For Quick Alerts
ALLOW NOTIFICATIONS  
For Daily Alerts

ಚೀನಾ ಆರ್ಥಿಕತೆಯ ವೇಗ: ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 18.3%

|

ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆ ನಡುವೆ ಡ್ರ್ಯಾಗನ್ ರಾಷ್ಟ್ರ ಚೀನಾ ದಾಖಲೆಯನ್ನೇ ಸೃಷ್ಟಿಸಿದೆ. ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆಯು ವೇಗವಾಗಿ ವಿಸ್ತರಿಸಿದೆ ಎಂದು ಅಂಕಿ-ಅಂಶಗಳು ಶುಕ್ರವಾರ ತೋರಿಸಿದೆ.

 

ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇಕಡಾ 18.3ರಷ್ಟು ಬೆಳವಣಿಗೆ ಸಾಧಿಸಿದೆ. ದೇಸಿ ಮಾರುಕಟ್ಟೆಯಲ್ಲಿ ಹಾಗೂ ವಿದೇಶಗಳಲ್ಲಿ ಉತ್ತಮ ಬೇಡಿಕೆ ಕಂಡುಬಂದ ಕಾರಣಕ್ಕೆ ಚೀನಾದ ಜಿಡಿಪಿ ಜಿಗಿತ ಸಾಧಿಸಿದೆ.

ಚೀನಾ ಆರ್ಥಿಕತೆಯ ವೇಗ: ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 18.3%

ಇನ್ನು ಮಾರ್ಚ್‌ ತ್ರೈಮಾಸಿಕದಲ್ಲಿ ಚೀನಾದ ಕೈಗಾರಿಕಾ ಉತ್ಪಾದನೆಯು ಸ್ಥಿರವಾದ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಮಾರಾಟದ ಪ್ರಮಾಣವು ಏರುತ್ತಾ ಸಾಗಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಸರಕು ಸಾಗಾಟಣೆಯ ಪ್ರಮಾಣದಲ್ಲೂ ಹೆಚ್ಚಾಗಿದೆ.

ಚಿನ್ನದ ಬೆಲೆ: ಕಳೆದ 15 ದಿನಗಳಲ್ಲಿ ಶೇಕಡಾ 6ರಷ್ಟು ಹೆಚ್ಚಳ

ಈ ಮೂಲಕ 1992ರ ಬಳಿಕ ಚೀನಾದ ಆರ್ಥಿಕತೆ ಮತ್ತೊಂದು ದಾಖಲೆ ಬರೆದಿದೆ. ಕೇವಲ 29 ವರ್ಷಗಳ ಅವಧಿಯಲ್ಲಿ ಚೀನಾ ಜಗತ್ತಿನ ನಂಬರ್ 1 ಅಮೆರಿಕಾಕ್ಕೆ ಸರಿಸಮವಾಗಿ ಬೆಳೆಯುತ್ತಿದೆ.

ಈಗಾಗಲೇ ಜಗತ್ತಿನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಒಳಗೊಂಡಿರುವ ರಾಷ್ಟ್ರ ಎಂಬ ಖ್ಯಾತಿಗೆ ಒಳಗಾಗಿರುವ ಚೀನಾವು, ವಿಶ್ವದ ದೊಡ್ಡಣ್ಣ ಅಮೆರಿಕಾಗೂ ದೊಡ್ಡ ಸವಾಲಾಗಿ ಪರಿಣಾಮಿಸಿದೆ.

English summary

China GDP Up Record 18.3% In First Quarter

China's economy expanded at its fastest pace on record in the first quarter, data showed Friday. GDP figure of 18.3 percent is slightly below forecasts
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X