ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ: 73.5 ರೂಪಾಯಿ ಹೆಚ್ಚಳ
ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವ ಸಮಯದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಗೊಂಡಿದೆ. ಸದ್ಯಕ್ಕೆ ಸಮಾಧಾನ ಪಟ್ಟಿಕೊಳ್ಳುವ ವಿಚಾರವೆಂದರೆ ಅಡುಗೆ ಸಿಲಿಂಡರ್ ಬೆಲೆ ಏರಿಕೆ ಆಗದೆ ಇರುವುದು.
ಇಂಡಿಯನ್ ಆಯಿಲ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಆಗಸ್ಟ್ 1 ರ ಇತ್ತೀಚಿನ ಬೆಲೆ ಪರಿಷ್ಕರಣೆಯ ಪ್ರಕಾರ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಈಗ 73.5 ರೂಪಾಯಿಗಳಷ್ಟು ದುಬಾರಿಯಾಗಿದೆ. ಆದಾಗ್ಯೂ, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ ಏರಿಕೆಯನ್ನು ಕಂಡರೂ, 14.2-ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.

19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ
ತೈಲ ಕಂಪನಿಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನಾಂಕದಂದು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ 19 ಕೆಜಿ ಎಲ್ಪಿಜಿ ಸಿಲಿಂಡರ್ಗೆ ಈಗ 1,623 ರೂಪಾಯಿಗೆ ತಲುಪಿದೆ. ಇದು ಹಿಂದಿನ 1,500 ರಿಂದ ಗಮನಾರ್ಹ ಹೆಚ್ಚಳವಾಗಿದೆ.
ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ, ಈಗ ಅದೇ ಸಿಲಿಂಡರ್ ಬೆಲೆ 1,579.5 ರೂಪಾಯಿ, ಕೋಲ್ಕತ್ತಾದಲ್ಲಿ ಇದರ ಬೆಲೆ 1,629 ರೂಪಾಯಿ ಆಗಿದೆ. ಹೀಗೆ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಲೆ ಏರಿಕೆಯಾಗಿದ್ದು, ಮಹಾನಗರ ಪೈಕಿ ಚೆನ್ನೈನಲ್ಲಿ ಅತಿ ಹೆಚ್ಚು ಅಂದರೆ 19-ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 1,761 ರೂಪಾಯಿನಷ್ಟಿದೆ.
ಗ್ಯಾಸ್ ಸಿಲಿಂಡರ್ ರೀಫಿಲ್ ಬುಕಿಂಗ್ ಪೋರ್ಟಬಿಲಿಟಿ: ವಿತರಕರನ್ನು ಆಯ್ಕೆ ಮಾಡಿ

ಅಡುಗೆ ಅನಿಲ ಬೆಲೆ ಎಷ್ಟು ಏರಿಕೆ?
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ತಿಳಿದುಕೊಂಡ್ರಿ, ಹಾಗೆಯೇ ಅಡುಗೆ ಅನಿಲ ಬೆಲೆಯನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸಲಾಗಿಲ್ಲ. ಆದರೆ ಕಳೆದು ತಿಂಗಳು ದೇಶೀಯ ಸಿಲಿಂಡರ್ಗಳ ಬೆಲೆಯನ್ನು 25.5 ರೂಪಾಯಿ ಹೆಚ್ಚಿಸಲಾಗಿದ್ದು, ಈ ತಿಂಗಳು ಯಥಾಸ್ಥಿತಿ ಕಾಯ್ದುಕೊಂಡಿವೆ.
ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಯಾವ ನಗರದಲ್ಲಿ ಎಷ್ಟಿದೆ?
ದೇಶದ ಪ್ರಮುಖ ನಗರಗಳಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ:
ದೆಹಲಿ: 834.50
ಕೋಲ್ಕತ್ತಾ: 861.00
ಮುಂಬೈ: 834.50
ಚೆನ್ನೈ: 850.50
ಗುರುಗಾವ್:843.50
ನೋಯ್ಡಾ: 832.50
ಬೆಂಗಳೂರು:837.50
ಭುವನೇಶ್ವರ:861.00
ಚಂಡೀಗಡ: 844.00
ಹೈದ್ರಾಬಾದ್:887.00
ಜೈಪುರ: 813.00

ಏಳು ವರ್ಷಗಳಲ್ಲಿ ಎಲ್ಪಿಜಿ ಬೆಲೆ ಡಬಲ್ ಆಗಿದೆ!
ದೇಶೀಯ ಗ್ಯಾಸ್ ಸಿಲಿಂಡರ್ಗಳಿಗೆ ಸಬ್ಸಿಡಿ ರಹಿತ ಬೆಲೆಗಳು ಕಳೆದ ಹಲವು ವರ್ಷಗಳಿಂದ ಹೆಚ್ಚಾಗುತ್ತಿವೆ. ದೆಹಲಿಯಲ್ಲಿ 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ ಬೆಲೆ ಆಗಸ್ಟ್ 1, 2016 ರಂದು 487 ರೂಆಯಿ ಆಗಿದ್ದರೆ, ಅದೇ ಬೆಲೆ ಈಗ 834.5 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಈಗ ಅದೇ ಅಡುಗೆ ಅನಿಲ ಸಿಲಿಂಡರ್ ಬೆಲೆ 861 ಆಗಿದ್ದು, ಮುಂಬೈನಲ್ಲಿ 834.5 ಮತ್ತು ಚೆನ್ನೈನಲ್ಲಿ 850.5 ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪೆಟ್ರೋಲ್, ಡೀಸೆಲ್ ದರವೂ ತಗ್ಗುತ್ತಿಲ್ಲ
ಎಲ್ಪಿಜಿ ಬೆಲೆ ಏರಿಕೆ ಒಂದೆಡೆಯಾದ್ರೆ, ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ದರವು ಇಳಿಕೆಯಾಗುತ್ತಿಲ್ಲ. ಕಳೆದ ಹದಿನೈದು ದಿನಗಳಿಂದ ತಟಸ್ಥವಾಗಿದ್ದು ಬಿಟ್ಟರೆ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಲೀಟರ್ಗೆ 100 ಗಡಿ ದಾಟಿ ಹೋಗಿದೆ. ವಿವಿಧ ತೆರಿಗೆ ದರಗಳಿಂದಾಗಿ ಇಂಧನ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಸಬ್ಸಿಡಿ ಹಣ ಬರುತ್ತದೆಯೋ, ಇಲ್ಲವೋ ಎಂದು ತಿಳಿಯಿರಿ
ಎಲ್ಪಿಜಿ ಬೆಲೆಯನ್ನು ಅಂತರರಾಷ್ಟ್ರೀಯ ಮಾನದಂಡ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಬದಲಾವಣೆಗಳಿಂದ ನಿರ್ಧರಿಸಲಾಗುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ ಸರ್ಕಾರದಿಂದ ಅನಿಲ ಸಬ್ಸಿಡಿ ಹಣವು ನಿಮ್ಮ ಖಾತೆಗೆ ಬಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಯಾವಾಗಲೂ ಪರಿಶೀಲಿಸಬೇಕು. ನಿಮ್ಮ ಖಾತೆಗೆ ಸಬ್ಸಿಡಿ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ
* ನಿಮ್ಮ ಸ್ಮಾರ್ಟ್ಫೋನ್ನ ಬ್ರೌಸರ್ನಲ್ಲಿ ಮೊದಲು www.mylpg.in ಎಂದು ಟೈಪ್ ಮಾಡಿ.
* ಅಲ್ಲಿ ಎಲ್ಲಾ ಗ್ಯಾಸ್ ಕಂಪನಿಗಳ ಹೆಸರುಗಳ ಪಟ್ಟಿ ಇರುತ್ತದೆ. ಅದರಲ್ಲಿ ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್ಗಳ ಫೋಟೋ ಕ್ಲಿಕ್ ಮಾಡಿ
* ಇದರ ನಂತರ ಹೊಸ ವಿಂಡೋ ತೆರೆಯುತ್ತದೆ. ಇದರಲ್ಲಿ, ಮೇಲಿನ ಬಲಭಾಗದಲ್ಲಿ ನೀವು ಸೈನ್-ಇನ್ ಮತ್ತು ಹೊಸ ಬಳಕೆದಾರ ಆಯ್ಕೆಯನ್ನು ನೋಡುತ್ತೀರಿ. ನೀವು ID ಹೊಂದಿದ್ದರೆ, ನಂತರ ಸೈನ್ ಇನ್ ಮಾಡಿ ಅಥವಾ ಇಲ್ಲ, ಮೊದಲು ID ಅನ್ನು ರಚಿಸಿ.
* ಲಾಗ್ ಇನ್ ಮಾಡಿದ ನಂತರ, ವೀವ್ ಸಿಲಿಂಡರ್ ಬುಕಿಂಗ್ ಹಿಸ್ಟರಿ ಎಂದು ಬಲಭಾಗದಲ್ಲಿ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು ಯಾವ ಸಿಲಿಂಡರ್ ಅನ್ನು ಸಬ್ಸಿಡಿ ಪಡೆದಿದ್ದೀರಿ ಮತ್ತು ಯಾವಾಗ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯುತ್ತೀರಿ.
* ಅದೇ ಸಮಯದಲ್ಲಿ, ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣ ಬರದಿದ್ದರೆ, ನೀವು ಪ್ರತಿಕ್ರಿಯೆ ಬಟನ್ ಕ್ಲಿಕ್ ಮಾಡುವ ಮೂಲಕವೂ ದೂರು ನೀಡಬಹುದು.