For Quick Alerts
ALLOW NOTIFICATIONS  
For Daily Alerts

ಕೋವಿಡ್-19 ಪರಿಣಾಮ: ಸರ್ವೀಸ್‌, ವಾರೆಂಟಿ ಅವಧಿ ವಿಸ್ತರಿಸಿದ ಹ್ಯುಂಡೈ

|

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯು ಜನಸಾಮಾನ್ಯರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿದೆ. ಅನೇಕ ರಾಜ್ಯಗಳು ಲಾಕ್‌ಡೌನ್‌ ಮೊರೆ ಹೋಗಿ. ಹೀಗಿರುವಾಗ ವಾಹನ ತಯಾರಕ ಕಂಪನಿಗಳು ತಮ್ಮ ಗ್ರಾಹಕರಿಗೆ ರಿಯಾಯಿತಿ ನೀಡಲು ಮುಂದಾಗಿವೆ.

 

ಇತರೆ ವಾಹನ ತಯಾರಕರಂತೆ ಇತ್ತೀಚೆಗೆ ಹ್ಯುಂಡೈ ಇಂಡಿಯಾ ಮೋಟಾರ್ಸ್ ತನ್ನ ಕಾರುಗಳ ವಾರೆಂಟಿ ಮತ್ತು ಸೇವಾ ಅವಧಿಯನ್ನು 2 ತಿಂಗಳವರೆಗೆ ಉಚಿತವಾಗಿ ವಿಸ್ತರಿಸುವುದಾಗಿ ಘೋಷಿಸಿದೆ.

ಕಾರುಗಳ ಸರ್ವೀಸ್‌, ವಾರೆಂಟಿ ಅವಧಿ ವಿಸ್ತರಿಸಿದ ಹ್ಯುಂಡೈ

ಹ್ಯುಂಡೈ ಮಾತ್ರವಲ್ಲದೆ, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಟೊಯೋಟಾ ಮತ್ತು ಎಂಜಿ ಮೋಟಾರ್ ಸಹ ಗ್ರಾಹಕರ ಅನುಕೂಲಕ್ಕಾಗಿ ವಾರೆಂಟಿ ಮತ್ತು ಉಚಿತ ಸೇವಾ ಅವಧಿಯನ್ನು ವಿಸ್ತರಿಸಿದೆ. ಈಗ ಲಾಕ್‌ಡೌನ್ ಸಮಯದಲ್ಲಿ ವಾರೆಂಟಿ ಅವಧಿ ಮುಗಿದಿದ್ದರೆ, ಹ್ಯುಂಡೈ ಗ್ರಾಹಕರಿಗೆ ಹೆಚ್ಚುವರಿ 2 ತಿಂಗಳ ವಾರೆಂಟಿಯ ಪ್ರಯೋಜನವನ್ನು ನೀಡಲಾಗುತ್ತದೆ.

ಕೊರೊನಾ ಎಫೆಕ್ಟ್‌: ಟಾಟಾ ಕಾರುಗಳ ವಾರೆಂಟಿ, ಫ್ರೀ ಸರ್ವೀಸ್ ಅವಧಿ ವಿಸ್ತರಣೆ

''ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯು ಕಠಿಣ ಅವಧಿಯನ್ನು ಎದುರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನಾವು ಯಾವಾಗಲೂ ನಮ್ಮ ಗ್ರಾಹಕರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಹ್ಯುಂಡೈ ಮೋಟಾರ್ಸ್ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ವಿತರಣೆ ಮಾಡುವ ಮೂಲಕ ಜೀವ ಉಳಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದೆ'' ಎಂದು ಕಂಪನಿ ತಿಳಿಸಿದೆ

ಹ್ಯುಂಡೈ ಮೋಟಾರ್ಸ್ ಗ್ರಾಹಕರಿಗೆ ಖರೀದಿ ಅನುಭವವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಈಗ ಗ್ರಾಹಕರು ಮನೆಯಲ್ಲಿ ಕುಳಿತುಕೊಳ್ಳುವಾಗ ತಮ್ಮ ನೆಚ್ಚಿನ ಹ್ಯುಂಡೈ ಕಾರನ್ನು ಮನೆಯಿಂದ ಬುಕ್‌ ಮಾಡಬಹುದು.

Read more about: cars ಕಾರು
English summary

Corona 2nd Wave: Hyundai Extends Free Service And Warranty Period

Hyundai Motor India on Saturday said it has extended warranty and free service timelines by two months for its customers
Story first published: Saturday, May 15, 2021, 20:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X