For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾ

By ಅನಿಲ್ ಆಚಾರ್
|

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿಯ ಜುಲೈನಿಂದ ಸೆಪ್ಟೆಂಬರ್ ಅವಧಿಗೆ ಚೀನಾದ ಬೆಳವಣಿಗೆ ದರ 4.9 ಪರ್ಸೆಂಟ್ ಹೆಚ್ಚಳವಾಗಿದೆ. ಕೊರೊನಾ ನಿಯಂತ್ರಣದಲ್ಲಿದೆ ಎಂದು ಕಳೆದ ಮಾರ್ಚ್ ನಲ್ಲಿ ಘೋಷಣೆ ಮಾಡಿದ ಮೇಲೆ ಚೀನಾದಲ್ಲಿ ಕಾರ್ಖಾನೆಗಳು, ಮಳಿಗೆ ಹಾಗೂ ಕಚೇರಿಗಳನ್ನು ಆರಂಭಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರದಂದು ಪ್ರಕಟವಾದ ಈ ಅಂಕಿ- ಅಂಶ ನಿರೀಕ್ಷೆಯಂತೆಯೇ ಇದೆ ಎನ್ನಲಾಗಿದೆ.

ಚೀನಾದ ಮಾಸ್ಕ್ ಗಳಿಗೆ ಹಾಗೂ ಇತರ ವೈದ್ಯಕೀಯ ಸಲಕರಣೆಗಳಿಗೆ ವಿದೇಶಿ ಬೇಡಿಕೆ ಹೆಚ್ಚಾದ ಕಾರಣಕ್ಕೆ ಕೈಗಾರಿಕೆ ಉತ್ಪಾದನೆ ಹೆಚ್ಚಾಗಿದೆ. ಉತ್ಪಾದನೆ ಪ್ರಮಾಣ ಹೆಚ್ಚಾದರೂ ರೀಟೇಲ್ ಮಾರಾಟ ಸ್ವಲ್ಪ ಹಿನ್ನಡೆ ಆಗಿದ್ದು, ಅಂತಿಮವಾಗಿ ಕೊರೊನಾದ ಹಿಂದಿನ ಸ್ಥಿತಿಗೆ ಮರಳಿದೆ.

ಜರ್ಮನಿಯಿಂದ ಹಂದಿ ಮಾಂಸ/ಉತ್ಪನ್ನ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದ ಚೀನಾ

 

ಆರ್ಥಿಕತೆಯು ಸ್ಥಿರವಾದ ಚೇತರಿಕೆ ಕಂಡಿದೆ ಎಂದು ನ್ಯಾಷನಲ್ ಬ್ಯುರೋ ಆಫ್ ಸ್ಟಾಟಿಸ್ಟಿಕ್ಸ್ ತನ್ನ ವರದಿಯಲ್ಲಿ ಹೇಳಿದೆ. ಆದರೆ ಅಂತರರಾಷ್ಟ್ರೀಯ ವಾತಾವರಣೆ ಈಗಲೂ ಕಷ್ಟವಾಗಿದೆ ಹಾಗೂ ಗಂಭೀರವಾಗಿದೆ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಕೊರೊನಾ ವೈರಸ್ ಮರುಕಳಿಸಿದಲ್ಲಿ ಅದನ್ನು ತಡೆಗಟ್ಟಬೇಕಾದ ದೊಡ್ಡ ಒತ್ತಡವನ್ನು ಚೀನಾ ಎದುರಿಸುತ್ತಿದೆ ಎಂದಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಚೀನಾ

ಕಳೆದ ಡಿಸೆಂಬರ್ ನಲ್ಲಿ ಕೊರೊನಾ ಬಿಕ್ಕಟ್ಟು ಮೊದಲಿಗೆ ಕಾಣಿಸಿಕೊಂಡಿತು. ಜೂನ್ ತ್ರೈಮಾಸಿಕ ಅಂತ್ಯಕ್ಕೆ 3.2% ಬೆಳವಣಿಗೆ ದಾಖಲಿಸಿದ ಮೊದಲ ಪ್ರಮುಖ ಆರ್ಥಿಕತೆ ಚೀನಾ. ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಉತ್ಪಾದನೆ 6.8% ಕುಸಿತ ಕಂಡಿತ್ತು. ವಿಶ್ವದ ಎರಡನೇ ಆರ್ಥಿಕತೆಯಿಂದ ಚಟುವಟಿಕೆಗಳು ನಿಲ್ಲಿಸಿದ ಮೇಲೆ ಈ ಬೆಳವಣಿಗೆ ಆಗಿತ್ತು.

ಪ್ರವಾಸ ಹಾಗೂ ವ್ಯವಹಾರ ನಿರ್ಬಂಧವನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಆದರೆ ಈಗಲೂ ಸರ್ಕಾರ ಮತ್ತು ಇತರ ಸರ್ಕಾರಿ ಕಟ್ಟಡಗಳಿಗೆ ಸಂದರ್ಶಕರು ಭೇಟಿ ನೀಡುವಾಗ ಕೊರೊನಾ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಎರಡು ವಾರಗಳ ಕ್ವಾರಂಟೇನ್ ಕಡ್ಡಾಯವಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಕೈಗಾರಿಕೆ ಉತ್ಪಾದನೆ 5.8% ಹೆಚ್ಚಳವಾಗಿದೆ. ಮೊದಲಾರ್ಧದಲ್ಲಿ 1.3% ಕುಗ್ಗಿತ್ತು. ಜಾಗತಿಕ ಮಟ್ಟದಲ್ಲಿನ ಮಾಸ್ಕ್ ಗಳು ಮತ್ತು ಇತರ ವೈದ್ಯಕೀಯ ಸಲಕರಣೆಗಳಿಗೆ ಇರುವ ಬೇಡಿಕೆಯಿಂದಾಗಿ ಚೈನೀಸ್ ರಫ್ತುದಾರರಿಗೆ ಅನುಕೂಲವಾಗಿದೆ. ವಿದೇಶೀ ಪ್ರತಿಸ್ಪರ್ಧಿಗಳು ಈಗಲೂ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದರೂ ಅಷ್ಟರಲ್ಲಿ ಚೀನಾದ ಮಾರ್ಕೆಟ್ ಪಾಲು ಹೆಚ್ಚಾಗಿದೆ.

ಸೆಪ್ಟೆಂಬರ್ ಕೊನೆಯ ತ್ರೈಮಾಸಿಕದಲ್ಲಿ ರೀಟೇಲ್ ಮಾರಾಟ ಸಕಾರಾತ್ಮಕವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 0.9% ಹೆಚ್ಚಳವಾಗಿದೆ. ಮೊದಲ ಎರಡು ತ್ರೈಮಾಸಿಕದಲ್ಲಿ 7.2% ಇಳಿಕೆ ಆಗಿತ್ತು. ಸೆಪ್ಟೆಂಬರ್ ನಲ್ಲಿ ಮಾರಾಟವು 3.3% ಹೆಚ್ಚಳ ಆಗಿದೆ.

ಆರ್ಥಿಕ ತಜ್ಞರು ಹೇಳುವ ಪ್ರಕಾರ, ಪ್ರಮುಖ ಇತರ ಆರ್ಥಿಕತೆಗಳಿಗಿಂತ ಚೀನಾ ಬೇಗ ಚೇತರಿಕೆ ಕಾಣಬಹುದು.

English summary

China's Economy Accelerated In September Quarter

Recovery from corona economic impact: World's second largest economy China accelerated in September quarter, recorder YOY growth. Here is the details.
Story first published: Monday, October 19, 2020, 10:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X