ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ)ನಿಂದ "ತತ್ಕಾಲ್" ಬುಕ್ಕಿಂಗ್ ವ್ಯವಸ್ಥೆ ತರಲು ನಿರ್ಧಾರ ಮಾಡಲಾಗಿದೆ. ಯಾವ ಗ್ರಾಹಕರ ಬಳಿ ಒಂದೇ ಸಿಲಿಂಡರ್ ಇರುತ್ತದೋ ಅಂಥವರು ಈ ವ್ಯವಸ್ಥೆ ಬಳಸಿಕೊಳ್ಳಬಹುದು. ಬುಕ್ಕಿಂಗ್ ಮಾಡಿದ ಎರಡು ಗಂಟೆಯೊಳಗೆ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತದೆ.
ತೆಲಂಗಾಣದ ಗ್ರೇಟರ್ ಹೈದರಾಬಾದ್ ನಲ್ಲಿ "ಶಿಲಾ ಭಾರತ ಜೀವನಮ್" ಎಂಬ ಹೆಸರಲ್ಲಿ ಜನವರಿ 16, 2021ರಿಂದ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವು ಫೆಬ್ರವರಿ 1ರಂದು ಈ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ. "ಸಂಕ್ರಾಂತಿ ಹಬ್ಬದ" ಹಿನ್ನೆಲೆಯಲ್ಲಿ ಶನಿವಾರದಿಂದ ಜಾರಿಗೆ ತರಲು ತೆಲಂಗಾಣ ಸರ್ಕಾರ ತೀರ್ಮಾನ ಮಾಡಿದೆ. ಹೈದರಾಬಾದ್ ನಂತರ ಉಳಿದ ಜಿಲ್ಲೆಗಳಲ್ಲಿ ಯೋಜನೆ ವಿಸ್ತರಣೆಗೆ ತೀರ್ಮಾನಿಸಲಾಗಿದೆ.
ಮಿಸ್ಡ್ ಕಾಲ್ ಮೂಲಕ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?
ತತ್ಕಾಲ್ ಬುಕ್ಕಿಂಗ್ ಗಾಗಿ ಸಿಲಿಂಡ್ ಗೆ ಗ್ರಾಹಕರು ರು. 25 ಪಾವತಿಸಬೇಕಾಗುತ್ತದೆ. ಗ್ಯಾಸ್ ಬುಕ್ಕಿಂಗ್ ಅನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮಾಡಿದಲ್ಲಿ ಎರಡು ಗಂಟೆಯೊಳಗೆ ಸಿಲಿಂಡರ್ ಡೆಲಿವರಿ ಆಗುತ್ತದೆ. ಇದಕ್ಕಾಗಿ ಹೊಸ 'ಆಪ್' ಬಿಡುಗಡೆ ಮಾಡಲು ಐಒಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಆನ್ ಲೈನ್ ಬುಕ್ಕಿಂಗ್ ಮಾಡಬಹುದು. ಅದಕ್ಕಾಗಿ ಆನ್ ಲೈನ್ ಬುಕ್ಕಿಂಗ್ ಸಾಕು, ರಸೀದಿ ಬೇಕಾಗುವುದಿಲ್ಲ. ಸಿಲಿಂಡರ್ ದರದ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ.