For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ ಈಗಲೂ ಮುಕ್ತವಾಗಿದೆ ವ್ಯಾಪಾರ ಒಪ್ಪಂದದ ಬಾಗಿಲು; ಏನಿದು RCEP?

By ಅನಿಲ್ ಆಚಾರ್
|

ಚೀನಾ ಮತ್ತು ಇತರ ಹದಿನಾಲ್ಕು ರಾಷ್ಟ್ರಗಳು ಸೇರಿ ವಿಶ್ವದ ಅತಿ ದೊಡ್ಡ ವ್ಯಾಪಾರ ಬಣವನ್ನಾಗಿ ಮಾಡಿಕೊಂಡಿವೆ. ಒಟ್ಟಾರೆ ಆರ್ಥಿಕ ಚಟುವಟಿಕೆಯ ಶೇಕಡಾ ಮೂವತ್ಮೂರರಷ್ಟನ್ನು ಇದು ದಾಟುತ್ತದೆ. ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಏಷ್ಯಾದಲ್ಲಿ ಈ ವ್ಯವಹಾರವು ಬದಲಾವಣೆ ತರಲಿದೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಅಥವಾ RCEP ಭಾನುವಾರದಂದು ವರ್ಚುವಲ್ ಆಗಿ, ಸಹಿ ಹಾಕಲಾಗಿದೆ. ಆಗ್ನೇಯ ರಾಷ್ಟ್ರಗಳ ಹತ್ತು ದೇಶಗಳ ಒಕ್ಕೂಟಗಳ ವಾರ್ಷಿಕ ಸಮಾವೇಶದ ಭಾಗವಾಗಿ ಈ ಒಪ್ಪಂದ ಆಗಿದೆ. ಎಂಟು ವರ್ಷಗಳ ಕಾಲ ರಕ್ತ, ಬೆವರು ಹಾಗೂ ಕಣ್ಣೀರು ಹರಿಸಿ, ಸಂಧಾನ ನಡೆಸಿದ ನಂತರ, ಅಂತಿಮವಾಗಿ RCEP ಒಪ್ಪಂದಕ್ಕೆ ನಾವಿನ್ನು ಸಹಿ ಹಾಕಲಿದ್ದೇವೆ ಎಂದು ಮಲೇಷ್ಯಾ ವಾಣಿಜ್ಯ ಸಚಿವ ಮೊಹ್ಮದ್ ಅಜ್ಮಿನ್ ಅಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ಪಾಲಿಗೆ ಅವಕಾಶ ಮುಕ್ತವಾಗಿದೆ
 

ಭಾರತದ ಪಾಲಿಗೆ ಅವಕಾಶ ಮುಕ್ತವಾಗಿದೆ

ಕಷ್ಟದ ಸಮಯದಲ್ಲಿ ವಿರೋಧಿಸುವ ಬದಲಿಗೆ RCEP ದೇಶಗಳು ಮುಕ್ತ ಮಾರುಕಟ್ಟೆಯನ್ನು ಆರಿಸಿಕೊಂಡಿವೆ ಎಂದು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಂದೇಶವೊಂದನ್ನು ರವಾಸಿದಂತಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಈ ದೇಶಗಳ ಮಧ್ಯೆ ತೆರಿಗೆ ಕಡಿಮೆ ಇದೆ. ಮುಂಬರುವ ದಿನಗಳಲ್ಲಿ ಅದು ಇನ್ನೂ ಕಡಿಮೆ ಆಗಲಿದೆ. ಈ ಹಿಂದೆ ಡೊನಾಲ್ಡ್ ಟ್ರಂಪ್ ಆದ ತಕ್ಷಣ ಹನ್ನೊಂದು ರಾಷ್ಟ್ರಗಳ ಪೆಸಿಫಿಕ್ ವಾಣಿಜ್ಯ ವ್ಯವಹಾರಕ್ಕೆ ಬರಲಾಗಿತ್ತು. ಅದಕ್ಕಿಂತ ಇದು ಕಡಿಮೆ ಸಮಗ್ರತೆ ಹೂಂದಿದೆ. ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ ಅಡಿಯಲ್ಲಿ ಬರುವ ಹತ್ತು ದೇಶಗಳು ಈ ಒಕ್ಕೂಟದಲ್ಲಿವೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಇದ್ದು, ಯುನೈಟೆಡ್ ಸ್ಟೇಟ್ಸ್ ಇಲ್ಲ. ಇನ್ನು ಭಾರತದ ಪಾಲಿಗೆ ಅವಕಾಶ ಮುಕ್ತವಾಗಿದೆ. ಈ ಬಣವನ್ನು ಸೇರಲು ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತವು ಸೇರ್ಪಡೆ ಆಗಿಲ್ಲ.

ಅತಿ ದೊಡ್ಡ ಮಾರುಕಟ್ಟೆ ಇರುವುದು ಚೀನಾದಲ್ಲಿ

ಅತಿ ದೊಡ್ಡ ಮಾರುಕಟ್ಟೆ ಇರುವುದು ಚೀನಾದಲ್ಲಿ

RCEP ಸಭೆಗೂ ಮುನ್ನ ಜಪಾನ್ ಪ್ರಧಾನಿ ತಮ್ಮ ಸರ್ಕಾರದ ಬೆಂಬಲವವನ್ನು ಸ್ಥಿರವಾಗಿ ನೀಡುವುದಾಗಿಯೂ ಇನ್ನಷ್ಟು ವಿಸ್ತೃತವಾದ ಉಚಿತ ಹಾಗೂ ನ್ಯಾಯಸಮ್ಮತ ಆರ್ಥಿಕ ವಲಯ ಬೆಂಬಲಿಸುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಭಾರತ ಕೂಡ ಈ ಒಪ್ಪಂದದೊಳಗೆ ಬರಬಹುದು ಹಾಗೂ ಇತರ ದೇಶಗಳು ಸಹ ಬೆಂಬಲಿಸಬಹುದು ಎಂದಿದ್ದಾರೆ. ಈಗ ಈ ಬಣದಲ್ಲಿ ಅತಿ ದೊಡ್ಡ ಮಾರುಕಟ್ಟೆ ಇರುವುದು ಚೀನಾದಲ್ಲಿ. ಹೆಚ್ಚಿನ ಲಾಭ ಆಗುವುದು ಸಹ ಅದಕ್ಕೇ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಟ್ರಂಪ್ ಪ್ರತಿಸ್ಪರ್ಧಿ ಜೋ ಬಿಡೆನ್ ಈಗ ಯುಎಸ್ ಅಧ್ಯಕ್ಷರಾಗಲಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. ಈಗ ಆಗ್ನೇಯ ಏಷ್ಯಾ ದೇಶಗಳು ಯುಎಸ್ ಕಡೆಯ ಬದಲಾವಣೆ ಬಗ್ಗೆ ಕುತೂಹಲದಿಂದ ಕಾಯುತ್ತಿವೆ. ಟ್ರಂಪ್ ಅವಧಿಯಲ್ಲಿ ಚೀನಾದ ಮೇಲೆ ಹಾಕಿದ್ದ ನಿರ್ಬಂಧಗಳನ್ನು ತೆರವುಗೊಳಿಸಿ, ಮತ್ತೆ ಏಷ್ಯಾ ಪೆಸಿಫಿಕ್ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.

ಇನ್ನೂರು ಕೋಟಿ ಮಂದಿ ಇದ್ದಾರೆ
 

ಇನ್ನೂರು ಕೋಟಿ ಮಂದಿ ಇದ್ದಾರೆ

ತುಂಬ ವೇಗವಾಗಿ ಬೆಳೆಯುವ ಆಗ್ನೇಯ ಏಷ್ಯಾ ದೇಶಗಳೀಗ ತುರ್ತಾಗಿ ಆರ್ಥಿಕತೆ ಏರಿಕೆ ಕಾಣಬೇಕಿದೆ. RCEP ಮೂಲತಃ 360 ಕೋಟಿಯಷ್ಟು ಜನರನ್ನು, ವಿಶ್ವ ವ್ಯಾಪಾರದ ಹಾಗೂ ಜಾಗತಿಕ ಜಿಡಿಪಿಯ ಶೇಕಡಾ ಮೂವತ್ಮೂರರಷ್ಟು ಒಳಗೊಳ್ಳುವ ಸಾಮರ್ಥ್ಯ ಇದೆ. ಭಾರತವನ್ನು ಹೊರತುಪಡಿಸಿಯೇ ಇನ್ನೂರು ಕೋಟಿ ಮಂದಿಯನ್ನು ಇಂದು ಹೊಂದಿದೆ. ಎಲ್ಲ ವಾಣಿಜ್ಯ ಹಾಗೂ ವ್ಯಾಪಾರದ ಶೇಕಡಾ ಮೂವತ್ಮೂರರಷ್ಟು ಕವರ್ ಆಗುತ್ತದೆ. ಯುನೈಟೆಡ್ ಸ್ಟೇಟ್ಸ್- ಮೆಕ್ಸಿಕೋ- ಕೆನಡಾ ಒಪ್ಪಂದವು ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಪ್ಪಂದವಾಗಿ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಹೊಸ ಸ್ವರೂಪ ಪಡೆಯಿತು. ವಿಶ್ವದ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯು, ಸ್ವಲ್ಪ ಕಡಿಮೆ ಆರ್ಥಿಕ ಚಟುವಟಿಕೆಯನ್ನು ಒಳಗೊಳ್ಳುತ್ತದೆ.

ವಿದೇಶೀ ಸಂಸ್ಥೆಗಳ ಸ್ಪರ್ಧೆಯ ಬಗ್ಗೆ ಚಿಂತೆ

ವಿದೇಶೀ ಸಂಸ್ಥೆಗಳ ಸ್ಪರ್ಧೆಯ ಬಗ್ಗೆ ಚಿಂತೆ

ಯುರೋಪಿಯನ್ ಒಕ್ಕೂಟ ಮತ್ತು ಸಮಗ್ರ ಹಾಗೂ ಪ್ರಗತಿಪರ ಟ್ರಾನ್ಸ್- ಪೆಸಿಫಿಕ್ ಸಹಭಾಗಿತ್ವವು ಪರಿಷ್ಕೃತ ಅವತರಣಿಕೆ. ಅದನ್ನು ಟ್ರಂಪ್ ತಿರಸ್ಕರಿಸಿದ್ದರು. ಜತೆಗೆ ಅದು ಚಿಕ್ಕದು. ಆದರೆ RCEP ಸಿಪಿಟಿಪಿಪಿಯಲ್ಲಿನ ಬಾಕಿ ಹನ್ನೊಂದರಲ್ಲಿ ಆರನ್ನು ಹೊಂದಿರುತ್ತದೆ. ವಿದೇಶೀ ರೈತರು, ಕಾರ್ಖಾನೆಗಳ ಜತೆಗೆ ಸ್ಪರ್ಧೆಗೆ ಮುಕ್ತ ಮಾಡುವುದು ಹೇಗೆ ಎಂದು ಭಾರತ ಸರ್ಕಾರ ಆಲೋಚಿಸುತ್ತಿದೆ. ಇನ್ನು ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ಡೇರಿ ವಲಯದವರ ಜತೆಗೆ ಭಾರತದವರು ಸರ್ಧಿಸುವುದು ಹೇಗೆ ಎಂಬ ಆತಂಕ ಅದು. ಇನ್ನು ವಾಹನ ಕ್ಷೇತ್ರದ ಬಗ್ಗೆ ಕೂಡ ಆತಂಕ ಇದೆ. ಇವೆಲ್ಲಕ್ಕಿಂತ ಭಯ ಇರುವುದು ಚೀನಾದಿಂದ ಹರಿದುಬರುವ ಉತ್ಪಾದನಾ ವಸ್ತುಗಳ ಬಗ್ಗೆ. ಏಷ್ಯಾದೊಳಗೆ ಹೂಡಿಕೆ ಮತ್ತು ವ್ಯವಹಾರ ಪ್ರಮಾಣ ಕಳೆದು ಒಂದು ದಶಕದಲ್ಲಿ ವಿಸ್ತಾರ ಮಾಡಿಕೊಳ್ಳಲಾಗಿದೆ. ಜತೆಗೆ ಯುಎಸ್ ಮತ್ತು ಚೀನಾ ವಾಣಿಜ್ಯ ಉದ್ವಿಗ್ನತೆಗೆ ತಮಣಿ ಆಗಬೇಕಿದೆ.

English summary

China Majority ASEAN Countries Set World's Biggest Trade Pact, Door Open For India

China, ASEAN countries set world's biggest trade pact. Door open for India to join.
Company Search
COVID-19