For Quick Alerts
ALLOW NOTIFICATIONS  
For Daily Alerts

ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!, ಕಾರಣವೇನು?

|

ಈ ದೀಪಾವಳಿ ಸಂದರ್ಭದಲ್ಲಿ ಹಬ್ಬದ ಆಫರ್‌ನಲ್ಲಿ ಹಲವಾರು ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನೀವು ಹೊಸ ಕಾರು ಅಥವಾ ಹೊಸ ಮೊಬೈಲ್‌ ಫೋನ್‌ ಖರೀದಿ ಮಾಡಬೇಕು ಎಂದು ಯೋಚನೆ ಮಾಡಿದ್ದೀರಾ?. ಹಾಗಾದರೆ ನಿಮಗೊಂದು ಕಹಿ ಸುದ್ದಿ ಇಲ್ಲಿದೆ.

 

ಈ ಹಬ್ಬದ ಸಂದರ್ಭದಲ್ಲೂ ಕಾರು ಹಾಗೂ ಮೊಬೈಲ್‌ ಫೋನ್‌ಗಳ ಬೆಲೆಯು ದುಬಾರಿಯಾಗಲಿದೆ. ಘಟಕಗಳ ಕೊರತೆಯ ಕಾರಣದಿಂದಾಗಿ ಕಾರುಗಳು ಈ ಹಬ್ಬದ ಸಂದರ್ಭದಲ್ಲಿ ದುಬಾರಿಯಾಗಿದ್ದು, ಈ ನಡುವೆ ಚಿಪ್‌ಗಳ ಕೊರತೆಯ ಕಾರಣದಿಂದಾಗಿ ಈ ಹಬ್ಬದ ಸಂದರ್ಭದಲ್ಲಿ ಮೊಬೈಲ್‌ ಫೋನ್‌ಗಳು ದುಬಾರಿ ಆಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಿನಿ ಕೂಪರ್‌ ಎಸ್‌ಇ ಎಲೆಕ್ಟ್ರಿಕ್ ಕಾರು ಶೀಘ್ರ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

ಹಬ್ಬದ ಸಂದರ್ಭದಲ್ಲಿ ಹಲವಾರು ಮಂದಿ ಮನೆಗೆ ಬೇಕಾದ ವಾಷಿಂಗ್‌ ಮೆಷಿನ್‌, ಫ್ರಿಡ್ಜ್‌, ಮಿಕ್ಸಿ ಮೊದಲಾದ ಅಗತ್ಯ ಸಾಮಾಗ್ರಿಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಈ ಶುಭ ಸಂದರ್ಭದಲ್ಲಿ, ಹಬ್ಬದ ಆಫರ್‌ ಹಿನ್ನೆಲೆ ಕಾರು ಖರೀದಿ ಮಾಡುವವರು ಅಧಿಕ ಮಂದಿ ಇದ್ದಾರೆ. ಹಾಗೆಯೇ ಮೊಬೈಲ್‌ ಫೋನ್‌ಗಳನ್ನು ಕೂಡಾ ಖರೀದಿ ಮಾಡಲು ಹಬ್ಬದ ಸೀಸನ್‌ಗಾಗಿ ಕಾಯುವವರು ಇದ್ದಾರೆ. ಅವರೆಲ್ಲರಿಗೆ ಈ ಬೆಲೆ ಏರಿಕೆಯು ಬೇಸರವನ್ನು ಉಂಟು ಮಾಡಿರುವುದಂತು ಸತ್ಯ. ಹಾಗಾದರೆ ಈ ಬೆಲೆ ಏರಿಕೆ ನಿರ್ದಿಷ್ಟವಾಗಿ ಯಾವ ಕಾರಣದಿಂದಾಗಿ ಆಗಿದೆ ಎಂದು ತಿಳಿಯಲು ಮುಂದೆ ಓದಿ.

ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!

ಸ್ಮಾರ್ಟ್ ಫೋನ್‌ಗಳ ಬೆಲೆ ಹೆಚ್ಚಳವಾಗಲು ಕಾರಣವೇನು?

ಇ-ಕಾಮರ್ಸ್ ವೇದಿಕೆಯಲ್ಲಿ ಕ್ಯಾಷ್‌ಬ್ಯಾಕ್‌ ಹಾಗೂ ಬೇರೆ ಆಫರ್‌ಗಳನ್ನು ನೀಡುತ್ತಿದ್ದರೂ ಕೂಡಾ ಜನಪ್ರಿಯ ಸ್ಮಾರ್ಟ್ ಫೋನ್‌ಗಳ ಬೆಲೆಯು ಏರಿಕೆ ಆಗುತ್ತಲೇ ಇದೆ. ಸಾಮಾನ್ಯವಾಗಿ ಜನಪ್ರಿಯ ಮೊಬೈಲ್‌ ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಹೊಸ ಮಾಡಲ್‌ ಸ್ಮಾರ್ಟ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಟ್ರೆಂಡ್‌ ಮಿಸ್‌ ಆಗಿದೆ. ಸ್ಮಾರ್ಟ್ ಫೋನ್‌ ಉತ್ಪಾದಕರು ತಮ್ಮ ಈ ಹಿಂದಿನ ಮಾಡಲ್‌ ಅನ್ನೇ ಬೆಲೆ ಏರಿಕೆ ಮಾಡಿ ಮತ್ತೆ ಬಿಡುಗಡೆ ಮಾಡುತ್ತಿದ್ದಾರೆ. ಹಲವಾರು ಸ್ಮಾರ್ಟ್ ಫೋನ್‌ ಉತ್ಪಾದಕರು ತಮ್ಮ ಸ್ಮಾರ್ಟ್ ಫೋನ್‌ನ ಬೆಲೆಯನ್ನು 500 ರಿಂದ 1,500 ರೂಪಾಯಿವರೆಗೆ ಏರಿಕೆ ಮಾಡಿದ್ದಾರೆ.

 

ಮೊಬೈಲ್‌ ರೀಚಾರ್ಜ್‌ಗೆ ಫೋನ್‌ ಪೇ ವಿಧಿಸುತ್ತೆ ಶುಲ್ಕ, ಎಷ್ಟು?

ಇದಕ್ಕೆ ಮುಖ್ಯ ಕಾರಣ ಘಟಕಗಳ ಕೊರತೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದು 2022 ರ ದ್ವಿತೀಯಾರ್ಧದವರೆಗೆ ಮುಂದುವರಿಯುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಇನ್ನು ಈ ಸಂದರ್ಭದಲ್ಲೇ ಕಡಿಮೆ ಮಟ್ಟದ ಮೊಬೈಲ್‌ ಫೋನ್‌ಗಳಿಗೆ ಸಂಬಂಧಿಸಿದ ಪೂರೈಕೆ ಸಮಸ್ಯೆಯಿಂದಾಗಿ ಮಾರಾಟಗಾರರು ಕಷ್ಟಪಡುತ್ತಿದ್ದರಿಂದ ಪರಿಸ್ಥಿತಿಯು ಹದಗೆಟ್ಟಿದೆ. ಈ ವರ್ಷದ ಜುಲೈನಲ್ಲಿ ಪೂರೈಕೆ ಸಮಸ್ಯೆಯಿಂದಾಗಿ ಕಂಪನಿಯ ಪ್ರಮುಖ ಉತ್ಪನ್ನಗಳಾದ ಐಫೋನ್ ಮತ್ತು ಐಪ್ಯಾಡ್ ಮಾರಾಟಕ್ಕೆ ತೊಂದರೆ ಉಂಟಾಗಲಿದೆ ಎಂದು ಆಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಿಮ್ ಕುಕ್ ಎಚ್ಚರಿಕೆ ನೀಡಿದ್ದರು. ಇನ್ನು ಆಪಲ್‌ನ ಆನ್‌ಲೈನ್‌ ಸ್ಟೋರ್‌ ವಿತರಣಾ ವಿಳಂಬವನ್ನು ಒಂದು ವಾರದಿಂದ ಒಂದು ತಿಂಗಳವರೆಗೆ ತೋರಿಸುತ್ತದೆ. ಅದರಲ್ಲೂ ಐಫೋನ್‌ 13 ಪ್ರೋ ಹಾಗೂ 13 ಪ್ರೋ ಮಾಕ್ಸ್‌ ಬೇಕಾದರೆ ಇನ್ನೂ ಅಧಿಕ ಕಾಲ ಕಾಯವಬೇಕಾಗುತ್ತದೆ.

ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!

ಕಾರಿನ ಬೆಲೆ ಏರಿಕೆ ಆಗಿದ್ದು ಯಾಕೆ?

ಸ್ಮಾರ್ಟ್ ಫೋನ್‌ ಬೆಲೆಯಂತೆಯೇ ಕಾರುಗಳ ಬೆಲೆಯು ಕೂಡಾ ಈ ದೀಪಾವಳಿ ಹಬ್ಬದ ನಡುವೆ ಏರಿಕೆ ಆಗಿದೆ. ಚಿಪ್‌ಗಳ ಕೊರತೆಯು ಈ ದೀಪಾವಳಿ ಹಬ್ಬದ ನಡುವೆಯು ಕಾರುಗಳ ಬೆಲೆ ಏರಿಕೆ ಆಗಲು ಕಾರಣ ಎಂದು ಮಾಧ್ಯಮಗಳ ವರದಿಯು ಹೇಳಿದೆ. ದೇಶದ ಪ್ರಮುಖ ಕಾರು ತಯಾರಕ ಸಂಸ್ಥೆಗಳು ಕಾರಿನ ಬೆಲೆಯನ್ನು ಏರಿಕೆ ಮಾಡಿದೆ. ಇನ್ನು ಕಾರುಗಳ ಬೆಲೆ ಏರಿಕೆ ಮಾತ್ರವಲ್ಲದೇ ಕಾರನ್ನು ಸರಬರಾಜು ಮಾಡುವುದರಲ್ಲೂ ವಿಳಂಬ ಆಗುತ್ತಿದೆ. ಮಹೀಂದ್ರಾ, ಮಾರುತಿ ಸುಜೂಕಿ ಹಾಗೂ ಹೋಂಡಾ ಕಾರು ಖರೀದಿ ಮಾಡಲು ಬಯಸುವ ಗ್ರಾಹಕರು ತಮಗೆ ಕೀ ದೊರೆಯಲು 4-6 ತಿಂಗಳುಗಳ ಕಾಲ ಕಾಯಬೇಕಾಗುತ್ತದೆ.

English summary

Cars & Mobile Phones Get Costly Ahead of Diwali, Here's the Reason Why

Cars & Mobile Phones Get Costly Ahead of Diwali, Here's Reason.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X