For Quick Alerts
ALLOW NOTIFICATIONS  
For Daily Alerts

ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ಸಾಲ ಮಾಡಲು ಅನುಮತಿಸಿದ ಕೇಂದ್ರ

By ಅನಿಲ್ ಆಚಾರ್
|

ಕೇಂದ್ರ ಸರ್ಕಾರದಿಂದ ಮಂಗಳವಾರ ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ರುಪಾಯಿ ಹಣ ಸಂಗ್ರಹಕ್ಕೆ ಅನುಮತಿ ಸಿಕ್ಕಿದೆ. ಜಿಎಸ್ ಟಿ ಆದಾಯ ಕೊರತೆಯನ್ನು ನೀಗಿಸಿಕೊಳ್ಳಲು ಓಪನ್ ಮಾರ್ಕೆಟ್ ಸಾಲದ ಮೂಲಕ ಈ ಹಣವನ್ನು ಸಂಗ್ರಹಿಸಲು ಒಪ್ಪಿಗೆ ನೀಡಿದೆ. ಜಿಎಸ್ ಟಿ ಪರಿಹಾರ ವಿಚಾರವಾಗಿ ಒಮ್ಮತದ ತೀರ್ಮಾನಕ್ಕೆ ಬರಲು ಸೋಮವಾರ ನಡೆದ ಸಭೆಯಲ್ಲಿ ವಿಫಲವಾದ ಮರು ದಿನ ಈ ನಿರ್ಧಾರ ಬಂದಿದೆ.

 

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ ಟಿ ಪರಿಹಾರ ಮೊತ್ತದ ಕೊರತೆ 2.35 ಲಕ್ಷ ಕೋಟಿ ಆಗಬಹುದು ಎಂಬ ಅಂದಾಜಿದೆ. ಕೇಂದ್ರ ಸರ್ಕಾರದಿಂದ ಕಳೆದ ಆಗಸ್ಟ್ ನಲ್ಲಿ ರಾಜ್ಯಗಳಿಗೆ ಎರಡು ಆಯ್ಕೆ ನೀಡಲಾಗಿತ್ತು. ಮೊದಲನೆಯದು ಆರ್ ಬಿಐ ನಿಂದ 97,000 ಕೋಟಿ ರುಪಾಯಿ ವಿಶೇಷ ಸಾಲ ಪಡೆಯುವುದು ಅಥವಾ 2.35 ಲಕ್ಷ ಕೋಟಿ ರುಪಾಯಿಯನ್ನು ಮಾರ್ಕೆಟ್ ನಿಂದ ತೆಗೆದುಕೊಳ್ಳುವುದು.

GST ಪರಿಹಾರದ ಬಗ್ಗೆ ಮೂಡದ ಒಮ್ಮತ: ಪರಿಹಾರಕ್ಕೆ 12 ರಾಜ್ಯಗಳ ಒಪ್ಪಿಗೆ

ಇನ್ನು 'ಸಿನ್ ಗೂಡ್ಸ್' ಎಂದು ಕರೆಸಿಕೊಳ್ಳುವುದರ ಮೇಲೆ ಪರಿಹಾರ ಸೆಸ್ ಅನ್ನು 2022ರ ಆಚೆಗೂ ವಿಸ್ತರಿಸುವ ಬಗ್ಗೆ ಕೂಡ ಕೇಂದ್ರ ಪ್ರಸ್ತಾಪಿಸಿತ್ತು. ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 20 ರಾಜ್ಯಗಳಿಗೆ 68,825 ಕೋಟಿ ರುಪಾಯಿಯನ್ನು ಓಪನ್ ಮಾರ್ಕೆಟ್ ಸಾಲದ ಮೂಲಕ ಸಂಗ್ರಹಿಸಲು ಅನುಮತಿ ನೀಡಲಾಗಿದೆ ಎಂದು ಮಂಗಳವಾರ ಹೇಳಿಕೆ ನೀಡಲಾಗಿದೆ.

ಇಪ್ಪತ್ತು ರಾಜ್ಯಗಳಿಗೆ 68,825 ಕೋಟಿ ಸಾಲ ಮಾಡಲು ಅನುಮತಿಸಿದ ಕೇಂದ್ರ

ಆಯಾ ರಾಜ್ಯಗಳ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ ನ(GSDP) 0.50% ಸಾಲ ಪಡೆಯಲು ಅನುಮತಿ ಸಿಕ್ಕಿದೆ. ಇದು ಕೇಂದ್ರದ ಮೊದಲ ಪ್ರಸ್ತಾವ ಒಪ್ಪಿಕೊಂಡ ರಾಜ್ಯಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

ಮೊದಲನೇ ಪ್ರಸ್ತಾವವನ್ನು ಒಪ್ಪಿಕೊಂಡ ಇಪ್ಪತ್ತು ರಾಜ್ಯಗಳಿವು:
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರಾ, ಉತ್ತರಪ್ರದೇಶ, ಉತ್ತರಾಖಂಡ.

ಇನ್ನು ಎಂಟು ರಾಜ್ಯಗಳು ಯಾವ ಪ್ರಸ್ತಾವವನ್ನೂ ಆಯ್ಕೆ ಮಾಡಿಕೊಂಡಿಲ್ಲ.

English summary

Centre allows 20 states to raise Rs 68,825 crore via open market borrowing to meet GST shortfall

Union government on Tuesday permitted 20 states to raise Rs 68,825 crore through open market borrowings to bridge the GST revenue shortfall.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X