For Quick Alerts
ALLOW NOTIFICATIONS  
For Daily Alerts

ಎಂಸಿಎಲ್‌ಆರ್‌: ಕೆನರಾ ಬ್ಯಾಂಕ್‌ ಗ್ರಾಹಕರೇ ಗಮನಿಸಿ..

|

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಆಗಿರುವ ಕೆನರಾ ಬ್ಯಾಂಕ್ ತನ್ನ ಸಾಲಗಳು / ಮುಂಗಡಗಳ ಮೇಲಿನ ಫಂಡ್ ಆಧಾರಿತ ಸಾಲದ ದರವನ್ನು ಅಂದರೆ ಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌ (ಎಂಸಿಎಲ್‌ಆರ್‌) ಅನ್ನು ಸ್ಥಿರವಾಗಿ ಉಳಿಸಿಕೊಂಡಿದೆ.

 

ಈ ಬಗ್ಗೆ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದೆ. ತನ್ನ ಸಾಲಗಳು / ಮುಂಗಡಗಳ ಮೇಲಿನ ಫಂಡ್ ಆಧಾರಿತ ಸಾಲದ ದರವನ್ನು (ಎಂಸಿಎಲ್‌ಆರ್‌) ಅನ್ನು ಸ್ಥಿರವಾಗಿ ಉಳಿಸಿಕೊಳ್ಳಲಾಗುತ್ತದೆ ಎಂದು ಕೆನರಾ ಬ್ಯಾಂಕ್‌ ಪತ್ರಿಕಾ ಹೇಳಿಕೆಯ ಮೂಲಕ ಮಾಹಿತಿ ನೀಡಿದೆ.

ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ

ಇನ್ನು ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್‌) ಈ ಹಿಂದೆ ಇದ್ದಷ್ಟೇ ಮುಂದುವರಿಯುತ್ತಿದೆ. ಕೆನರಾ ಬ್ಯಾಂಕಿನ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್‌) ಶೇಕಡ 6.90 ರಷ್ಟು ಆಗಿದೆ ಎಂದು ಹೇಳಿದೆ.

ಎಂಸಿಎಲ್‌ಆರ್‌: ಕೆನರಾ ಬ್ಯಾಂಕ್‌ ಗ್ರಾಹಕರೇ ಗಮನಿಸಿ..

ಈ ಹಿಂದೆ ಒಂದು ದಿನದ ಎಂಸಿಎಲ್‌ಆರ್‌ ಶೇಕಡ 6.55 ಆಗಿತ್ತು, ಒಂದು ತಿಂಗಳ ಎಂಸಿಎಲ್‌ಆರ್‌ ಶೇಕಡ 6.55 ಆಗಿತ್ತು. ಹಾಗೆಯೇ ಮೂರು ತಿಂಗಳುಗಳ ಎಂಸಿಆರ್‌ಎಲ್‌ ಶೇಕಡ 6.85 ಆಗಿತ್ತು. ಆರು ತಿಂಗಳ ಎಂಸಿಎಲ್‌ಆರ್‌ ಶೇಕಡ 7.20 ಆಗಿತ್ತು. ಒಂದು ವರ್ಷದ ಎಂಸಿಎಲ್‌ಆರ್‌ ಶೇಕಡ 7.25 ಆಗಿತ್ತು.

ಈ ಎಂಸಿಎಲ್‌ಆರ್‌ ಬಗ್ಗೆ ಪ್ರಮುಖ ಪ್ರಕಟಣೆಯನ್ನು ನೀಡಿರುವ ಕೆನರಾ ಬ್ಯಾಂಕ್‌ ಎಂಸಿಆರ್‌ಎಲ್‌ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ತಿಳಿಸಿದೆ. ಅಂದರೆ ನವೆಂಬರ್‌ 7 ರಿಂದ ಜಾರಿಗೆ ಬರುವಂತೆ ಎಂಸಿಎಲ್‌ಆರ್‌ ಈ ಹಿಂದಿನಂತೆ ಒಂದು ದಿನಕ್ಕೆ ಶೇಕಡ 6.55, ಒಂದು ತಿಂಗಳಿಗೆ ಶೇಕಡ 6.55, ಮೂರು ತಿಂಗಳುಗಳ ಅವಧಿಗೆ ಶೇಕಡ 6.85, ಆರು ತಿಂಗಳ ಅವಧಿಗೆ ಶೇಕಡ 7.20, ಒಂದು ವರ್ಷದ ಅವಧಿಗೆ ಶೇಕಡ 7.25 ಆಗಿರಲಿದೆ.

ನವೆಂಬರ್‌ 7 ರಂದು ಕೂಡಾ ಏರಿಕೆಯಾಗಿಲ್ಲ ಪೆಟ್ರೋಲ್‌, ಡೀಸೆಲ್‌ ದರ

ಏನಿದು ರೆಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌ ಅಥವಾ ಎಂಸಿಎಲ್‌ಆರ್‌?

ಮಾರ್ಜಿನಲ್‌ ಕಾಸ್ಟ್‌ ಲೆಂಡಿಂಗ್‌ ರೇಟ್‌ ಅಥವಾ ಎಂಸಿಎಲ್‌ಆರ್‌ ಎಂದರೆ ಬಡ್ಡಿ ದರವನ್ನು ಲೆಕ್ಕಾಚಾರ ಮಾಡುವ ಒಂದು ಹೊಸ ವಿಧಾನವಾಗಿದೆ. ಭಾರತದಲ್ಲಿ 2016 ರಲ್ಲಿ ಎಂಸಿಎಲ್‌ಆರ್‌ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಆರಂಭ ಮಾಡಿದೆ. ಎಲ್ಲಾ ಬ್ಯಾಂಕುಗಳು ಈ ನಿಯಮವನ್ನು ಪಾಲನೆ ಮಾಡಬೇಕು ಎಂದು ಆರ್‌ಬಿಐ ಸೂಚನೆ ನೀಡಿದೆ. ಈ ಎಂಸಿಆರ್‌ಎಲ್‌ ವ್ಯವಸ್ಥೆಯು ಆರ್‌ಬಿಐ ನೀತಿಯಿಂದ ಆಗುವ ಬಡ್ಡಿ ಇಳಿಕೆಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಲು ನೆರವಾಗಿದೆ.

ಈ ಹಿಂದೆ ಲ್ಲಾ ಬ್ಯಾಂಖುಗಳು ತಮ್ಮ ಬೇಸ್‌ ರೇಟ್‌ ಆಧಾರದ ಮೇಲೆ ಬಡ್ಡಿ ದರವನ್ನು ನಿಗದಿ ಮಾಡುತ್ತಿದ್ದವು. ಹಾಗೆಯೇ ಬೇಸ್‌ ಆಧಾರ ಮತ್ತು ಸಾಲದ ಮೊತ್ತದ ಮೇಲೆ ಒಂದಿಷ್ಟು ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಬಡ್ಡಿ ಲೆಕ್ಕ ಹಾಕಲಾಗುತ್ತಿತ್ತು.

 

ನವೆಂಬರ್‌ 7 ರ ಚಿನ್ನ, ಬೆಳ್ಳಿಯ ದರದ ಬಗ್ಗೆ ಇಲ್ಲಿದೆ ಮಾಹಿತಿ

ಈ ಲಾಭದ ಲೆಕ್ಕಾಚಾರ ಮಾಡುವ ಸಂದರ್ಭದಲ್ಲಿ ಹಲವಾರು ಅಂಶಗಳು ಒಳಗೊಳ್ಳಲಿದೆ. ಇದರಲ್ಲಿ ಗ್ರಾಹಕನ ಮರು ಪಾವತಿಯ ರಿಸ್ಕ್‌ ಅಂಶವು ಕೂಡ ಒಳಗೊಂಡಿರುತ್ತದೆ. ಉದಾಹರಣೆಗೆ ಹೇಳುವುದಾದರೆ ಬೇಸ್‌ ರೇಟ್‌ ವಾರ್ಷಿಕ ಶೇಕಡ 9 ಎಂದಾದರೆ, ಬಡ್ಡಿ ದರವು ಸಾಮಾನ್ಯವಾಗಿ ಶೇಕಡ 9.25 ರಷ್ಟು ಇರುತ್ತದೆ. ಈ ಎಂಸಿಆರ್‌ಎಲ್‌ ವ್ಯವಸ್ಥೆಯು ಆರ್‌ಬಿಐ ನೀತಿಯಿಂದ ಆಗುವ ಬಡ್ಡಿ ಇಳಿಕೆಯ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಲು ನೆರವಾಗಿದೆ. ಅಂದರೆ ಒಂದು ವೇಳೆ ಠೇವಣಿಯ ಬಡ್ಡಿ ದರವನ್ನು ಬ್ಯಾಂಕು ಕಡಿಮೆ ಮಾಡಿದರೆ, ಆಗ ಸಾಮನ್ಯವಾಗಿಯೇ ಬ್ಯಾಂಕುಗಳ ವೆಚ್ಚವು ಕಡಿಮೆ ಆಗುತ್ತದೆ. ಈ ಹಿನ್ನೆಲೆಯಿಂದಾಗಿ ಸಾಲದ ಮೇಲಿನ ಬಡ್ಡಿದರವನ್ನೂ ಕೂಡಾ ಇಳಿಕೆ ಮಾಡಬೇಕಾಗುತ್ತದೆ.

English summary

Canara Bank retains Interest rates on loans/advances with effect from 07.11.2021

Canara Bank retains Interest rates on loans/advances with effect from November 7, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X