For Quick Alerts
ALLOW NOTIFICATIONS  
For Daily Alerts

ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ

|

ಟೈರ್ ಮಾರಾಟ ಕಂಪೆನಿ ಸಿಯೆಟ್ ಲಿಮಿಟೆಡ್ ಮಂಗಳವಾರ ವರದಿ ಮಾಡಿದಂತೆ ಡಿಸೆಂಬರ್ 31, 2020ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ಒಟ್ಟಾರೆ ನಿವ್ವಳ ಲಾಭದ ಪ್ರಮಾಣದಲ್ಲಿ ಎರಡೂವರೆ ಪಟ್ಟು ಹೆಚ್ಚಳವಾಗಿ, ರು. 132.34 ಕೋಟಿ ಆಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪೆನಿಯು ರು. 52.5 ಕೋಟಿ ಸಮಗ್ರ ನಿವ್ವಳ ಲಾಭ ಗಳಿಸಿತ್ತು.

ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ

ಸಮಗ್ರ ಆದಾಯ ರು. 2221.25 ಕೋಟಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರು. 1761.77 ಕೋಟಿ ಇತ್ತು. 26% ಬೆಳವಣಿಗೆ ಆಗಿದೆ. ನಿರ್ದಿಷ್ಟವಾಗಿ ಪ್ರಯಾಣಿಕರ ಕಾರು, ದ್ವಿಚಕ್ರ ವಾಹನ ಮತ್ತು ಕೃಷಿ ಸೆಗ್ಮೆಂಟ್ ನಲ್ಲಿ ಈ ತ್ರೈಮಾಸಿಕದಲ್ಲಿ ಬೆಳವಣಿಗೆ ಸಾಧಿಸಿದೆ ಎಂದು ಸಿಯೆಟ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಗೋಯೆಂಕಾ ಹೇಳಿದ್ದಾರೆ.

ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ

 

ನಮ್ಮ ಎಲ್ಲ ಕಾರ್ಖಾನೆಗಳಲ್ಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದ್ದರಿಂದ ಮುಂದಿನ ತಿಂಗಳುಗಳಲ್ಲಿ ಬೆಳವಣಿಗೆ ಪ್ರಮಾಣ ಹೆಚ್ಚಾಗಬಹುದು ಎಂದು ಗೋಯೆಂಕಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಪರಿಣಾಮವಾಗಿ ಲಾಭದ ಪ್ರಮಾಣದಲ್ಲಿ ಒತ್ತಡ ಆಗಬಹುದು ಎಂಬ ಅಂದಾಜು ಮಾಡಲಾಗಿದೆ.

English summary

Ceat Company Posts More Than Two Fold Profit In December Quarter

Tyre manufacturing company Ceat posts over two fold profit in October to December quarter. Here is the details.
Company Search
COVID-19