For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಪದ ಬಳಸುವಂತಿಲ್ಲ ಎಂದು ಸಹಕಾರಿ ಸಂಘಗಳಿಗೆ ಆರ್‌ಬಿಐ ಎಚ್ಚರಿಕೆ

|

ನವದೆಹಲಿ, ನವೆಂಬರ್ 23: ದೇಶದಲ್ಲಿ ಸಹಕಾರಿ ಸಂಘಗಳು ತಮ್ಮ ಹೆಸರಿನಲ್ಲಿ ಬ್ಯಾಂಕ್ ಎಂಬ ಪದವನ್ನು ಬಳಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ. ಸಹಕಾರಿ ಸಂಘಗಳು ಬ್ಯಾಂಕ್ ಪದವನ್ನು ಬಳಸುವುದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗುತ್ತದೆ. ಕೇಂದ್ರ ಬ್ಯಾಂಕ್‌ನಿಂದ ಯಾವುದೇ ಪರವಾನಗಿ ಅಥವಾ ಅನುಮೋದನೆಯಿಲ್ಲದೆ ತಮ್ಮ ಸದಸ್ಯರಲ್ಲದ ಜನರಿಂದ ಠೇವಣಿಗಳನ್ನು ಸ್ವೀಕರಿಸದಂತೆ ಆರ್‌ಬಿಐ ಎಚ್ಚರಿಕೆ ನೀಡಿದೆ.

 

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ತಿದ್ದುಪಡಿಯ ನಂತರ ದೇಶದಲ್ಲಿನ ಸಹಕಾರಿ ಸಂಘಗಳು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮತಿಯಿಲ್ಲದೇ ತಮ್ಮ ಹೆಸರುಗಳ ಭಾಗವಾಗಿ 'ಬ್ಯಾಂಕ್', 'ಬ್ಯಾಂಕರ್' ಅಥವಾ 'ಬ್ಯಾಂಕಿಂಗ್' ಪದಗಳನ್ನು ಬಳಸುವಂತಿಲ್ಲ.

ಫೋನ್‌ಪೇನಲ್ಲಿ ತಿಂಗಳಿಗೆ 2 ಶತಕೋಟಿ ವಹಿವಾಟು ಮೂಲಕ ದಾಖಲೆ ಸೃಷ್ಟಿ

ಕಳೆದ 2020ರ ಸೆಪ್ಟೆಂಬರ್ 29ರಂದು ಈ ಕಾಯ್ದೆಯು ಜಾರಿಗೆ ಬಂದಿರುತ್ತದೆ. ಅದಾಗ್ಯೂ, ಕೆಲವು ಸಹಕಾರಿ ಸಂಘಗಳು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ತಮ್ಮ ಹೆಸರಿನಲ್ಲಿ 'ಬ್ಯಾಂಕ್' ಪದವನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಂಕ್ ಪದ ಬಳಸುವಂತಿಲ್ಲ ಎಂದ ಸಹಕಾರಿ ಸಂಘಗಳಿಗೆ ಆರ್‌ಬಿಐ ಎಚ್ಚರಿಕೆ

ಸಹಕಾರಿ ಸಂಘಗಳಲ್ಲಿ ಬ್ಯಾಂಕಿಂಗ್ ವಹಿವಾಟು:

ದೇಶದ ಕೆಲವು ಸಹಕಾರ ಸಂಘಗಳು ನಿಬಂಧನೆಗಳನ್ನು ಉಲ್ಲಂಘಿಸಿ ಬ್ಯಾಂಕಿಂಗ್ ವ್ಯವಹಾರ ನಡೆಸುವುದಕ್ಕೆ ಸಮಾನವಾಗಿ ವಹಿವಾಟು ನಡೆಸುತ್ತಿವೆ. ಸದಸ್ಯರಲ್ಲದ, ನಾಮಮಾತ್ರದ ಸದಸ್ಯರ ಹಾಗೂ ಸಹ ಸದಸ್ಯರಿಂದ ಠೇವಣಿಗಳನ್ನು ಸ್ವೀಕರಿಸುತ್ತಿರುವುದು ಭಾರತೀಯ ರಿಸರ್ವ್ ಬ್ಯಾಂಕ್ ಗಮನಕ್ಕೆ ಬಂದಿರುತ್ತದೆ. "1949ರ BR ಕಾಯ್ದೆಯ ಅಡಿಯಲ್ಲಿ ಅಂತಹ ಸಂಘಗಳಿಗೆ ಯಾವುದೇ ಪರವಾನಗಿಯನ್ನು ನೀಡಲಾಗಿಲ್ಲ ಅಥವಾ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಲು RBI ನಿಂದ ಅಧಿಕಾರ ಪಡೆದಿಲ್ಲ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ" ಎಂದು RBI ಹೇಳಿದೆ.

ಅಂತಹ ಸೊಸೈಟಿಗಳು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿ ಯಾವುದೇ ಪರವಾನಗಿಯನ್ನು ಹೊಂದಿರುವುದಿಲ್ಲ. ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಲು ಆರ್‌ಬಿಐನಿಂದ ಅಧಿಕಾರ ಪಡೆದಿಲ್ಲ ಎಂದು ಆರ್‌ಬಿಐ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಠೇವಣಿಗಳಿಗೆ ರಕ್ಷಣಾ ವಿಮೆ ಇರುವುದಿಲ್ಲ:

"ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ವಿಮಾ ರಕ್ಷಣೆಯು ಈ ಸೊಸೈಟಿಗಳೊಂದಿಗೆ ಇರಿಸಲಾದ ಠೇವಣಿಗಳಿಗೆ ಲಭ್ಯವಿಲ್ಲ. ಸಾರ್ವಜನಿಕರು ತಾವು ಬ್ಯಾಂಕ್ ಎಂದು ಹೇಳಿಕೊಂಡರೆ ಅಂತಹ ಸಹಕಾರಿ ಸಂಘಗಳ ಬಗ್ಗೆ ಎಚ್ಚರಿಕೆ ವಹಿಸಲು ಮತ್ತು ಎಚ್ಚರಿಕೆಯಿಂದ ನಿರ್ವಹಿಸಲು ಸಲಹೆ ನೀಡಲಾಗುತ್ತದೆ. ಅವರೊಂದಿಗೆ ವ್ಯವಹರಿಸುವ ಮೊದಲು ಆರ್‌ಬಿಐ ನೀಡಿದ ಬ್ಯಾಂಕಿಂಗ್ ಪರವಾನಗಿಯನ್ನು ಗಮನಿಸಬೇಕು, ಎಂದು ಆರ್‌ಬಿಐ ತಿಳಿಸಿದೆ.

English summary

Co-operative Societies Are Must Not Use the Bank And Banker in Their Names: RBI Warning

Co-operative Societies Are Must Not Use the Bank And Banker in Their Names: RBI Warning. Know More.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X