For Quick Alerts
ALLOW NOTIFICATIONS  
For Daily Alerts

ಖಾಸಗಿಯವರಿಂದ ರೈಲು ಸಂಚಾರ: ಕಂಪೆನಿಗಳಿಂದಲೇ ಪ್ರಯಾಣ ದರ ನಿಗದಿ

By ಅನಿಲ್ ಆಚಾರ್
|

ಖಾಸಗಿ ಕಂಪೆನಿಗಳು ಭಾರತದಲ್ಲಿ ರೈಲು ಸೇವೆ ಆರಂಭಿಸಿದ ಮೇಲೆ ಪ್ರಯಾಣಿಕರ ದರವನ್ನು ಆ ಕಂಪೆನಿಗಳೇ ನಿಗದಿ ಮಾಡಲು ಅವಕಾಶ ಮಾಡಿಕೊಡಲಾಗುವುದು. ಏಷ್ಯಾದಲ್ಲೇ ಅತಿ ಹಳೆಯ ಸಂಪರ್ಕ ಜಾಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗಿಗೆ ಮುಕ್ತಗೊಳಿಸಿದ ಮೇಲೆ ಹೂಡಿಕೆದಾರರನ್ನು ಆಕರ್ಷಿಸಲು ಈ ನಿರ್ಧಾರ ಮಾಡಲಾಗಿದೆ.

ಭಾರತೀಯ ರೈಲ್ವೆಯ 1.40 ಲಕ್ಷ ಹುದ್ದೆ ಭರ್ತಿಗೆ ಡಿ. 15ರಿಂದ ಪರೀಕ್ಷೆ

"ಪ್ರಯಾಣ ದರವನ್ನು ತಮ್ಮದೇ ಮಾರ್ಗದಲ್ಲಿ ನಿಗದಿ ಮಾಡಲು ಖಾಸಗಿಯವರಿಗೆ ಸ್ವಾತಂತ್ರ್ಯ ನೀಡಲಾಗಿದೆ," ಎಂದು ಭಾರತದ ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಆ ಮಾರ್ಗದಲ್ಲಿ ಏರ್ ಕಂಡೀಷನ್ ಬಸ್ ಗಳು ಮತ್ತು ವಿಮಾನಗಳು ಸಂಚರಿಸುತ್ತವೆ. ದರ ನಿಗದಿಗೆ ಮುನ್ನ ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು," ಎಂದು ಅವರು ಹೇಳಿದ್ದಾರೆ.

ರಾಜಕೀಯ ಸೂಕ್ಷ್ಮ ವಿಷಯ
 

ರಾಜಕೀಯ ಸೂಕ್ಷ್ಮ ವಿಷಯ

ಭಾರತದಲ್ಲಿ ರೈಲು ಪ್ರಯಾಣ ದರವು ರಾಜಕೀಯ ಸೂಕ್ಷ್ಮ ವಿಷಯ. ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆ ಭಾರತದ ರೈಲುಗಳಲ್ಲಿ ಸಂಚಾರ ಮಾಡುತ್ತಾರೆ. ದೇಶದ ಬಡ ಜನರು ತಮ್ಮ ಸಂಚಾರಕ್ಕೆ ರೈಲ್ವೆ ಮೇಲೆ ಅವಲಂಬಿತರಾಗಿದ್ದಾರೆ. ಇಲಾಖೆಯಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ, ಅಸಮರ್ಥತೆ ಕಾರಣಕ್ಕೆ ಹಿನ್ನಡೆ ಅನುಭವಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಿಲ್ದಾಣದಿಂದ ರೈಲು ಕಾರ್ಯ ನಿರ್ವಹಣೆ ತನಕ ಎಲ್ಲದರಲ್ಲೂ ಭಾಗವಹಿಸಲು ಖಾಸಗಿಯವರಿಗೆ ಆಹ್ವಾನ ನೀಡಿದೆ.

ಐದು ವರ್ಷಗಳಲ್ಲಿ 7.5 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ

ಐದು ವರ್ಷಗಳಲ್ಲಿ 7.5 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ

ಆಲ್ ಸ್ಟಾಮ್ ಎಸ್ ಎ, ಬೊಂಬಾರ್ಡಿಯರ್ ಇಂಕ್, ಜಿಎಂಆರ್ ಇನ್ ಫ್ರಾಸ್ಟ್ರಕ್ಚರ್ ಲಿ. ಮತ್ತು ಅದಾನಿ ಎಂಟರ್ ಪ್ರೈಸಸ್ ನಿಂದ ಈ ಯೋಜನೆ ಬಗ್ಗೆ ಆಸಕ್ತಿ ವ್ಯಕ್ತವಾಗಿದೆ ಎಂದು ಯಾದವ್ ಹೇಳಿದ್ದಾರೆ. ಈ ಯೋಜನೆಗಳಿಂದ ಮುಂದಿನ ಐದು ವರ್ಷಗಳಲ್ಲಿ 7.5 ಬಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ಹೂಡಿಕೆ ಬರುವ ಅಂದಾಜು ರೈಲ್ವೆ ಸಚಿವಾಲಯಕ್ಕೆ ಇದೆ.

ಬುಲೆಟ್ ರೈಲಿಗಾಗಿ ಜಪಾನ್ ನಿಂದ ಕಡಿಮೆ ದರದ ಸಾಲ

ಬುಲೆಟ್ ರೈಲಿಗಾಗಿ ಜಪಾನ್ ನಿಂದ ಕಡಿಮೆ ದರದ ಸಾಲ

ರೈಲ್ವೆ ವ್ಯವಸ್ಥೆ ಆಧುನಿಕಗೊಳಿಸುವುದು ಮೋದಿಗೆ ಬಹಳ ಮುಖ್ಯ. 2023ರೊಳಗೆ ದೇಶದ ಮೊದಲ ಬುಲೆಟ್ ರೈಲಿಗಾಗಿ ಜಪಾನ್ ನಿಂದ ಕಡಿಮೆ ದರದ ಸಾಲ ಪಡೆದಿದೆ. ಇದರ ಜತೆಗೆ ಪ್ರಯಾಣಿಕರ ರೈಲಿನ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಿದೆ. ಭಾರತವು ಜುಲೈನಲ್ಲಿ ಖಾಸಗಿಯವರ ಮುಂದೆ ಪ್ರಸ್ತಾವವೊಂದನ್ನು ಇಟ್ಟಿತ್ತು. 109 ಮಾರ್ಗಗಳಿಂದ 151 ರೈಲುಗಳ ಸಂಚಾರಕ್ಕೆ ಆಸಕ್ತಿ ಸಲ್ಲಿಸಲು ಕಂಪೆನಿಗಳಿಗೆ ಆಸಕ್ತಿ ವ್ಯಕ್ತಪಡಿಸಲು ತಿಳಿಸಿದೆ. ನವದೆಹಲಿ ಮತ್ತು ಮುಂಬೈ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ಸಹ ಆಸಕ್ತಿ ವ್ಯಕ್ತಪಡಿಸುವಂತೆ ಕೇಳಲಾಗಿದೆ. ಈಗಿನ ರೈಲ್ವೆ ಜಾಲವು ಬಹಳ ಇಕ್ಕಟ್ಟಾಗಿದೆ ಹಾಗೂ ಹಳೆಯದಾಗಿದೆ. ಬ್ರಿಟಿಷರ ಆಳ್ವಿಕೆ ವೇಳೆ 1853ರಲ್ಲಿ ಇದ್ದಂತೆಯೇ ಇದೆ.

English summary

Central Government To Allow Private Railways To Set Own Fares

Union government of India will allow private companies to set passenger fares once they start operating train services, a move aimed at luring investors, said by Railway board chief VK Yadav.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X