For Quick Alerts
ALLOW NOTIFICATIONS  
For Daily Alerts

ಮುತ್ತೂಟ್ ಫೈನಾನ್ಸ್ ನಿಂದ ಗೋಲ್ಡ್ ಲೋನ್ ಪಡೆದವರಿಗೆ ಕೊರೊನಾ ಇನ್ಷೂರೆನ್ಸ್

|

ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಕಾಂಪ್ಲಿಮೆಂಟರಿ ಆಗಿ ಕೊರೊನಾ ಇನ್ಷೂರೆನ್ಸ್ ನೀಡಲಿದೆ ಮುತ್ತೂಟ್ ಫೈನಾನ್ಸ್. ಆಗಸ್ಟ್ 17, 2020ರಂದು ಕೊಟಕ್ ಮಹೀಂದ್ರಾ ಜನರಲ್ ಇನ್ಷೂರೆನ್ಸ್ ಜತೆ ಸಹಯೋಗ ಆಗಿದ್ದು, ಇನ್ಷೂರೆನ್ಸ್ ಒದಗಿಸಲಿದೆ. ಮುತ್ತೂಟ್ ಫೈನಾನ್ಸ್ ಕಂಪೆನಿಯು ಜನರಿಗೆ ಸಹಾಯ ಮಾಡುವುದನ್ನು ಹಾಗೂ ಸಮಾಜಕ್ಕೆ ವಾಪಸ್ ನೀಡುವ ಸಿದ್ಧಾಂತವನ್ನು ನಂಬುತ್ತದೆ ಎಂದು ಎಂ.ಡಿ. ಅಲೆಕ್ಸಾಂಡರ್ ಮುತ್ತೂಟ್ ಹೇಳಿದ್ದಾರೆ.

ಈಗ ನಡೆಯುತ್ತಿರುವ ಗ್ರಾಹಕರ ಪ್ರಾಮಾಣಿಕತೆ ಕಾರ್ಯಕ್ರಮ ಹಾಗೂ ಸಾಮಾಜಿಕ ಬದ್ಧತೆ ಅಡಿಯಲ್ಲಿ ಗ್ರಾಹಕರಿಗೆ ಇನ್ಷೂರೆನ್ಸ್ ಕವರೇಜ್ ಒದಗಿಸುತ್ತಿದ್ದೇವೆ. ಗ್ರಾಹಕರಲ್ಲಿ ವಿಶ್ವಾಸ ತುಂಬಿ, ಯಾವುದೇ ಆತಂಕ ಇಲ್ಲದೆ ಮನ್ನಡೆಯುವಲ್ಲಿ ಸಹಾಯ ಮಾಡುವ ಉದ್ದೇಶದಿಂದ ಇನ್ಷೂರೆನ್ಸ್ ಒದಗಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಏರಿದ್ದ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ; ಮುಂದಿನ ಹಾದಿ ಏನು?

 

ಮುತ್ತೂಟ್ ಫೈನಾನ್ಸ್ ನಿಂದ ಚಿನ್ನಕ್ಕೆ ಹೆಚ್ಚಿನ ಸಾಲವನ್ನು ನೀಡಲಾಗುತ್ತಿದೆ. ಜತೆಗೆ ಎಂಎಸ್ ಎಲ್ ಯೋಜನೆ ಅಡಿಯಲ್ಲಿ ಒಂದು ಲಕ್ಷ ರುಪಾಯಿ ತನಕ ಇನ್ಷೂರೆನ್ಸ್ ಒದಗಿಸಲಾಗುತ್ತಿದೆ. ಎಂಎಸ್ ಎಲ್ ಅಂದರೆ ಮುತ್ತೂಟ್ ಸೂಪರ್ ಲೋನ್. ತಮ್ಮ ಚಿನ್ನದ ಮೇಲೆ ಹೆಚ್ಚಿನ ಸಾಲ ಕೇಳುವವರಿಗೆ ಇರುವ ಯೋಜನೆ ಇದು.

ಮುತ್ತೂಟ್ ಫೈನಾನ್ಸ್  ಗೋಲ್ಡ್ ಲೋನ್ ಪಡೆದವರಿಗೆ ಕೊರೊನಾ ಇನ್ಷೂರೆನ್ಸ್

ಈ ಯೋಜನೆ ಅಡಿಯಲ್ಲಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದಲ್ಲಿ ರಿಯಾಯಿತಿ ಕೂಡ ದೊರೆಯುತ್ತದೆ. ಇನ್ನು ಮುತ್ತೂಟ್ ಸೂಪರ್ ಲೋನ್ ಯೋಜನೆ ಅಡಿಯಲ್ಲಿ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಮುತ್ತೂಟ್ ಸಮೂಹದ ಮುತ್ತೂಟ್ ಫೈನಾನ್ಸ್ ಆಯುಷ್ ಗೋಲ್ಶ್ ಲೋನ್ ಮೂಲಕ ಕೊರೊನಾಗೆ ಇನ್ಷೂರೆನ್ಸ್ ಕವರ್ ನೀಡಲಾಗುತ್ತದೆ.

English summary

Complimentary Covid 19 Insurance Offer To Gold Loan Borrowers Of Muthoot Finance

Muthoot finance company offering complimentary insurance plan of Covid- 19 to gold loan borrowers.
Company Search
COVID-19