For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಕುಟುಂಬದ 78 ಕೋಟಿಯ ಆಸ್ತಿ ಮುಟ್ಟುಗೋಲು

|

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಶುಕ್ರವಾರ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕೊಚ್ಚರ್ ಅವರ ಮುಂಬೈ ಫ್ಲ್ಯಾಟ್, ಅವರ ಪತಿ ದೀಪಕ್ ಕೊಚ್ಚರ್ ಅವರ ಕೆಲವು ಆಸ್ತಿಗಳೂ ಸೇರಿ ಒಟ್ಟು ಎಪ್ಪತ್ತೆಂಟು ಕೋಟಿ ರುಪಾಯಿ ಆಸ್ತಿಯನ್ನು (ಪುಸ್ತಕ ಮೌಲ್ಯ- ಬುಕ್ ವ್ಯಾಲ್ಯೂ) ಮುಟ್ಟುಗೋಲು ಹಾಕಿಕೊಂಡಿದೆ.

 

ಕಾರ್ಪೊರೇಟ್ ಗ್ರೂಪ್ ವೊಂದಕ್ಕೆ ಐಸಿಐಸಿಐ ಬ್ಯಾಂಕ್ ನಿಂದ 1875 ಕೋಟಿ ರುಪಾಯಿ ಮಂಜೂರಾತಿಯಲ್ಲಿ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ಚಂದಾ ಕೊಚ್ಚರ್, ದೀಪಕ್ ಕೊಚ್ಚರ್, ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.

ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ್ದ ಎಫ್ ಐಆರ್ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಎಫ್ ಐ ಆರ್ ನಲ್ಲಿ ಧೂರ್ ಸ್ಥಾಪಿಸಿದ ಸುಪ್ರೀಂ ಎನರ್ಜಿ, ದೀಪಕ್ ಕೊಚ್ಚರ್ ನಿಯಂತ್ರಣದ ನ್ಯೂಪವರ್ ಕಂಪೆನಿ ಹೆಸರು ಇದೆ.

ಚಂದಾ ಕೊಚ್ಚರ್ ಕುಟುಂಬದ 78 ಕೋಟಿಯ ಆಸ್ತಿ ಮುಟ್ಟುಗೋಲು

ಚಂದಾ ಕೊಚ್ಚರ್ ಅವರು ಐಸಿಐಸಿಐ ಬ್ಯಾಂಕ್ ನ ಸಿಇಒ ಆಗಿದ್ದಾಗ 1875 ಕೋಟಿ ರುಪಾಯಿ ಸಾಲ ಮಂಜೂರು ಮಾಡಿಸಿಕೊಳ್ಳುವ ಉದ್ದೇಶದಿಂದಲೇ ಧೂತ್ ಅವರು ಸುಪ್ರೀಂ ಎನರ್ಜಿ ಮೂಲಕ ದೀಪಕ್ ಕೊಚ್ಚರ್ ನಿಯಂತ್ರಣದ ನ್ಯೂಪವರ್ ಕಂಪೆನಿಯಲ್ಲಿ ಹಣ ಹೂಡಿದ್ದರು ಎಂದು ಆರೋಪಿಸಲಾಗಿದೆ.

ಈ ಸಾಲವು 2012ರಲ್ಲಿ ಅನುತ್ಪಾದಕ ಆತಿ ಎಂದು ಘೋಷಣೆಯಾಗಿ, ಬ್ಯಾಂಕ್ ಗೆ 1730 ಕೋಟಿ ರುಪಾಯಿ ನಷ್ಟ ಉಂಟು ಮಾಡಿತ್ತು ಎಂದು ಆರೋಪಿಸಲಾಗಿದೆ. ಚಂದಾ ಕೊಚ್ಚರ್ ಅವರು ಸಿಇಒ ಆಗಿದ್ದ ಅವಧಿಯಲ್ಲೇ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಹಾಗೂ ಭೂಷಣ್ ಸ್ಟೀಲ್ ಗ್ರೂಪ್ ಗೂ ಸಾಲ ನೀಡಿದ್ದು, ಅವುಗಳ ವಿರುದ್ಧ ಕೂಡ ಅಕ್ರಮ ಹಣ ವರ್ಗಾವಣೆ ದೂರು ಬಂದು, ತನಿಖೆ ನಡೆಸುತ್ತಿರುವುದಾಗಿ ಇ.ಡಿ. ತಿಳಿಸಿದೆ.

English summary

Chanda Kocchar Family 78 Crore Worth Of Property Attached By ED

ICICI bank former CEO Chanda Kocchar family 78 crore worth of property attached by ED in PMLA. Here is the details.
Story first published: Friday, January 10, 2020, 17:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X