For Quick Alerts
ALLOW NOTIFICATIONS  
For Daily Alerts

ಗ್ರಾಹಕ ಹಣದುಬ್ಬರ ದರ 7.34%ಗೆ ಏರಿಕೆ; ಆಗಸ್ಟ್ ಐಐಪಿ 8% ಕುಸಿತ

|

ಗ್ರಾಹಕ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ 7.34%ಗೆ ಏರಿಕೆ ಆಗಿದೆ. ಅದರ ಹಿಂದಿನ ತಿಂಗಳು, ಆಗಸ್ಟ್ ನಲ್ಲಿ 6.69% ಇತ್ತು. ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಹಣದುಬ್ಬರ ಏರಿಕೆ ಆಗಿದೆ ಎಂಬುದನ್ನು ಸೋಮವಾರದಂದು ಸರ್ಕಾರದ ದತ್ತಾಂಶವು ಬಹಿರಂಗ ಪಡಿಸಿದೆ.

ಈ ವರ್ಷದ ಜನವರಿಯಿಂದ ಈಚೆಗೆ ದಾಖಲಾದ ಹೆಚ್ಚಿನ ಗ್ರಾಹಕ ಹಣದುಬ್ಬರ ಇದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಹಣದುಬ್ಬರದ ಗುರಿ 2- 6 ಪರ್ಸೆಂಟ್. ಈಗಿನ ರೀಟೇಲ್ ದರಗಳ ಏರಿಕೆಯಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಾಲ ವಿತರಣೆ ದರವನ್ನು ಇನ್ನಷ್ಟು ಇಳಿಸಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.

LTC ಹಾಗೂ ಹಬ್ಬದ ಮುಂಗಡ ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

 

ಗ್ರಾಹಕ ದರ ಸೂಚ್ಯಂಕದಿಂದ (ಸಿಪಿಐ) ನಿರ್ಧಾರ ಆಗುವ ಚಿಲ್ಲರೆ ಹಣದುಬ್ಬರ ದರವು ಆರ್ಥಿಕ ತಜ್ಞರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಆಹಾರ ಹಣದುಬ್ಬರವು ಸೆಪ್ಟೆಂಬರ್ ನಲ್ಲಿ 10.68% ಇದೆ. ಅದರ ಹಿಂದಿನ ತಿಂಗಳಾದ ಆಗಸ್ಟ್ ನಲ್ಲಿ 9.05% ಇತ್ತು. ಕೇಂದ್ರ ಬ್ಯಾಂಕ್ ಸಾಮಾನ್ಯವಾಗಿ ಗ್ರಾಹಕ ಹಣದುಬ್ಬರ ದರವನ್ನು ನಿಗಾ ಮಾಡುತ್ತದೆ. ಅದರ ಆಧಾರದಲ್ಲಿ ಹಣಕಾಸು ನೀತಿ ರೂಪಿಸುತ್ತದೆ.

ಗ್ರಾಹಕ ಹಣದುಬ್ಬರ ದರ 7.34%ಗೆ ಏರಿಕೆ; ಆಗಸ್ಟ್ ಐಐಪಿ  8% ಕುಸಿತ

ಕಳೆದ ವಾರ ನಡೆದ ಹಣಕಾಸು ನೀತಿ ಸಭೆಯಲ್ಲಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಕಳೆದ ಕೆಲವು ತಿಂಗಳಿನಿಂದಲೇ ಆರ್ ಬಿಐ ಆರ್ಥಿಕ ಪುನಶ್ಚೇತನದ ಕಡೆಗೆ ದೃಷ್ಟಿ ನೆಟ್ಟಿದೆ. ಇದರ ಜತೆಗೆ ಹಣದುಬ್ಬರ ನಿಯಂತ್ರಣದಲ್ಲೇ ಇರಿಸಿಕೊಳ್ಳುವ ಕಡೆಗೆ ನಿಗಾ ವಹಿಸಿದೆ.

ಐಐಪಿ (ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್)

ಕೈಗಾರಿಕೆ ಉತ್ಪಾದನೆ ಆಗಸ್ಟ್ ನಲ್ಲಿ 8% ಕುಸಿದಿದೆ. ಉತ್ಪಾದನೆ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನೆ ವಲಯದಲ್ಲಿನ ಕುಸಿತದಿಂದ ಹೀಗೆ ಕುಗ್ಗಿದೆ. ಉತ್ಪಾದನಾ ವಲಯ 8.6%, ಗಣಿಗಾರಿಕೆ ಉತ್ಪಾದನೆ 9.8% ಹಾಗೂ ವಿದ್ಯುತ್ 1.8% ಕುಸಿದಿದೆ. ಆಗಸ್ಟ್ 2019ರಲ್ಲಿ 1.4% ಕುಸಿದಿತ್ತು. ಈ ವರ್ಷ ಜುಲೈನಲ್ಲಿ 10.4% ಹಾಗೂ ಜೂನ್ ನಲ್ಲಿ 15.7% ಕುಸಿತ ಕಂಡಿತ್ತು.

ಕೊರೊನಾ ಮುಂಚಿನ ತಿಂಗಳ ಅಂಕಿ- ಅಂಶಗಳ ಜತೆಗೆ ಕೊರೊನಾ ನಂತರದ ತಿಂಗಳ ದತ್ತಾಂಶವನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸಾಂಖ್ಯಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

English summary

Consumer Inflation To 7.34 Percent In September; IIP Fell 8 Percent

Consumer inflation for September month increase to 7.34% and IIP fell 8% in August month. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X