For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿ ಹಬ್ಬಕ್ಕೆ 2500 ರು. ನಗದು, ಉಡುಗೊರೆ ವಿತರಣೆ ತ..ನಾಡಲ್ಲಿ ಶುರು

|

ಸಂಕ್ರಾಂತಿ (ಪೊಂಗಲ್) ಹಬ್ಬಕ್ಕಾಗಿ ತಮಿಳುನಾಡು ಸರ್ಕಾರ ಘೋಷಿಸಿದ್ದ 2500 ರುಪಾಯಿ ನಗದು ನೆರವಿನ ವಿತರಣೆ ಸೋಮವಾರದಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಶುರುವಾಗಿದೆ. ಇದರ ಜತೆಗೆ ಗಿಫ್ಟ್ ಹ್ಯಾಂಪರ್ ಗಳನ್ನು ಸಹ ವಿತರಣೆ ಮಾಡಲಾಗುತ್ತಿದೆ.

 

ಇನ್ನು ಉಡುಗೊರೆಯ ಪ್ಯಾಕ್ ನಲ್ಲಿ ಒಂದು ಬ್ಯಾಗ್, ತಲಾ ಒಂದು ಕೇಜಿ ಅಕ್ಕಿ ಮತ್ತು ಸಕ್ಕರೆ, ತಲಾ ಇಪ್ಪತ್ತು ಗ್ರಾಮ್ ಗೋಡಂಬಿ ಹಾಗೂ ದ್ರಾಕ್ಷಿ, ಐದು ಗ್ರಾಮ್ ಏಲಕ್ಕಿ ಹಾಗೂ ಒಂದು ಕಬ್ಬಿನ ಜಲ್ಲೆಯನ್ನು ಸರ್ಕಾರವು ಪಡಿತರಚೀಟಿದಾರರಿಗೆ ಉಚಿತವಾಗಿ ಹಂಚುತ್ತಿದೆ. ಈ ಯೋಜನೆಗಾಗಿಯೇ ಸರ್ಕಾರದಿಂದ 5604.84 ಕೋಟಿ ರುಪಾಯಿ ಮೀಸಲಿಡಲಾಗಿದೆ.

ಮಿಸ್ಡ್ ಕಾಲ್ ಮೂಲಕ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ಜನವರಿ 14ನೇ ತಾರೀಕಿನಂದು ತಮಿಳುನಾಡಿನಲ್ಲಿ ಪೊಂಗಲ್ ಆ‌ಚರಿಸಲಾಗುತ್ತದೆ. ಅಕ್ಕಿ ಕ್ಯಾಟಗರಿ ಅಡಿಯಲ್ಲಿ ಬರುವ ಪಡಿತರಚೀಟಿದಾರರು- 2.06 ಕೋಟಿ ಮಂದಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ 2500 ರು., ಉಡುಗೊರೆ ವಿತರಣೆ ತ..ನಾಡಲ್ಲಿ ಶುರು

ಪಂಚೆ, ಸೀರೆ ಕೂಡ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗಿದೆ. ಇದಕ್ಕಾಗಿ ಸರ್ಕಾರದಿಂದ 485.25 ಕೋಟಿ ರುಪಾಯಿ ಎತ್ತಿಡಲಾಗಿದೆ. ಕಳೆದ ಡಿಸೆಂಬರ್ 21ನೇ ತಾರೀಕು ಒಂಬತ್ತು ಫಲಾನುಭವಿಗಳಿಗೆ ನಗದು ನೆರವು ಮತ್ತು ಉಡುಗೊರೆ ಪ್ಯಾಕ್ ನೀಡುವ ಮೂಲಕ ತಮಿಳುನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಈ ಯೋಜನೆಗೆ ಚಾಲನೆ ನೀಡಿದರು. ಇನ್ನು ಈ ಯೋಜನೆ ಚಾಲನೆಯ ಅಧ್ಯಕ್ಷತೆಯನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಚಿವರು, ಶಾಸಕರು ನೀಡಿದರು.

English summary

Cash Assistance Rs 2500 And Gift Pack Free Distribution For Pongal Started In Tamil Nadu

Tamil Nadu government has started distribution of Rs 2500 cash assistance, gift pack for Pongal festival.
Story first published: Tuesday, January 5, 2021, 9:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X