For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಎಫೆಕ್ಟ್: ಎಲ್ಲಾ ವಾಹನ ತಯಾರಿಕೆ ಸ್ಥಗಿತಕ್ಕೆ ನಿರ್ಧಾರ

|

ದೇಶದಾದ್ಯಂತ ಕೊರೊನಾವೈರಸ್ ಭೀತಿಯಿಂದಾಗಿ ಕೇಂದ್ರ ಸರ್ಕಾರ ವೈರಸ್ ಹರಡುವಿಕೆಗೆ ಹಲವಾರು ಕಾರ್ಯಗಳನ್ನು ಕೈಗೊಂಡಿದೆ. ಈಗಾಗಲೇ ಜನತಾ ಕರ್ಫ್ಯೂ ಯಶಸ್ವಿಯಾಗಿದ್ದು, ದೇಶಾದ್ಯಂತ ಮಾರ್ಚ್ 31ರವರೆಗೆ 75 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಲಾಗಿದೆ. ಇದರ ಜೊತೆಗೆ ದೇಶದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

 

ಕೊರೊನಾ ಎಫೆಕ್ಟ್‌: ವಿಶ್ವದೆಲ್ಲೆಡೆ ಬೈಕ್ ಉತ್ಪಾದನೆ ಸ್ಥಗಿತಗೊಳಿಸಿದ ಹೀರೋ ಮೊಟೊಕಾರ್ಪ್

ಹಲವು ಉದ್ಯಮಗಳಿಗೆ ಈಗಾಗಲೇ ಕೊರೊನಾ ಪೆಟ್ಟು ನೀಡಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್ 31ರವರೆಗೆ ತಯಾರಿಕೆ ಸ್ಥಗಿತಗೊಳಿಸಲು ಪ್ರಮುಖ ಕಂಪನಿಗಳು ನಿರ್ಧರಿಸಿವೆ.

ಕೊರೊನಾವೈರಸ್ ಎಫೆಕ್ಟ್: ಎಲ್ಲಾ ವಾಹನ ತಯಾರಿಕೆ ಸ್ಥಗಿತಕ್ಕೆ ನಿರ್ಧಾರ

ಮಾರುತಿ ಸುಜುಕಿ, ಹೋಂಡಾ ಕಾರ್ಸ್, ಹೀರೋ ಮೋಟೊ ಕಾರ್ಪ್, ಫಿಯಟ್ ಮತ್ತು ಮಹೀಂದ್ರಾ ಮತ್ತು ಹೋಂಡಾ ಮೋಟರ್ ಸೈಕಲ್ಸ್‌ ಮತ್ತು ಸ್ಕೂಟರ್ ಕಂಪನಿಗಳು ತಯಾರಿಕೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಭಾನುವಾರವಷ್ಟೇ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಲಿಮಿಟೆಡ್ (ಎಚ್‌ಎಂಸಿಎಲ್) ಕೊರೊನಾವೈರಸ್ ಭೀತಿಯಿಂದಾಗಿ ತನ್ನೆಲ್ಲಾ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ದೇಶದಲ್ಲಿ ಅಷ್ಟೇ ಅಲ್ಲದೆ ಕೊಲಂಬಿಯಾ ಮತ್ತು ಬಾಂಗ್ಲಾದೇಶದ ಘಟಕಗಳು ಸೇರಿದಂತೆ ತನ್ನ ಎಲ್ಲಾ ಉತ್ಪಾದನಾ ಮತ್ತು ಅಸೆಂಬಲ್ ಸ್ಥಾವರಗಳಲ್ಲಿನ ಕಾರ್ಯಾಚರಣೆಯನ್ನು ಈ ತಿಂಗಳ ಅಂತ್ಯದವರೆಗೆ ಸ್ಥಗಿತಗೊಳಿಸಿದ್ದು, ತಕ್ಷಣದಿಂದ ಜಾರಿಗೆ ತಂದಿದೆ.

English summary

Corona Effect India's Vehicle Production Stopped

Corona impact india's leading vehicle production company's suspend production upto March 31
Story first published: Monday, March 23, 2020, 9:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X