For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಟ್ಟದ ಜೀರೋ -ಸಮ್ ಗೇಮ್ ಗೆ ಚೀನಾ ಚಕ್ಮೇಟ್ !

By ರಂಗಸ್ವಾಮಿ ಮೂಕನಹಳ್ಳಿ
|

ಅಮೇರಿಕಾ ಅಧ್ಯಕ್ಷ ಜೋಸೆಫ್ ಬಿಡೆನ್ ನಾವು ಇನ್ನೊಂದು ಶೀತಲ ಸಮರ (ಕೋಲ್ಡ್ ವಾರ್ ) ಬಯಸುವುದಿಲ್ಲ ಎಂದು ಚೀನಾದ ಹೆಸರನ್ನ ಪ್ರಸ್ತಾಪಿಸದೆ ಹೇಳಿಕೆಯನ್ನ ನೀಡಿದ್ದಾರೆ. ಅಫ್ಘಾನ್ ದೇಶದಲ್ಲಿ ಕಳೆದ ಇಪ್ಪತ್ತು ವರ್ಷದಿಂದ ನಡೆಯುತ್ತಿದ್ದ ಯುದ್ಧವನ್ನ ಕೂಡ ನಾವು ನಿಲ್ಲಿಸಿದ್ದೇವೆ , ನಮ್ಮದು ಇನ್ನು ಮುಂದೆ ಏನಿದ್ದರೂ ಲೋಕ ಕಲ್ಯಾಣಕ್ಕೆ , ಜಗತ್ತಿನ ಜನರ ಶಾಂತಿಗೆ ಮಾತುಕತೆಯ ಮೂಲಕ , ಸಂಧಾನದ ಮೂಲಕ ಮಾತ್ರ ವ್ಯವಹಾರ ನಡೆಯುತ್ತದೆ. ಹೊಸ ಹೂಡಿಕೆ ಮತ್ತು ಅಭಿವೃದ್ಧಿಯ ಮೂಲಕ ಜಗತ್ತಿನ ಎಲ್ಲಾ ಜನರ ಬದುಕನ್ನ ಇನ್ನಷ್ಟು ಉತ್ತಮ ಗೊಳಿಸುವುದು ನಮ್ಮ ಗುರಿ ಎನ್ನುವ ಮಾತುಗಳನ್ನ ಕೂಡ ಆಡಿದ್ದಾರೆ.

 

ಚೀನಾ ದೇಶದ ಫಾರಿನ್ ಮಿನಿಸ್ಟರ್ ಅಮೇರಿಕಾ ಅಧ್ಯಕ್ಷರ ಈ ಹೇಳಿಕೆಗೆ ಉತ್ತರವನ್ನ ನೀಡುತ್ತಾ ' ಅಮೇರಿಕಾ ಮೊದಲು ಜೀರೋ -ಸಮ್ ಗೇಮ್ ಮತ್ತು ಸ್ಮಾಲ್ ಕ್ಲಿಕ್ಯೂಸ್ ' ಗಳನ್ನ ಸೃಷ್ಟಿಸುವುದು ಬಿಡಬೇಕು ಎನ್ನುವ ಮಾತನ್ನ ಆಡಿದ್ದಾರೆ. ಅಂತರರಾಷ್ತ್ರೀಯ ಮಟ್ಟದಲ್ಲಿ ನಮ್ಮನ್ನ ಮೂಲೆಗುಂಪು ಮಾಡಲು ಹವಣಿಸುವುದು ಅಥವಾ ಬಲ ಪ್ರಯೋಗ ಮಾಡಿ ಮ್ಯಾನ್ ಹ್ಯಾಂಡಲ್ ಮಾಡಲು ಬರುವುದು ನಿಲ್ಲಿಸಬೇಕು. ಇವತ್ತು ಬೇಕಾಗಿರುವುದು ಎರಡೂ ದೇಶಗಳ ನಡುವೆ ಸಹಕಾರ , ವಿನ್-ವಿನ್ ಫಲಿತಾಂಶ ಮತ್ತು ನಮ್ಮ ನಡುವೆ ಬೆಳೆದಿರುವ ಅಗಾಧ ಗೋಡೆಯನ್ನ ಕೆಡವುವ ಕೆಲಸ ಎನ್ನುವ ಹೇಳಿಕೆ ಕೂಡ ಜ್ಹಾವ್ ಹೇಳಿದ್ದಾರೆ.

ಇದರ ನಂತರ ಮಾತನಾಡಿದ ಚೀನಾ ಅಧ್ಯಕ್ಷ ಜಿ ಜಿನ್ಪಿಂಗ್ ಸಣ್ಣ ಸಣ್ಣ ವೃತ್ತಗಳನ್ನ ಸೃಷ್ಟಿಸಿಕೊಂಡು ನಮ್ಮನ್ನ ಎದುರಿಸುವ ಬದಲು ಜಾಗತಿಕ ಮಟ್ಟದ ನಾಯಕರು ನಮ್ಮೊಂದಿಗೆ ಮಾತುಕತೆ ಮತ್ತು ಸಹಕಾರ ಗಳಿಂದ ಇರುವ ಬಿನ್ನಾಭಿಪ್ರಾಯ ಹೋಗಲಾಡಿಸಕೊಳ್ಳಬೇಕು ಎಂದಿದ್ದಾರೆ.

ಜಾಗತಿಕ ಮಟ್ಟದ ಜೀರೋ -ಸಮ್ ಗೇಮ್ ಗೆ ಚೀನಾ ಚಕ್ಮೇಟ್ !

ನಿಮಗೆಲ್ಲಾ ತಿಳಿದಿರಲಿ , ಅಮೇರಿಕಾ, ಭಾರತ ,ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಕ್ವಾಡ್ ಎನ್ನುವ ಒಕ್ಕೊಟವನ್ನ ಸೃಷ್ಟಿಸಿಕೊಂಡು ಚೀನಾ ದೇಶಕ್ಕೆ ಮೂಗುದಾರ ತೊಡಿಸಲು ಹವಣಿಸುತ್ತಿವೆ. ಇದರ ಜೊತೆಗೆ ಅಮೇರಿಕಾ , ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮತ್ತೊಂದು ಗುಂಪು ಕೂಡ ಸೃಷ್ಟಿಸಿಕೊಂಡಿದೆ. ಇವೆಲ್ಲುವುಗಳ ಮೂಲ ಉದ್ದೇಶ ಹೇಗಾದರೂ ಮಾಡಿ ಚೀನಾ ದೇಶವನ್ನ ಮಣಿಸುವುದಾಗಿದೆ.

 

ಚೀನಾ ಅಧ್ಯಕ್ಷರಿಗೆ ಇದು ತಿಳಿಯದ ವಿಷಯವೇನಲ್ಲ , ಈ ಬಾರಿ ಅಗ್ಗ್ರೆಸಿವ್ ಆಗಿ ಮಾತನಾಡುವುದರ ಬದಲು ಪ್ರಥಮ ಬಾರಿಗೆ ಅವರು ಜಗತ್ತಿಗೆ ಇಂದು ಬೇಕಾಗಿರುವುದು ಶಾಂತಿ , ಅಭಿವೃದ್ಧಿ , ಜಸ್ಟಿಸ್ ,ಡೆಮಾಕ್ರಸಿ ಮತ್ತು ಫ್ರೀಡಂ ಆದರೆ ಇವುಗಳನ್ನ ನಾವು ಮಾತುಕತೆಯಿಂದ ಮಾತ್ರ ಸಾಧಿಸಬಹುದೇ ಹೊರತು ಸ್ಮಾಲ್ ಸರ್ಕಲ್ಸ್ ಮತ್ತು ಜೀರೋ -ಸಮ್ ಗೇಮ್ಸ್ ಗಳಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ತಮ್ಮ ಫಾರಿನ್ ಮಿನಿಸ್ಟರ್ ಮಾತುಗಳನ್ನ ಪುನರುಚ್ಚರಿಸಿದ್ದಾರೆ. ಈ ಜಗತ್ತು ನಮ್ಮೆಲ್ಲರ ಸೋಲು ಗೆಲುವುಗಳಿಗೆ ಬಹಳ ದೊಡ್ಡ ಜಾಗವನ್ನ ನೀಡಿದೆ , ನಾವು ಕಾದಾಟಕ್ಕೆ ಇಳಿಯುವುದು ಸಲ್ಲದು ಎನ್ನುತ್ತಾ ಶಾಂತಿ ಮಂತ್ರವನ್ನ ತಮ್ಮ ಭಾಷಣದಲ್ಲಿ ಹಲವು ಬಾರಿ ಪಠಿಸಿದ್ದಾರೆ.

ಅಮೇರಿಕಾ , ಯೂರೋಪಿಯನ್ ಯೂನಿಯನ್ ಸಮೇತ ಬಹಳಷ್ಟು ಪ್ರಭಾವಿ ದೇಶಗಳು ಕೋವಿಡ್ ವೈರಸ್ ಉಗಮದ ಬಗ್ಗೆ ತನಿಖೆ ನೆಡೆಸಲು ಒತ್ತಾಯಿಸುತ್ತಿರುವುದರಿಂದ , ಮತ್ತು ಜಾಗತಿಕ ಮಟ್ಟದಲ್ಲಿ ಚೀನಾದ ವಿರುದ್ಧ ಸಣ್ಣ ಸಣ್ಣ ಸ್ಟ್ರಾಟರ್ಜಿಕ್ ಗುಂಪುಗಳನ್ನ ರಚಿಸಿಕೊಂಡು ಮಟ್ಟಹಾಕಲು ಸಿದ್ಧತೆಯನ್ನ ಮಾಡಿಕೊಂಡಿರುವುದು ಚೀನಾದ ಧ್ವನಿಯನ್ನ ಮೆತ್ತಗಾಗಿಸಿದೆ. ಅದರ ಬಾಯಲ್ಲಿ ಶಾಂತಿ ಮಂತ್ರ ಬರುತ್ತಿದೆ.

ಚೀನಾ ಅಧ್ಯಕ್ಷರು ಮತ್ತು ವಿದೇಶಾಂಗ ಸಚಿವರ ಬಾಯಲ್ಲಿ ಕೇಳಿ ಬಂದ ಜೀರೋ -ಸಮ್ ಗೇಮ್ ಎಂದರೇನು ಗೊತ್ತೇ ?

ಜೀರೋ ಸಮ್ ಎನ್ನುವುದು ಒಂದು ಸನ್ನಿವೇಶ ಅಥವಾ ಅದೊಂದು ಆಟದ ನಿಯಮ. ಈ ಆಟದ ಪ್ರಕಾರ ಒಬ್ಬರ ಲಾಭ ಇನ್ನೊಬ್ಬರ ನಷ್ಟಕ್ಕೆ ಸರಿಸಮನಾಗಿರುತ್ತದೆ. ಹೀಗಾಗಿ ಒಟ್ಟು ಫಲಿತಾಂಶದಲ್ಲಿ ಏನೂ ಬದಲಾವಣೆಯಾಗಲಿಲ್ಲ. ಈ ಪದವನ್ನ ನಾವು ಷೇರು ಮಾರುಕಟ್ಟೆಯಲ್ಲಿ ಬಳಸುತ್ತೇವೆ. ಆಪ್ಷನ್ ಮತ್ತು ಫ್ಯೂಚರ್ ಗಳು ಜೀರೋ -ಸಮ್ ಗೇಮ್ ಗೆ ಉತ್ತಮ ಉದಾಹರಣೆ. ಅಂದರೆ ಒಬ್ಬರಿಗೆ ನಷ್ಟವಾದರೆ , ಇನ್ನೊಬ್ಬರಿಗೆ ಅಷ್ಟೇ ಪ್ರಮಾಣದ ಲಾಭವಾಗಿರುತ್ತದೆ. ಹೀಗಾಗಿ ಒಟ್ಟು ವೆಲ್ತ್ ನಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಲಿಲ್ಲ , ಆದರೆ ಕೈ ಬದಲಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹೇಗೆ ಇಬ್ಬರು ಅಥವಾ ಸಾವಿರಾರು ಅಥವಾ ಲಕ್ಷಾಂತರ ಜನ ಪಾಲ್ಗೊಳ್ಳಬಹುದು ಹಾಗೆ ಜಾಗತಿಕ ರಾಜಕೀಯದಲ್ಲಿ ಕ್ಕೋದ ಈ ಪದ ಬಳಕೆಯನ್ನ ನೋಡಿದರೆ ಮತ್ತು ಚೀನಾ ಅಧ್ಯಕ್ಷರು ಸ್ಮಾಲ್ ಸರ್ಕಸ್ ಎನ್ನುವ ಉಲ್ಲೇಖವನ್ನ ಗಮನಿಸಿದರೆ , ಚೀನಾ ದೇಶವನ್ನ ಖೆಡ್ಡಾಗೆ ಕೆಡವಲು , ಅದರಿಂದ ಶಕ್ತಿಯನ್ನ ಕಸಿದುಕೊಳ್ಳಲು ಜಾಗತಿಕ ಮಟ್ಟದಲ್ಲಿ ಹಲವಾರು ದೇಶಗಳು ಪಾಲ್ಗೊಂಡಿವೆ ಎನ್ನುವುದು ವೇದ್ಯವಾಗಿದೆ.

ಚೀನಾ ದೇಶ ಮಾತುಕತೆ , ಸಹಕಾರ , ಜಾಗತಿಕ ಶಾಂತಿ , ಅಭಿವೃದ್ಧಿ ಎನ್ನುವ ಮಾತುಗಳನ್ನ ಆಡುವುದು ಕೇಳಿದರೆ , ಚೀನಾಗೆ ಎಲ್ಲಿ ಬೀಳಬೇಕು ಅಲ್ಲಿ ಪೆಟ್ಟು ಬಿದ್ದಿದೆ ಎಂದರ್ಥ. ಮುಂದಿನ ಜಾಗತಿಕ ನಡೆಗಳನ್ನ ಕಾದು ನೋಡೋಣ.

English summary

China President Xi Jinping says America should avoid its zero-sum game

Chinese President Xi Jinping saying America should avoid its "zero-sum game" and formation of "small cliques" against Beijing. Know more
Story first published: Friday, September 24, 2021, 15:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X