For Quick Alerts
ALLOW NOTIFICATIONS  
For Daily Alerts

ಸಾರಿಗೆ ಸಚಿವಾಲಯದ ಈ ನಿರ್ಧಾರದಿಂದ ಇನ್ಮುಂದೆ ಕಾರು ದುಬಾರಿ..

|

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳ ಚಾಲಕರು ಕೂರುವ ಸೀಟು ಹಾಗೂ ಚಾಲಕರ ಸಮೀಪದಲ್ಲಿ ಕೂರುವ ಸೀಟಿನಲ್ಲಿ ಏರ್‌ಬ್ಯಾಗ್‌ಗಳು ಇರಬೇಕು ಎಂದು ಸಾರಿಗೆ ಸಚಿವಾಲಯ ಹೇಳಿದೆ. ಈಗ ಎಲ್ಲಾ ವಾಹನಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕೆಲಸವನ್ನು ಮಾಡಲು ಸರ್ಕಾರವು ಮುಂದಾಗಿದೆ. ಕಳೆದ ವರ್ಷ, ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಕಾರುಗಳನ್ನು ಮಧ್ಯಮ ವರ್ಗದ ಕುಟುಂಬಗಳು ಖರೀದಿಸುವುದರಿಂದ ಸಣ್ಣ ಮತ್ತು ಕೈಗೆಟುಕುವ ಕಾರುಗಳು ಸಾಕಷ್ಟು ಸಂಖ್ಯೆಯ ಏರ್‌ಬ್ಯಾಗ್‌ಗಳನ್ನು ಹೊಂದಿರಬೇಕು ಎಂದು ಆದೇಶ ನೀಡಿದ್ದರು.

 

ನಾಲ್ಕು ಏರ್‌ಬ್ಯಾಗ್‌ಗಳು ವಾಹನಗಳ ಬೆಲೆಯನ್ನು 8,000 ರಿಂದ 9,000 ರೂ.ಗಳಷ್ಟು ಹೆಚ್ಚಿಸುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾದ ಮೂಲಗಳು ತಿಳಿಸಿವೆ. ಈ ವೆಚ್ಚವು ಏರ್‌ಬ್ಯಾಗ್‌ಗಳು ಹಾಗೂ ಆ ಏರ್‌ಬ್ಯಾಗ್‌ ಅನ್ನು ಅಳವಡಿಕೆ ಮಾಡಲು ಆಟೋಮೊಬೈಲ್ ತಯಾರಕರು ಕಾರಿನಲ್ಲಿ ಮಾಡಬೇಕಾದ ಮಾರ್ಪಾಡುಗಳನ್ನು ಸೇರಿದೆ. ಆದಾಗ್ಯೂ, ಇದು ವಾಹನಗಳ ಸುರಕ್ಷತೆಯ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ದೀಪಾವಳಿ ನಡುವೆ ಕಾರು, ಮೊಬೈಲ್‌ ಫೋನ್‌ ದುಬಾರಿ!, ಕಾರಣವೇನು?

ಒಂದು ಏರ್‌ಬ್ಯಾಗ್‌ನ ಬೆಲೆ ಸುಮಾರು ರೂ. 1,800 ಆಗಿದ್ದು, ಹೆಚ್ಚಿನ ಬದಲಾವಣೆಗೆ ಸುಮಾರು ರೂ. 400 ರಿಂದ ರೂ. 500 ತಗುಲುತ್ತದೆ. ಆದಾಗ್ಯೂ, ಹೆಚ್ಚು ವಾಹನಗಳಿಗೆ ಬದಲಾವಣೆಗಳನ್ನು ಮಾಡಲಾಗುವ ಕಾರಣದಿಂದಾಗಿ ಹಾಗೂ ಕಾರುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಕಾರಣದಿಂದಾಗಿ ಈ ವೆಚ್ಚವು ಕಡಿಮೆ ಆಗಲಿದೆ.

ಸಾರಿಗೆ ಸಚಿವಾಲಯದ ಈ ನಿರ್ಧಾರದಿಂದ ಇನ್ಮುಂದೆ ಕಾರು ದುಬಾರಿ..

ಸಾರಿಗೆ ಸಚಿವಾಲಯವು 6 ಏರ್‌ಬ್ಯಾಗ್‌ಗಳನ್ನು ಅಳವಡಿಕೆ ಮಾಡಲು ಹೇಳಿರುವುದು ಆಶ್ಚರ್ಯಕರವಾಗಿದೆ. ಆದರೆ ನಮ್ಮ ದೇಶದಲ್ಲಿ, ಹೆಚ್ಚಿನ ಹಿಂಬದಿ ಪ್ರಯಾಣಿಕರು ಇನ್ನೂ ಸೀಟ್‌ಬೆಲ್ಟ್‌ಗಳನ್ನು ಕೂಡಾ ಧರಿಸುವುದಿಲ್ಲ. ಈ ಹಿಂದೆ ಮಾತನಾಡಿದ ನಿತಿನ್‌ ಗಡ್ಕರಿ ಕಾರುಗಳಿಗೆ ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಸೇರಿಸಿದರೆ ಕಾರಿನ ಬೆಲೆಯಲ್ಲಿ ಸುಮಾರು 3,000 ರೂಪಾಯಿಯಿಂದ 4,000 ರೂಪಾಯಿ ಏರಿಕೆ ಆಗಬಹುದು ಎಂದು ತಿಳಿಸಿದ್ದಾರೆ. ಆದರೆ ಕಾರಿನ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖ ಮಾಡಿದೆ.

 

ಸ್ಕೋಡಾ ಆಟೋ ತನ್ನ ಮಧ್ಯಮ ಗಾತ್ರದ SUV ಯ ಹೊಸ ಮಾಡಲ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ 6 ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಕೂಡಾ ಇದೆ. ಡ್ಯುಯಲ್ ಏರ್‌ಬ್ಯಾಗ್‌ಗಳೊಂದಿಗಿನ ಈ ಹೊಸ ಕಾರಿನಲ್ಲಿ ಈ ಏರ್‌ಬ್ಯಾಗ್‌ಗಳ ವೆಚ್ಚವೇ 40,000ಕ್ಕೂ ಅಧಿಕವಾಗಿದೆ. ಇದಲ್ಲದೆ, ಇಲ್ಲಿಯವರೆಗೆ ಯಾವುದೇ ಆಟೋಮೊಬೈಲ್ ತಯಾರಕರು 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುವುದಾಗಿ ಹೇಳಿಲ್ಲ ಎಂಬುದು ಗಮನಿಸಬೇಕಾದ ವಿಚಾರ.

ಇದರಲ್ಲಿ ಒಂದು ಕಾರಣವೂ ಇದೆ. 6 ಏರ್‌ಬ್ಯಾಗ್‌ಗಳನ್ನು ನೀಡುವುದರಿಂದ ವಾಹನದ ಬೆಲೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಆ ಸಂದರ್ಭದಲ್ಲಿ ಕಾರುಗಳು ಮಾರುಕಟ್ಟೆಯಲ್ಲಿ ಉಳಿಯಲ್ಲ. ಇನ್ನು ಭಾರತದಲ್ಲಿ ಹೆಚ್ಚಾಗಿ ಜನರು ವಾಹನದ ಸುರಕ್ಷತಾ ಅಂಶದ ಬಗ್ಗೆ ಹೆಚ್ಚಿನ ಗಮನ ನೀಡಲ್ಲ. ಆದ್ದರಿಂದ ಆಟೋಮೊಬೈಲ್ ತಯಾರಕರು ಅಂತಹ ಉನ್ನತ-ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.

6 ಏರ್‌ಬ್ಯಾಗ್‌ಗಳನ್ನು ಸ್ಥಾಪಿಸಲು ಹೆಚ್ಚುವರಿ ಅಭಿವೃದ್ಧಿ ಅಗತ್ಯ

ವಾಹನವು ಅಭಿವೃದ್ಧಿಯ ಹಂತದಲ್ಲಿದ್ದರೆ, ಆಟೋಮೊಬೈಲ್ ತಯಾರಕರು ಹೆಚ್ಚಿನ ಏರ್‌ಬ್ಯಾಗ್‌ಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಥಾಪಿಸಬಹುದು. ಆದರೆ ಈ ವಾಹನವು ಈಗಾಗಲೇ ಮಾರಾಟ ಮಾಡಲಾಗುತ್ತಿದ್ದರೆ ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಸ್ಥಾಪಿಸಲು ತಯಾರಕರು ಅದರಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಬೇಕಾಗುತ್ತದೆ. ವೈರಿಂಗ್ ಅನ್ನು ಮರೆಮಾಡಬೇಕಾಗುತ್ತದೆ. ಮರು-ಇಂಜಿನಿಯರ್ ಮಾಡಬೇಕಾಗುತ್ತದೆ. ಎಲ್ಲಾ ಬದಲಾವಣೆಯನ್ನು ಮಾಡಬೇಕಾಗುತ್ತದೆ.

ವಾಹನಗಳಲ್ಲಿ ಏರ್‌ಬ್ಯಾಗ್‌ಗಳು ಅಪಘಾತದ ಸಂದರ್ಭದಲ್ಲಿ ಯಾವ ವೇಗದಲ್ಲಿ ತೆರೆಯಬೇಕು ಎಂದು ಪರೀಕ್ಷಿಸಬೇಕಾಗುತ್ತದೆ. ಇವೆಲ್ಲವೂ ಸೇರಿದಾಗ ವಾಹನದ ಬೆಲೆಯು ಸಾಮಾನ್ಯವಾಗಿ ದುಬಾರಿ ಆಗಲಿದೆ. 10,000ವರೆಗೆ ಬೆಲೆಯು ಅಧಿಕವಾಗಬಹುದು. ಆದರೆ ಈ ಬಗ್ಗೆ ಸಂಶೋಧನೆ, ಅಭಿವೃದ್ಧಿಯು ಇನ್ನಷ್ಟು ಬೆಲೆಯನ್ನು ಹೆಚ್ಚಳ ಮಾಡುತ್ತದೆ. ಪ್ರತಿಯೊಂದು ವಾಹನವನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಪ್ರತಿಯೊಂದು ವಾಹನವನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ. ಮರು-ಇಂಜಿನಿಯರಿಂಗ್ ಮಾಡಬೇಕಾಗುತ್ತದೆ.

English summary

Cars to get costlier As Transport Ministry begins work on making 6 airbags mandatory

Cars to get costlier As Transport Ministry begins work on making 6 airbags mandatory.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X