For Quick Alerts
ALLOW NOTIFICATIONS  
For Daily Alerts

ವಿಶ್ವವೇ ಕಂಗಾಲು; ಚೀನಾ ಆರ್ಥಿಕತೆ 2020ರಲ್ಲಿ 2.3% ಬೆಳವಣಿಗೆ ದಾಖಲು

|

ಚೀನಾದ ಆರ್ಥಿಕತೆಯು ನಾಲ್ಕು ದಶಕಕ್ಕೂ ಹೆಚ್ಚು ಸಮಯದಲ್ಲಿ ಅತ್ಯಂತ ನಿಧಾನಗತಿಯ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಚೀನಾದಲ್ಲಿ ಕೋವಿಡ್- 19 ಭೀಕರ ಸ್ವರೂಪದಲ್ಲಿ ಕಾಣಿಸಿಕೊಂಡ ಹೊರತಾಗಿಯೂ ಈ ಬೆಳವಣಿಗೆಯನ್ನು ಕಾಣುವುದಕ್ಕೆ ಸಾಧ್ಯವಾಗಿದೆ.

1970ರ ದಶಕದಲ್ಲಿ ಚೀನಾದಲ್ಲಿ ಪ್ರಮುಖ ಆರ್ಥಿಕ ಸುಧಾರಣೆ ಕಂಡುಬಂತು. ಆ ನಂತರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ, ಅಂದರೆ 2.3% ವಿಸ್ತರಣೆ ಆಗಿದೆ ಎಂದು ಸೋಮವಾರ ಅಧಿಕೃತ ದತ್ತಾಂಶಗಳಿಂದ ಗೊತ್ತಾಗಿದೆ.

ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ

ಕೊರೊನಾದ ಪ್ರಭಾವ ಭಾರೀ ಮಟ್ಟದಲ್ಲಿ ಆಗುವುದರಿಂದ ದೇಶೀ ಹಾಗೂ ವಿದೇಶೀ ಎರಡೂ ಕಡೆ ಭೀಕರ ಮತ್ತು ಸಂಕೀರ್ಣ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ನ್ಯಾಷನಲ್ ಬ್ಯುರೋ ಆಫ್ ಸ್ಟಾಟಿಸ್ಟಿಕ್ಸ್ ಎಚ್ಚರಿಕೆಯನ್ನು ನೀಡಿದೆ. 1990ರಲ್ಲಿ ದಾಖಲಿಸಿದ್ದ 3.9% ಈಚಿನ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ಆಗಿತ್ತು. ಆಗಲೂ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇತರ ಪ್ರಮುಖ ಆರ್ಥಿಕತೆಗಳಿಗಿಂತ ಮುಂದಿತ್ತು.

ವಿಶ್ವವೇ ಕಂಗಾಲು; ಚೀನಾ ಆರ್ಥಿಕತೆ 2020ರಲ್ಲಿ 2.3% ಬೆಳವಣಿಗೆ ದಾಖಲು

 

ಆದರೆ, 2020ರ ಬೆಳವಣಿಗೆ ದರದ ಬಗ್ಗೆ ಚೀನಾ ಇನ್ನೂ ವರದಿ ಪ್ರಕಟಿಸಬೇಕಿದೆ. ಈಗಿನ ಸ್ಥಿತಿ ನೋಡಿದರೆ ಅಲ್ಲಿನ ವ್ಯಾಪಾರ- ಉದ್ಯಮ ಸಹಜ ಸ್ಥಿತಿಗೆ ಮರಳಿದಂತಿದೆ. ಚೀನಾ ಮೇಡ್ ಮಾಸ್ಕ್ ಗಳು, ವೈದ್ಯಕೀಯ ಸಲಕರಣೆಗಳಿಗೆ ಬೇಡಿಕೆ ಇದ್ದುದರಿಂದ ಬೆಳವಣಿಗೆ ಕಂಡುಬಂದಿದೆ. ಯುಎಸ್ ಜತೆಗಿನ ವಾಣಿಜ್ಯ ಸಮರದ ಮಧ್ಯೆಯೂ ಕಳೆದ ವರ್ಷ ರಫ್ತು 3.6% ಹೆಚ್ಚಳ ಆಗಿದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ಖಾಸಗಿ ವಲಯಗಳು ಅಂದಾಜು ಮಾಡುವಂತೆ ಈ ವರ್ಷದ ಬೆಳವಣಿಗೆ 8%ಗೂ ಮೇಲಿರಲಿದೆ. ಇನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಗ್ರಾಹಕ ಉತ್ಪನ್ನಗಳು 14.8% ಏರಿಕೆ ದಾಖಲಿಸಿವೆ. ಸೆಪ್ಟೆಂಬರ್ ಗೆ ಕೊನೆಯಾದ ತ್ರೈಮಾಸಿಕಕ್ಕೆ ಗ್ರಾಹಕರ ಖರ್ಚಿನ ಪ್ರಮಾಣ ಈ ಹಿಂದಿನ ವರ್ಷಕ್ಕಿಂತ ಮೇಲ್ಮಟ್ಟದಲ್ಲಿತ್ತು.

ಡಿಸೆಂಬರ್ 2020ಕ್ಕೆ ಬೆಳವಣಿಗೆ ದರ 6.5% ದಾಖಲಿಸಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ 4.9% ಇತ್ತು. 2020ರ ಆರಂಭದ ಮೊದಲ ತ್ರೈಮಾಸಿಕದಲ್ಲಿ 6.8% ಚಟುವಟಿಕೆ ಕುಗ್ಗಿತ್ತು. ಕೊರೊನಾ ನಿಯಂತ್ರಣಕ್ಕಾಗಿ ಘೋಷಿಸಿದ್ದ ಲಾಕ್ ಡೌನ್ ಪರಿಣಾಮವು ಚೀನಾದ ಆರ್ಥಿಕತೆ ಮೇಲೆ ಆಗಿತ್ತು.

ಆ ನಂತರದ ತ್ರೈಮಾಸಿಕದಲ್ಲಿ ಮತ್ತೆ ಬೆಳವಣಿಗೆ ಹಾದಿಗೆ ಚೀನಾ ಮರಳಿತು. ಮಾರ್ಚ್ ನಲ್ಲಿ ಕಾರ್ಖಾನೆ, ಮಳಿಗೆ, ಕಚೇರಿಗಳನ್ನು ಪುನರಾರಂಭಿಸಿತು. 3.2% ವಿಸ್ತರಣೆಯನ್ನು ದಾಖಲಿಸಿತು.

English summary

China's Economy Growth Recorded At 2.3 Percent In 2020; Four Decades Low

China's economy growth recorded at 2.3% in 2020. Which is 4 decades low, after 1970's economy reform.
Story first published: Monday, January 18, 2021, 9:51 [IST]
Company Search
COVID-19