ಚೀನಾ ಅಂದುಕೊಂಡಿದ್ದಕ್ಕಿಂದ ಮೊದಲೇ ಅಮೆರಿಕಾದ ಆರ್ಥಿಕತೆಯನ್ನು ಹಿಂದಿಕ್ಕಲಿದೆ!
ಕೊರೊನಾವೈರಸ್ ಸಾಂಕ್ರಾಮಿಕವು ಅಮೆರಿಕಾಗಿಂತ ಚೀನಾದಲ್ಲಿ ಉತ್ತಮ ನಿಯಂತ್ರಣದಲ್ಲಿರುವುದರಿಂದ ಚೀನಾವು ಅಂದುಕೊಂಡಿದ್ದಕ್ಕಿಂತ ಮೊದಲೇ ಅಮೆರಿಕಾ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ಅರ್ಥಶಾಸ್ತ್ರ ಮತ್ತು ವ್ಯವಹಾರ ಸಂಶೋಧನಾ ವರದಿ ತಿಳಿಸಿದೆ.
ವಿಶ್ವದ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕಾ ಮತ್ತು ಎರಡನೇ ಬಹುದೊಡ್ಡ ಆರ್ಥಿಕತೆ ಚೀನಾವೂ 2028ಕ್ಕೆ ಡಾಲರ್ ವ್ಯವಹಾರದ ಲೆಕ್ಕಾಚಾರದಲ್ಲಿ ಅಮೆರಿಕಾವನ್ನು ಹಿಂದಿಕ್ಕಲಿದ್ದು, ಕಳೆದ ವರ್ಷ ಅಂದಾಜಿಸಿದ್ದಕ್ಕಿಂತ ಐದು ವರ್ಷ ಮೊದಲೇ ತನ್ನ ಗುರಿಯನ್ನು ತಲುಪಲಿದೆ ಎನ್ನಲಾಗಿದೆ.
ತನ್ನ ವಿಶ್ವ ಆರ್ಥಿಕ ಲೀಗ್ ಪಟ್ಟಿಯಲ್ಲಿ 2023ರ ಹೊತ್ತಿಗೆ ಚೀನಾ ಹೆಚ್ಚಿನ ಆದಾಯದ ಆರ್ಥಿಕತೆಯಾಗಬಹುದು ಎಂದು ಲೆಕ್ಕಹಾಕಿದೆ. ಇನ್ನೂ ಏಷ್ಯಾದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿರುವ ಭಾರತವು ಈ ದಶಕದ ಕೊನೆಗೆ ವಿಶ್ವದ ಮೂರನೇ ಬೃಹತ್ ಆರ್ಥಿಕತೆಯಾಗಲು ಸಿದ್ಧವಾಗಿದೆ ಎಂದು ಹೇಳಲಾಗಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಕಳೆದ ತಿಂಗಳು ತಮ್ಮ ಸರ್ಕಾರದ ಹೊಸ ಪಂಚವಾರ್ಷಿಕ ಯೋಜನೆಯಡಿ 2035 ರ ವೇಳೆಗೆ ತಮ್ಮ ಆರ್ಥಿಕತೆಯು ಗಾತ್ರದಲ್ಲಿ ದ್ವಿಗುಣಗೊಳ್ಳಲು "ಸಂಪೂರ್ಣವಾಗಿ ಸಾಧ್ಯ" ಎಂದು ಹೇಳಿದರು.
ಸಾಂಕ್ರಾಮಿಕ ಹೊಡೆತಕ್ಕೆ ಒಳಗಾದ ಮೊದಲ ಆರ್ಥಿಕತೆ ಚೀನಾವಾಗಿದೆ. ಆದರೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಶೀಘ್ರವಾಗಿ ಚೇತರಿಸಿಕೊಂಡಿದೆ.