For Quick Alerts
ALLOW NOTIFICATIONS  
For Daily Alerts

ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ

By ಅನಿಲ್ ಆಚಾರ್
|

2020ನೇ ಇಸವಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 75ರಷ್ಟು ಪಾಲನ್ನು ಚೀನಾ ಹೊಂದಿದೆ ಎಂಬ ಅಂಶವನ್ನು ದತ್ತಾಂಶಗಳು ಹೊರಗಿಟ್ಟಿವೆ. ಚೀನಾ- ಭಾರತದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದು, ಚೀನೀ ಉತ್ಪನ್ನಗಳನ್ನು ನಿರ್ಬಂಧಿಸಬೇಕು ಎಂಬ ಕೂಗಿನ ಮಧ್ಯೆಯೂ ಇಂಥದ್ದೊಂದು ಬೆಳವಣಿಗೆ ಆಗಿದೆ.

"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"

"ಚೀನಾವಿರೋಧಿ ಭಾವನೆಯು 2020ನೇ ಇಸವಿಯ ವರ್ಷದ ಕೊನೆಗೆ ಚೀನೀ ಬ್ರ್ಯಾಂಡ್ ಗಳು ಶೇಕಡಾ 75ರಷ್ಟು ಮಾರುಕಟ್ಟೆ ಪಾಲು ಹೊಂದುವುದರೊಂದಿಗೆ ಕಡಿಮೆ ಆಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಬದಲಾದ ಗ್ರಾಹಕರ ಮನಸ್ಥಿತಿಗೆ ತಕ್ಕಂತೆ ಪ್ರಮುಖ ಬ್ರ್ಯಾಂಡ್ ಗಳು ಸಹ ಹೊಸ ಬಗೆಯ ಜಾಲ ವ್ಯವಸ್ಥೆಯ ತಂತ್ರವನ್ನು ಅನುಸರಿಸುತ್ತಿರುವುದು ಕಾಣಬಹುದು," ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಆಫ್ ಲೈನ್ ಮಾರಾಟವನ್ನೇ ಹೆಚ್ಚಾಗಿ ಅವಲಂಬಿಸಿದೆ
 

ಆಫ್ ಲೈನ್ ಮಾರಾಟವನ್ನೇ ಹೆಚ್ಚಾಗಿ ಅವಲಂಬಿಸಿದೆ

ಆಫ್ ಲೈನ್ ಮಾರಾಟವನ್ನೇ ಹೆಚ್ಚಾಗಿ ಅವಲಂಬಿಸುವ ಸ್ಯಾಮ್ಸಂಗ್, ವಿವೋ ಮತ್ತು ಒಪ್ಪೊದಂಥ ಬ್ರ್ಯಾಂಡ್ ಗಳು ಆನ್ ಲೈನ್ ನಲ್ಲೂ ಹೆಚ್ಚು ಲಭ್ಯವಾಗುತ್ತಿವೆ. ಗ್ಯಾಲಕ್ಸಿ M ಸರಣಿಯೊಂದಿಗೆ ಅಮೆಜಾನ್ ನಲ್ಲಿ ಮತ್ತು ಗ್ಯಾಲಕ್ಸಿ F ಸರಣಿಯೊಂದಿಗೆ ಫ್ಲಿಪ್ ಕಾರ್ಟ್ ನಲ್ಲಿ ಸ್ಯಾಮ್ಸಂಗ್ ಕಂಪೆನಿಯ ಆನ್ ಲೈನ್ ಅಸ್ತಿತ್ವ ಹೆಚ್ಚಾಗಿದೆ. ಆ ಕಂಪೆನಿಯ ಪ್ರತಿಸ್ಪರ್ಧಿಯಾದ ಶಿಯೋಮಿ "Mi ಆನ್ ವ್ಹೀಲ್ಸ್" ಎಂಬ ಆಫ್ ಲೈನ್ ಚಾನೆಲ್ ಮಾರಾಟ ಆರಂಭಿಸಿದ್ದು, ದೂರ ಪ್ರದೇಶಗಳಲ್ಲೂ ಮಾಡುತ್ತಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಶಿಯೋಮಿ ಮತ್ತೆ ಸ್ಯಾಮ್ಸಂಗ್ ನಿಂದ ಮೊದಲ ಸ್ಥಾನವನ್ನು ಕಸಿದುಕೊಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 13% ಹೆಚ್ಚಿನ ಮಾರಾಟ ದಾಖಲಿಸಿದೆ. 2020ರಲ್ಲಿ ಭಾರತದ ಸ್ಮಾರ್ಟ್ ಫೋನ್ ವಲಯದಲ್ಲೂ ಅನಿರೀಕ್ಷಿತ ಬದಲಾವಣೆ ಆಯಿತು. ಕೋವಿಡ್ 19, ಚೀನಾವಿರೋಧಿ ಭಾವನೆ ಹಾಗೂ ಉತ್ಪಾದನಾ ವ್ಯವಸ್ಥೆಗಳನ್ನು ಬಲಗೊಳಿಸಿದ್ದರಿಂದ ಮೈಕ್ರೋಮ್ಯಾಕ್ಸ್ ನಂಥ ಬ್ರ್ಯಾಂಡ್ ಗಳು ಮತ್ತೆ ಮಾರುಕಟ್ಟೆ ಪ್ರವೇಶಿಸಿದವು.

ಭಾರತದ ಬ್ರ್ಯಾಂಡ್ ಗಳು ಮತ್ತೊಮ್ಮೆ ಮೈ ಕೊಡವಿ ನಿಂತಿವೆ

ಭಾರತದ ಬ್ರ್ಯಾಂಡ್ ಗಳು ಮತ್ತೊಮ್ಮೆ ಮೈ ಕೊಡವಿ ನಿಂತಿವೆ

IN ಸರಣಿಯನ್ನು ಆರಂಭಿಸಿದ ಮೈಕ್ರೋಮ್ಯಾಕ್ಸ್, ಆರು ತ್ರೈಮಾಸಿಕದಲ್ಲೇ ಅತಿ ಹೆಚ್ಚಿನ ಮಾರುಕಟ್ಟೆ ಪಾಲು ತಲುಪಿತು. ಭಾರತದ ಬ್ರ್ಯಾಂಡ್ ಗಳು ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಭಾಗವಾಗಿ ರಿಲಯನ್ಸ್ ಜಿಯೋ ಆರಂಭಿಕ ಹಂತದ 4G ಸ್ಮಾರ್ಟ್ ಫೋನ್ ನೊಂದಿಗೆ ಬರುತ್ತಿದೆ. 2021ನೇ ಇಸವಿ ಭಾರತದ ಬ್ರ್ಯಾಂಡ್ ಗಳಿಗೆ ಅತಿ ಮುಖ್ಯವಾಗುತ್ತದೆ. ಮಾರುಕಟ್ಟೆ ಪಾಲನ್ನು ಅವು ಹೆಚ್ಚಿಸಿಕೊಳ್ಳಬಹುದು. 2020ರಲ್ಲಿ ಒಟ್ಟಾರೆಯಾಗಿ ನೋಡಿದಾಗ ಕಳೆದ ವರ್ಷಕ್ಕಿಂತ ಈ ವರ್ಷ ಸ್ಮಾರ್ಟ್ ಫೋನ್ ಗಳ ರವಾನೆ 4% ಇಳಿಕೆಯಾಗಿ, 15 ಕೋಟಿಯಷ್ಟು ತಲುಪಿದೆ. ಆದರೆ ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಮೊದಲ ಬಾರಿಗೆ 10 ಕೋಟಿಗೂ ಹೆಚ್ಚು ಯೂನಿಟ್ ದಾಟಿದೆ. ಗ್ರಾಹಕರ ಬೇಡಿಕೆಯಲ್ಲಿನ ಹೆಚ್ಚಳ, ಆನ್ ಲೈನ್ ಗಳ ಮೂಲಕ ಪ್ರಬಲ ಪ್ರಚಾರ, ಇ- ಲರ್ನಿಂಗ್, ವರ್ಕ್ ಫ್ರಮ್ ಹೋಮ್ ಇವೆಲ್ಲ ಸೇರಿ ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚು ಮಾಡಿದವು.

ಫೀಚರ್ ಫೋನ್ ಗಳ ಮಾರಾಟದಲ್ಲಿ ಕುಸಿತ
 

ಫೀಚರ್ ಫೋನ್ ಗಳ ಮಾರಾಟದಲ್ಲಿ ಕುಸಿತ

ಮತ್ತೊಂದು ಗಮನಾರ್ಹ ಅಂಶ ಏನೆಂದರೆ, ಒಂದು ತ್ರೈಮಾಸಿಕದಲ್ಲಿ ಆಪಲ್ ನಿಂದ 15 ಲಕ್ಷ ಸ್ಮಾರ್ಟ್ ಫೋನ್ ಸಾಗಣೆ ಮಾಡಲಾಗಿದೆ. ಇದು ಮೊದಲ ಸಲ ಇಂಥದ್ದೊಂದು ದಾಖಲೆ ಮಾಡಿದೆ. 2020 Q4ರಲ್ಲಿ 171%, ವರ್ಷದಿಂದ ವರ್ಷಕ್ಕೆ 93% ಬೆಳವಣಿಗೆ ದಾಖಲಿಸಿರುವ ಆಪಲ್, ಮಾರುಕಟ್ಟೆಯಲ್ಲಿ ಆರನೇ ಸ್ಥಾನದಲ್ಲಿದೆ. ಐಫೋನ್ 12ರ ಬಿಡುಗಡೆ, ಐಫೋನ್ SE 2020 ಮತ್ತು ಐಫೋನ್ 11 ಮೇಲಿನ ಆಫರ್ ಗಳು ಹಾಗೂ ಆನ್ ಲೈನ್ ವಿಸ್ತರಣೆಯಿಂದಾಗಿ ಈ ಬೆಳವಣಿಗೆ ಆಗಿದೆ. ಫೀಚರ್ ಫೋನ್ ಗಳ ಸಾಗಣೆಯಲ್ಲಿ ಇಳಿಕೆ ಆಗಿದ್ದರಿಂದ 2020ರಲ್ಲಿ ಭಾರತದ ಮೊಬೈಲ್ ಹ್ಯಾಂಡ್ ಸೆಟ್ ಮಾರುಕಟ್ಟೆ ಕಳೆದ ವರ್ಷಕ್ಕಿಂತ 2020ರಲ್ಲಿ 9% ಇಳಿಕೆ ಆಗಿದೆ. ಲಾಕ್ ಡೌನ್ ನಿಂದ ಒಟ್ಟಾರೆ 20% y-o-y ಕುಸಿತ ದಾಖಲಿಸಿದೆ.

English summary

Chinese Brands Continues Dominance In Indian Smartphone Market

Chinese brands continues to dominate in Indian smartphone market, according to the data revealed of 2020.
Story first published: Thursday, January 28, 2021, 10:07 [IST]
Company Search
COVID-19