ಷೇರುಗಳನ್ನು ಹೊಂದಿದ್ದು, ಅದರ ಒಂದು ಭಾಗವನ್ನು ಪ್ರಕ್ರಿಯೆಗೆ ಮಾರಾಟ ಮಾಡಲು ಯೋಜಿಸಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎಲ್‌ಐಸಿ ಐಪಿಒಗೆ ದಾರಿ ಮಾಡಿಕೊಡಲು ಜೀವ ವಿಮಾ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ತಂದಿದ್ದರು.

English summary

Cabinet Clears LIC IPO, Issue By March 2022

The Cabinet Committee on Economic Affairs (CCEA) has given its in-principle approval for the listing of Life Insurance Corporation of India (LIC)’s shares on stock exchanges
Story first published: Tuesday, July 13, 2021, 12:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X