ಚೀನಾಕ್ಕೆ ದೊಡ್ಡ ಹೊಡೆತ: ಜಿಡಿಪಿ ಬೆಳವಣಿಗೆ 1 ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ!
ಏಷ್ಯಾದ ಅತಿದೊಡ್ಡ ಆರ್ಥಿಕತೆ ಡ್ರ್ಯಾಗನ್ ರಾಷ್ಟ್ರ ಚೀನಾದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಚೀನಾದ ಆರ್ಥಿಕತೆಯು ಮೂರನೇ ತ್ರೈಮಾಸಿಕದಲ್ಲಿ ಒಂದು ವರ್ಷದಲ್ಲಿ ನಿಧಾನಗತಿಯಲ್ಲಿ ಬೆಳೆದಿದ್ದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ವಿದ್ಯುತ್ ಕೊರತೆ, ಪೂರೈಕೆ ಸರಪಳಿ ಅಡಚಣೆಗಳು ಮತ್ತು ಕೊರೊನಾವೈರಸ್ ಸಾಂಕ್ರಾಮಿಕದ ತೊಂದರೆಯಿಂದಾಗಿ ಚೀನಾದ ಬೆಳವಣಿಗೆಗೆ ಹಾನಿಯಾಗಿದೆ. ಸೋಮವಾರ ಬಿಡುಗಡೆಯಾದ ದತ್ತಾಂಶವು ಚೀನಾದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಜುಲೈ-ಸೆಪ್ಟೆಂಬರ್ನಲ್ಲಿ ಶೇಕಡಾ 4.9ರಷ್ಟು ವೃದ್ಧಿಯಾಗಿದೆ. ಇದು 2020ರ ಮೂರನೇ ತ್ರೈಮಾಸಿಕದ ನಂತರದ ದುರ್ಬಲ ವೇಗವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್-ಜೂನ್ ನಲ್ಲಿ, ಈ ವೇಗವು ಶೇಕಡಾ 7.9 ಆಗಿತ್ತು.

ಬೆಳವಣಿಗೆ ದರಕ್ಕೆ ಅಡ್ಡಿಯಾಗಿದೆ
ಮೊದಲ ತ್ರೈಮಾಸಿಕದಲ್ಲಿ ಚೀನಾದ ಬೆಳವಣಿಗೆಯ ದರವು ತ್ಯಂತ ವೇಗವಾಗಿತ್ತು. ಜನವರಿ-ಮಾರ್ಚ್ನಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ಶೇ. 18.3 ರಷ್ಟಿತ್ತು. ಇದು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗಿದ್ದು, ಹಿಂದಿನ ವರ್ಷದ ಕಡಿಮೆ-ಬೇಸ್ನಿಂದಾಗಿ ಇದು ಹೆಚ್ಚಾಗಿತ್ತು. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಚೀನಾದ ಜಿಡಿಪಿ ಬೆಳವಣಿಗೆ ದರವು ಕೊರೊನಾದಿಂದಾಗಿ ತುಂಬಾ ದುರ್ಬಲವಾಗಿತ್ತು. ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (NBS) ವಕ್ತಾರ ಫು ಲಿಂಗ್ಹುಯಿ ಅವರು ದೇಶೀಯ ಆರ್ಥಿಕ ಚೇತರಿಕೆ ಇನ್ನೂ ಅಸ್ಥಿರವಾಗಿದೆ ಎಂದು ಯೂರೋನ್ಯೂಸ್ ವರದಿ ಮಾಡಿದೆ.
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಅಕ್ಟೋಬರ್ 18ರ ಮಾರುಕಟ್ಟೆ ಬೆಲೆ ಇಲ್ಲಿದೆ

ಕಡಿಮೆ ಬೆಳವಣಿಗೆ ಅಂದಾಜು
ನಿರೀಕ್ಷೆಗಿಂತ ಚೀನಾದ ಜಿಡಿಪಿ ಬೆಳವಣಿಗೆ ಅಂದಾಜುಗಿಂತ ಕಡಿಮೆಯಾಗಿದೆ. ರಾಯಿಟರ್ಸ್ ಸಮೀಕ್ಷೆಯು ಮೂರನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ 5.2 ಪ್ರತಿಶತದಷ್ಟು ಬೆಳೆಯುತ್ತದೆ ಎಂದು ನಿರೀಕ್ಷಿಸಿತ್ತು. ತ್ರೈಮಾಸಿಕ ಆಧಾರದ ಮೇಲೆ, ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 1.2 (ಕಡಿಮೆಯಾದ ನಂತರ ಪರಿಷ್ಕರಿಸಿದ) ನಿಂದ ಜುಲೈ-ಸೆಪ್ಟೆಂಬರ್ನಲ್ಲಿ ಶೇಕಡಾ 0.2ರಷ್ಟು ಇಳಿದಿದೆ. ಆದರೆ ಇದು ಕಾರ್ಖಾನೆಯ ಚಟುವಟಿಕೆ ಕುಂಠಿತಗೊಳ್ಳುವುದು, ಸ್ಥಿರವಾಗಿ ಕಡಿಮೆಯಾಗುತ್ತಿರುವ ಬಳಕೆ ಮತ್ತು ಆಸ್ತಿ ವಲಯದಲ್ಲಿನ ಮಂದಗತಿಯಂತಹ ಹಲವಾರು ಕಾರಣಗಳಿಂದಾಗಿ ಜಿಡಿಪಿ ಬೆಳವಣಿಗೆ ಕುಸಿತಕ್ಕೆ ಕಾರಣವಾಗಿದೆ.

ನಿರೀಕ್ಷೆಗಿಂತ ಕುಸಿದಿದೆ ಚೀನಾ ಆರ್ಥಿಕತೆ
ಚೀನಾದ ಕೇಂದ್ರ ಬ್ಯಾಂಕ್ ಗವರ್ನರ್ ಯಿ ಗ್ಯಾಂಗ್ ಅವರು ಚೀನಾದ ಆರ್ಥಿಕತೆಯು ಈ ವರ್ಷ ಶೇಕಡ 8ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ಕೈಗಾರಿಕಾ ಉತ್ಪಾದನೆಯು ಹಿಂದಿನ ವರ್ಷಕ್ಕಿಂತ ಶೇಕಡಾ 3.1 ರಷ್ಟು ಹೆಚ್ಚಾಗಿದೆ. ಈ ಅಂಕಿ ಅಂಶಗಳು ನಿರೀಕ್ಷೆಗಿಂತ ಕೆಳಗಿವೆ, ಆಗಸ್ಟ್ನಲ್ಲಿ ಶೇಕಡಾ 5.3 ಕ್ಕೆ ಇಳಿದಿದೆ. ಇವು ಮಾರ್ಚ್ 2020 ರ ನಂತರದ ನಿಧಾನಗತಿಯ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ಆದರೆ ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ. ಚಿಲ್ಲರೆ ಮಾರಾಟವು ಸೆಪ್ಟೆಂಬರ್ನಲ್ಲಿ ಶೇಕಡಾ 4.4 ರಷ್ಟು ಹೆಚ್ಚಾಗಿದೆ, ಆಗಸ್ಟ್ನಲ್ಲಿ ಇದು 2.5 ಶೇಕಡಾರಷ್ಟಿತ್ತು.

ಚೀನಾಕ್ಕೆ ಏಕೆ ಈ ಹಿನ್ನಡೆ?
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಲ್ಲಿದ್ದಲಿನ ಸಮಸ್ಯೆ ದೊಡ್ಡ ಮಟ್ಟಿಗೆ ಕಾಡತೊಡಗಿದೆ. ಕಳೆದ ಒಂದೂವರೆ ವರ್ಷ ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕ ಆರ್ಥಿಕತೆಗೆ ಸಂಚಕಾರ ತಂದೊಡ್ಡಿದ್ರೆ, ಇದೀಗ ಕಲ್ಲಿದ್ದಲು ಕೊರತೆ, ವಿದ್ಯುತ್ ಪೂರೈಕೆಯನ್ನೇ ಅಲುಗಾಡತೊಡಗಿಸುತ್ತಿದೆ. ಏಷ್ಯಾದ ಅತಿದೊಡ್ಡ ಆರ್ಥಿಕತೆಯಾದ ಚೀನಾದಲ್ಲಿ ಈಗಾಗಲೇ ಕಲ್ಲಿದ್ದಲಿನ ಕೊರತೆ ಬಹುದೊಡ್ಡ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ಇದು ಕೈಗಾರಿಕಾ ಉತ್ಪಾದನೆ ಮೇಲೆ ದೊಡ್ಡ ಮಟ್ಟಿನ ಪರಿಣಾಮ ಬೀರಿದೆ. ಜೊತೆಗೆ ಪ್ರವಾಹ, ಕೊರೊನಾ ಸೋಂಕು ಚೀನಾದ ಆರ್ಥಿಕತೆ ಬೆಳವಣಿಗೆ ಅಡ್ಡಿಯಾಗಿದೆ.
ಭಾರತಕ್ಕೂ ಕಾಡಲಿದ್ಯಾ ಕಲ್ಲಿದ್ದಲು ಕೊರತೆ: ಚೀನಾ ಬಳಿಕ ದೇಶಕ್ಕೆ ಎಚ್ಚರಿಕೆ ಕರೆಗಂಟೆ!