For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್ ಫೋನ್ ನಿಂದ ಕಾರಿನ ತನಕ ಭಾರತದಲ್ಲಿ ಚೀನಾ ಸಾಮ್ರಾಜ್ಯ

|

ಚೀನಾದ ಮೊಬೈಲ್ ಫೋನ್ ಗಳು ಭಾರತದ ಮಾರುಕಟ್ಟೆಯಲ್ಲಿ ಸಾಮ್ರಾಜ್ಯವನ್ನೇ ನಿರ್ಮಿಸಿಕೊಂಡಿವೆ. 'ದ ಗ್ರೇಟ್ ವಾಲ್' ಭಾರತೀಯ ಐಟಿ/ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ನಿಧಾನಕ್ಕೆ, ಆದರೆ ಉತ್ತಮ ರಣತಂತ್ರದೊಂದಿಗೆ ಬೇರು ಬಿಡುತ್ತಿದೆ. ಅದರ ಬೆಳವಣಿಗೆಯನ್ನು ಗಮನಿಸಿದರೆ ಮಿಂಚಿನ ವೇಗದಲ್ಲಿದೆ. ಈ ಬಗ್ಗೆ 'ದ ವೈರ್'ನಲ್ಲಿ ವಿಸ್ತೃತವಾದ ವರದಿ ಆಗಿದೆ. ಅದರ ಆಯ್ದ ಬಗ್ಗೆ ಇಲ್ಲಿದೆ.

ಸ್ಮಾರ್ಟ್ ಫೋನ್ ನಿಂದ ಆಟೋಮೊಬೈಲ್/ಎಲೆಕ್ಟ್ರಿಕ್ ವಾಹನಗಳ ತನಕ, ಡಿಜಿಟಲ್ ಪೇಮೆಂಟ್ ನಿಂದ ಗ್ರಾಹಕರ ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮದ ತನಕ ಚೀನಾದ ಕಂಪೆನಿಗಳು ಈಗ ಭಾರತದಲ್ಲಿ ವ್ಯಾಪಿಸುತ್ತಿವೆ. ಒಂದು ಕಡೆ ಅಮೆರಿಕ ಮೂಲದ ದೈತ್ಯ ಕಂಪೆನಿಗಳಾದ ಅಮೆಜಾನ್, ಫೇಸ್ ಬುಕ್/ವಾಟ್ಸಾಪ್ ಗೆ ಸರ್ಕಾರ ಕೆಲವು ನಿಯಮ ವಿಧಿಸಿ, ಹತೋಟಿಯಲ್ಲಿ ಇಡಲು ಯತ್ನಿಸುತ್ತಿದೆ. ಆದರೆ ಚೀನಾದ ಕಂಪೆನಿಗಳಿಗೆ ಅಂಥ ಯಾವ ನಿರ್ಬಂಧವೂ ಕಾಣುತ್ತಿಲ್ಲ.

 

ಪರ್ಸನಲ್ ಲೋನ್ ನೀಡಲು ಮುಂದಾದ ಶಿಯೋಮಿ; ಭಾರತದಲ್ಲಿ Mi Credit ಆರಂಭ

ನಿಮಗೆ ಗೊತ್ತಿರಲಿ: ಚೀನಾ ದೇಶವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ. ಅಲ್ಲಿನ ಸದ್ಯದ ಜಿಡಿಪಿ ಹದಿನಾಲ್ಕು ಟ್ರಿಲಿಯನ್ ಡಾಲರ್ ಗಿಂತ ಹೆಚ್ಚು. ಮುಂದಿನ ನಾಲ್ಕು ವರ್ಷದಲ್ಲಿ ಇಪ್ಪತ್ತು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವುದು ಚೀನಾದ ಗುರಿ. ಭಾರತಕ್ಕೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗುವ ಗುರಿಯನ್ನೇ ಯಾವಾಗ ಮುಟ್ಟಬಹುದು ಎಂಬ ಅಂದಾಜಿಲ್ಲ.

ಚೀನಾದ ಕಂಪೆನಿಗಳ ಜತೆ ಸ್ಪರ್ಧೆಯೇ ಅಸಾಧ್ಯ

ಚೀನಾದ ಕಂಪೆನಿಗಳ ಜತೆ ಸ್ಪರ್ಧೆಯೇ ಅಸಾಧ್ಯ

ಭಾರತದಲ್ಲಿ ಈಗ ಚೀನಾದ ಸರಕುಗಳು ಅದ್ಭುತವಾಗಿ ಬಿಕರಿ ಆಗುತ್ತಿವೆ. ಕೆಲ ವಲಯದ ದೇಶೀಯ ಕಂಪೆನಿಗಳಿಗೆ ಚೀನಾದ ಕಂಪೆನಿಗಳ ಜತೆ ಸ್ಪರ್ಧೆಯೇ ಅಸಾಧ್ಯ ಎಂಬಂತಾಗಿದೆ. ಉದಾಹರಣೆಗೆ ಸ್ಮಾರ್ಟ್ ಫೋನ್ ಕ್ಷೇತ್ರ. ಹಾಂಕಾಂಗ್ ಮೂಲದ ಒಂದು ಅಧ್ಯಯನ ವರದಿಯ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ ಚೀನಾದ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ಶೇಕಡಾ ಎಪ್ಪತ್ತೆರಡರಷ್ಟು ಆವರಿಸಿಕೊಂಡಿದೆ. ಎರಡು ವರ್ಷದ ಹಿಂದೆ ಈ ಪ್ರಮಾಣ ಅರವತ್ತು ಪರ್ಸೆಂಟ್ ಇತ್ತು. ಒಪ್ಪೋ, ವಿವೊ, ರಿಯಾಲ್ಮ್, ಒನ್ ಪ್ಲಸ್ ಶೇಕಡಾ ಮೂವತ್ತೇಳರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಶಿಯೋಮಿ ಮತ್ತು ಪೋಕೋ ಬ್ರ್ಯಾಂಡ್ ಗಳು ಶೇಕಡಾ ಇಪ್ಪತ್ತೆಂಟರಷ್ಟು ಪಾಲನ್ನು ಹೊಂದಿವೆ. ಚೀನಾದ ಬ್ರ್ಯಾಂಡ್ ಗಳು ಸಲಕರಣೆ ಮತ್ತು ಆಕ್ಸೆಸರೀಸ್ ಉತ್ಪಾದನೆ ಮೇಲೆ ಭಾರತದಲ್ಲಿ ಭಾರೀ ಮಟ್ಟದ ಹೂಡಿಕೆ ಮಾಡಿವೆ.

ಏಳು ಸ್ಮಾರ್ಟ್ ಫೋನ್ ಉತ್ಪಾದನಾ ಘಟಕ
 

ಏಳು ಸ್ಮಾರ್ಟ್ ಫೋನ್ ಉತ್ಪಾದನಾ ಘಟಕ

ತೈವಾನ್ ಮತ್ತು ಸಿಂಗಾಪೂರ್ ಮೂಲದ ಬಹುರಾಷ್ಟ್ರೀಯ ಕಂಪೆನಿಗಳ ಸಹಭಾಗಿತ್ವದೊಂದಿಗೆ ಶಿಯೋಮಿ ಸದ್ಯಕ್ಕೆ ಭಾರತದಲ್ಲಿ ಏಳು ಸ್ಮಾರ್ಟ್ ಫೋನ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಭಾರತದಲ್ಲಿ ಮಾರಾಟ ಆಗುವ ಶೇಕಡಾ ತೊಂಬತ್ತಕ್ಕಿಂತ ಹೆಚ್ಚು ಸ್ಮಾರ್ಟ್ ಫೋನ್ ಗಳು ಸ್ಥಳೀಯವಾಗಿಯೇ ತಯಾರಾಗುತ್ತವೆ. ಈ ಏಳು ಉತ್ಪಾದನಾ ಘಟಕದಲ್ಲಿ ಶಿಯೋಮಿಯಿಂದ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರನ್ನು ನೇಮಿಸಲಾಗಿದೆ. ಶಿಯೋಮಿಯಿಂದ ಸ್ಥಳೀಯವಾಗಿ ಸ್ಮಾರ್ಟ್ ಟಿವಿ ಉತ್ಪಾದನಾ ಘಟಕ ಕೂಡ ಆರಂಭಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಘಟಕ ಇದೆ. ಕಳೆದ ವರ್ಷ ಭಾರತದ ವ್ಯಾಪಾರ ಘಟಕಕ್ಕೆ ಶಿಯೋಮಿಯಿಂದ ಮೂರು ಸಾವಿರದ ಐನೂರು ಕೋಟಿ ಬಂಡವಾಳ ಹರಿದು ಬಂದಿದೆ. ಇನ್ನು ವಿವೋ ಭಾರತದಲ್ಲಿ ವಿಸ್ತರಣೆ ಯೋಜನೆ ಭಾಗವಾಗಿ ಏಳೂವರೆ ಸಾವಿರ ಕೋಟಿ ಹೂಡಲು ಬದ್ಧವಾಗಿದ್ದರೆ, ಟಿಸಿಎಲ್ ನಿಂದ ಮೊಬೈಲ್ ಹ್ಯಾಂಡ್ ಸೆಟ್ ಮತ್ತು ಟಿವಿ ಸ್ಕ್ರೀನ್ ತಯಾರಿಕೆಗಾಗಿ ತಿರುಪತಿ ಘಟಕಕ್ಕೆ ಎರಡು ಸಾವಿರದ ಇನ್ನೂರು ಕೋಟಿ ಹೂಡುತ್ತಿದೆ.

ಎಲ್ಲಿ ಹೋದವು ಸ್ವದೇಶಿ ಕಂಪೆನಿಗಳು?

ಎಲ್ಲಿ ಹೋದವು ಸ್ವದೇಶಿ ಕಂಪೆನಿಗಳು?

ಇಷ್ಟು ದೊಡ್ಡ ಪ್ರಮಾಣದಲ್ಲಿ ಚೀನಾ ಕಂಪೆನಿಗಳು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರೆ, ದೇಶೀಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ ಮತ್ತು ಕಾರ್ಬನ್ ಬ್ರ್ಯಾಂಡ್ ಗಳು ಏನಾಗಬಹುದು? ಭಾರತದಂಥ ಮಾರುಕಟ್ಟೆಯಲ್ಲಿ ಯಾವಾಗಲಾದರೂ ಚಿಗುರಿಕೊಳ್ಳಬಹುದು. ಆದರೆ ಭಾರತೀಯ ಮೊಬೈಲ್ ಫೋನ್ ಬ್ರ್ಯಾಂಡ್ ಗಳಿಗೆ ಮತ್ತೆ ಮಾರುಕಟ್ಟೆಯಲ್ಲಿ ಪಾಲು ಪಡೆಯುವುದು ಅಸಾಧ್ಯ ಎನ್ನುತ್ತಾರೆ ತಜ್ಞರು. ಚೀನಾದ ಬ್ರ್ಯಾಂಡ್ ಗಳು ಭಾರತಕ್ಕೆ ಪರಿಚಯವಾಗಿ ಐದು ವರ್ಷಗಳಷ್ಟೇ ಕಳೆದಿದೆ. ಅವುಗಳು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಗಳಿಸಿರುವುದಷ್ಟೇ ಅಲ್ಲ, ಇಲ್ಲಿನ ಗ್ರಾಹಕರ ಆಲೋಚನೆ, ಆದ್ಯತೆ, ಹೇಗೆ ಯಶಸ್ವಿಯಾಗಿ ತಲುಪಬಹುದು ಮತ್ತು ಮಾರುಕಟ್ಟೆ ತಂತ್ರಗಾರಿಕೆಯಲ್ಲೂ ತಿಳಿಯುವುದರಲ್ಲಿ ಪಳಗಿಹೋಗಿವೆ. ಈಗ ಭಾರತದ ಮೊಬೈಲ್ ಫೋನ್ ಬ್ರ್ಯಾಂಡ್ ಗಳು ಫೀಚರ್ ಫೋನ್ ಮೂಲಕ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಿಸಿಕೊಳ್ಳಬೇಕೇ ಹೊರತು, ಸ್ಮಾರ್ಟ್ ಫೋನ್ ಗಳ ಮೂಲಕ ಚೀನಾದ ಬ್ರ್ಯಾಂಡ್ ಗಳ ಜತೆ ಸೆಣೆಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿದೆ.

ಕಾರು ಮಾರುಕಟ್ಟೆಗೂ ಕಾಲಿಟ್ಟಿದೆ

ಕಾರು ಮಾರುಕಟ್ಟೆಗೂ ಕಾಲಿಟ್ಟಿದೆ

ಇನ್ನು ಆಟೋ ಎಕ್ಸ್ ಪೋ 2020ರ ಬಗ್ಗೆ ತಿಳಿದುಕೊಂಡರೆ ಚೀನೀ ಕಂಪೆನಿಗಳು ಹೇಗೆ ತಮ್ಮ ರಟ್ಟೆ ಹಿಗ್ಗಿಸುತ್ತಿವೆ ಎಂಬುದು ಮತ್ತೂ ಸ್ಪಷ್ಟವಾಗುತ್ತದೆ. ಎಸ್ ಎಐಸಿ (ಎಂಜಿ ಮೋಟಾರ್ಸ್ ಮಾಲೀಕತ್ವ ಇರುವ ಕಂಪೆನಿ), ಬಿವೈಡಿ (ಎಲೆಕ್ಟ್ರಿಕ್ ಬ ಮತ್ತು ಬ್ಯಾಟರಿಗಳ ತಯಾರಕರು), ಗ್ರೇಟ್ ವಾಲ್ (ಚೀನಾದಲ್ಲೇ ಅತಿ ದೊಡ್ಡ ಎಸ್ ಯುವಿ ತಯಾರಿಕೆ ಸಂಸ್ಥೆ), ಎಫ್ ಎಡಬ್ಲ್ಯು ಹೈಮಾ ಇನ್ನಿತರ ಕಾರು ತಯಾರಿಕಾ ಸಂಸ್ಥೆಗಳು ಶೇಕಡಾ ಇಪ್ಪತ್ತರಷ್ಟು ಮಾರುಕಟ್ಟೆ ಆವರಿಸಿವೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಭಾರತೀಯ ಆಟೋಮೊಬೈಲ್ ಕ್ಷೇತ್ರವೇ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದಾಗ ಚೀನಿ ಕಂಪೆನಿಗಳ ಮಾರಾಟ ಹೆಚ್ಚಾಗಿದೆ. ಹೆಕ್ಟರ್ ಎಸ್ ಯುವಿ ಮಾರಾಟವಂತೂ ಎಸ್ ಎಐಸಿಗೆ ಅದ್ಭುತ ಯಶಸ್ಸು ತಂದುಕೊಟ್ಟಿದೆ. ಕಳೆದ ವರ್ಷ ಜುಲೈನಲ್ಲಿ ಮಾರಾಟ ಆರಂಭಿಸಿದ ಹೆಕ್ಟರ್ ಭಾರತದಲ್ಲಿ ಈವರೆಗೆ ಹದಿನಾರು ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಇದೀಗ ಇಪ್ಪತ್ತೊಂದು ಲಕ್ಷದ ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡುತ್ತಿದೆ. ಈ ಕಾರಿಗೆ ಇಪ್ಪತ್ತೇಳು ದಿನದಲ್ಲಿ ಎರಡು ಸಾವಿರದ ಎಂಟುನೂರು ಬುಕ್ಕಿಂಗ್ ಬಂದಿದೆ. ತಜ್ಞರ ಪ್ರಕಾರ, ಮುಂದಿನ ಮೂರು ವರ್ಷದಲ್ಲಿ ಭಾರತದಲ್ಲಿ ಹದಿನಾಲ್ಕರಿಂದ ಹದಿನೈದು ಸಾವಿರ ಕೋಟಿ ರುಪಾಯಿಯಷ್ಟು ವ್ಯವಹಾರವನ್ನು ಈ ಎಲೆಕ್ಟ್ರಿಕಲ್ ವಾಹನಗಳು ಮಾಡಬಹುದು ಎಂಬ ಅಂದಾಜಿದೆ.

English summary

China Business Brands Capturing Market In India

How China business brands from smart phone to tv capturing Indian market? Here is an analysis.
Story first published: Sunday, January 26, 2020, 20:54 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more