24 ಲಕ್ಷ ತೆರಿಗೆದಾರರಿಗೆ ರಿಫಂಡ್ ಘೋಷಿಸಿದ ಸಿಬಿಡಿಟಿ: ವಿವರ ಚೆಕ್ ಮಾಡುವುದು ಹೇಗೆ?
ಆದಾಯ ತೆರಿಗೆಯ ರಿಟರ್ನ್ ಅನ್ನು ದಾಖಲು ಮಾಡಿರುವ ತೆರಿಗೆದಾರರಿಗೆ ಇಲ್ಲೊಂದು ಮುಖ್ಯವಾದ ಮಾಹಿತಿ ಇದೆ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಶನಿವಾರ ಘೋಷಣೆಯೊಂದನ್ನು ಮಾಡಿದೆ. ಸುಮಾರು 23.99 ಲಕ್ಷಕ್ಕೂ ಅಧಿಕ ತೆರೆಗೆ ಪಾವತಿದಾರರಿಗೆ ಏಪ್ರಿಲ್ 1, 2021 ಮತ್ತು ಆಗಸ್ಟ್ 30, 2021 ರ ನಡುವೆ ಸುಮಾರು 67,401 ರೂಪಾಯಿ ಕೋಟಿ ಹಣವನ್ನು ರಿಫಂಡ್ ಮಾಡಲು ಆರಂಭ ಮಾಡಿದೆ ಎಂದು ಹೇಳಿದೆ.
ಈ ಬಗ್ಗೆ ಅಧಿಕ ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆಯು, "22,61,918 ಪ್ರಕರಣಗಳಲ್ಲಿ ಸುಮಾರು 16,373 ಕೋಟಿ ರೂಪಾಯಿ ಆದಾಯ ತೆರಿಗೆಯ ಮರು ಪಾವತಿಯನ್ನು ಪ್ರಕಟಿಸಲಾಗಿದೆ ಹಾಗೂ 1,37,327 ಪ್ರಕರಣಗಳಲ್ಲಿ ಸುಮಾರು 51,029 ಕೋಟಿ ರೂಪಾಯಿ ಕಾರ್ಪೋರೇಟ್ ತೆರಿಗೆ ಮರುಪಾವತಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ನೆಟ್ಫ್ಲಿಕ್ಸ್ನಲ್ಲಿ ಆಟೋ ಪೇ ಸೆಟ್ಟಿಂಗ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ಗೆ ಸಂಬಂಧಿಸಿ ತೆರಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ನಡುವೆಯೂ ಈಗ ಆದಾಯ ತೆರಿಗೆ ಮರುಪಾವತಿಯನ್ನು ಘೋಷಣೆ ಮಾಡಲಾಗಿದೆ. ಆದರೆ ಈ ನಡುವೆ ಅನೇಕ ತೆರಿಗೆದಾರರು ಈ ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ನ ಸಮಸ್ಯೆಯಿಂದಾಗಿ ಇನ್ನೂ ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಸಲ್ಲಿಸಿಲ್ಲ.

ಸಾಮಾನ್ಯವಾಗಿ ಆದಾಯ ತೆರಿಗೆಯ ಮರುಪಾವತಿಯು ಐಟಿಆರ್ ದಾಖಲು ಮಾಡಿದ ಹತ್ತು ದಿನಗಳ ನಂತರ ಪ್ರಕಟ ಮಾಡಲಾಗುತ್ತದೆ. ಆದರೆ ಕೆಲವೊಂದು ಕಾರಣಗಳಿಂದ ಇದು ವಿಳಂಬವಾಗುವ ಸಾಧ್ಯತೆ ಇರುತ್ತದೆ. ಬ್ಯಾಂಕ್ ಎಫ್ಡಿಗಳು ಅಥವಾ ಬಾಂಡ್ಗಳಿಂದ ಬರುವ ಬಡ್ಡಿ ಆದಾಯದ ಮೇಲೆ ಹೆಚ್ಚುವರಿ ತೆರಿಗೆಯನ್ನು ಕಡಿತಗೊಳಿಸಿದಾಗ (ಟಿಡಿಎಸ್) ತೆರಿಗೆದಾರರಿಗೆ ಮರುಪಾವತಿಯನ್ನು ಪ್ರಾರಂಭ ಮಾಡಲಾಗುತ್ತದೆ.
ಐಟಿಆರ್ನಲ್ಲಿ ರಿಫಂಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನ್ಯಾಷನಲ್ ಸೆಕ್ಯೂರಿಟಿ ಡಿಪೋಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ವೆಬ್ಸೈಟ್ ಅಥವಾ ಆದಾಯ ತೆರಿಗೆ ದಾಖಲು ಮಾಡುವ ಪೋರ್ಟಲ್ನ ಮೂಲಕ ತೆರಿಗೆದಾರರು ತಮ್ಮ ರಿಫಂಡ್ ಸ್ಟೇಟಸ್ ಹೇಗಿದೆ ಎಂಬುವುದನ್ನು ಚೆಕ್ ಮಾಡಬಹುದಾಗಿದೆ. ನ್ಯಾಷನಲ್ ಸೆಕ್ಯೂರಿಟಿ ಡಿಪೋಸಿಟರಿ ಲಿಮಿಟೆಡ್ ಅಥವಾ ಎನ್ಎಸ್ಡಿಎಲ್ ಖಾತೆಯ ಮೂಲಕ ನೀವು ಪ್ಯಾನ್ ಹಾಗೂ ವರ್ಷವನ್ನು ಉಲ್ಲೇಖ ಮಾಡಿ Proceed ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಈ ಪೋರ್ಟಲ್ನಲ್ಲಿ ನಿಮ್ಮ ರಿಫಂಡ್ ಸ್ಟೇಟಸ್ ಬಗ್ಗೆ ಮಾಹಿತಿ ಲಭಿಸಲಿದೆ. ಇನ್ನು ಐಟಿ ಡಿಪಾರ್ಟ್ಮೆಂಟ್ ಪೋರ್ಟಲ್ ಮೂಲಕ ನಿಮ್ಮ ರಿಫಂಡ್ ಸ್ಟೇಟಸ್ ಅನ್ನು ತಿಳಿಯಬೇಕಾದರೆ, ಪಾಲಿಸಬೇಕಾದ ಹಂತಗಳನ್ನು ಕೆಳಗೆ ವಿವರಿಸಲಾಗಿದೆ.
ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀವು ತಿಳಿಸಿರಲೇಬೇಕು..
* ಮೊದಲು ನೀವು ಆದಾಯ ತೆರಿಗೆ ಇಲಾಖೆಯ ದಾಖಲು ಮಾಡುವ ಪೋರ್ಟಲ್ಗೆ ಲಾಗ್ ಇನ್ ಆಗಬೇಕು.
* View Returns/ Forms ಅನ್ನು ಆಯ್ಕೆ ಮಾಡಿಕೊಳ್ಳಬೇಕು
* My Account ಟಾಬ್ಗೆ ಹೋಗಿ Income Tax Returns ಆಯ್ಕೆ ಮಾಡಿಕೊಳ್ಳಿ
* ಬಳಿಕ submit ಮಾಡಿ
* ಬಳಿಕ ಸ್ವೀಕೃತಿ ಸಂಖ್ಯೆ ( acknowledgement number) ಮೇಲೆ ಕ್ಲಿಕ್ ಮಾಡಿ
* ಈ ಸಂದರ್ಭದಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ವಿವರಗಳು ನಿಮಗೆ ಲಭಿಸಲಿದೆ.
ಇನ್ನು ಈ ಮರು ಪಾವತಿಯು ತೆರಿಗೆದಾರರ ಖಾತೆಗೆ ನೇರವಾಗಿ ತೆರಿಗೆದಾರರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆ ಅಥವಾ ನಿಮ್ಮ ವಿಳಾಸಕ್ಕೆ ಬರಲಿದೆ. ಈ ಕಾರಣದಿಂದಾಗಿ ಐಟಿಆರ್ ದಾಖಲು ಮಾಡುವ ಸಂದರ್ಭದಲ್ಲಿ ಬ್ಯಾಂಕ್ ಖಾತೆ ವಿವರವನ್ನು ಹಾಗೂ ವಿಳಾಸವನ್ನು ಸರಿಯಾಗಿ ದಾಖಲು ಮಾಡಲಾಗಿದೆ ಎಂದು ನೀವು ಖಾತರಿಪಡಿಸಿಕೊಳ್ಳುವುದು ಅತೀ ಮುಖ್ಯ.