For Quick Alerts
ALLOW NOTIFICATIONS  
For Daily Alerts

ಕೊರೊನಾ ಆರ್ಥಿಕ ಹೊಡೆತಕ್ಕೆ ಸರ್ಕಾರದ ಆಸ್ತಿ ಮಾರುವ ಯೋಚನೆಯಲ್ಲಿದೆ ಸೌದಿ ಅರೇಬಿಯಾ

|

ತೈಲ ಬೆಲೆಯಲ್ಲಿ ಕುಸಿತ ಹಾಗೂ ಕೊರೊನಾದ ಹೊಡೆತಕ್ಕೆ ಸೌದಿ ಅರೇಬಿಯಾದ ಆರ್ಥಿಕತೆಗೆ ಭರ್ತಿ ಪೆಟ್ಟು ಬಿದ್ದಿದೆ. ಅದರಿಂದ ಚೇತರಿಸಿಕೊಳ್ಳುವ ಸಲುವಾಗಿ ಆದಾಯ ತೆರಿಗೆ ಹೇರಲು ಹಾಗೂ ಸರ್ಕಾರದ ಆಸ್ತಿ ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ತಿಳಿಸಿದೆ.

 

ಸೌದಿ ಅರೇಬಿಯಾವು ಮುಂದಿನ ನಾಲ್ಕರಿಂದ ಐದು ವರ್ಷಗಳಲ್ಲಿ 1330 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಮೊತ್ತ (5000 ಕೋಟಿ ರಿಯಾಲ್) ಸಂಗ್ರಹಿಸಲು ಮುಂದಾಗಿದೆ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ನೀರಿನ ಕ್ಷೇತ್ರದಲ್ಲಿ ಆಸ್ತಿಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಹಣಕಾಸು ಸಚಿವ ಮೊಹ್ಮದ್ ಅಲ್ ಜಡಾನ್ ಬುಧವಾರ ಬ್ಲೂಮ್ ಬರ್ಗ್ ಗೆ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಪಿಐಎಫ್ ನಿಂದ ಜಿಯೋದಲ್ಲಿ 10,750 ಕೋಟಿ ಹೂಡಿಕೆ

ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಎಲ್ಲ ಆಯ್ಕೆಗಳನ್ನು ಸೌದಿ ಅರೇಬಿಯಾ ಸರ್ಕಾರ ಪರಿಗಣಿಸುತ್ತಿದೆ. ಆದರೆ ಆದಾಯ ತೆರಿಗೆ ಹಾಕುವುದು ಅಗತ್ಯ ಇಲ್ಲ. ಇದರ ಸಿದ್ಧತೆಗೆ ಸಿಕ್ಕಾಪಟ್ಟೆ ಸಮಯ ಬೇಕಾಗಿದೆ. ಇನ್ನು ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮ ಸಂಸ್ಥೆಗಳ ವರದಿ ಪ್ರಕಾರ, ಆದಾಯ ತೆರಿಗೆ ಬಗ್ಗೆ ಸಂಪುಟದಲ್ಲಿ ಅಥವಾ ಸರ್ಕಾರದ ಸಮಿತಿಗಳಲ್ಲಿ ಚರ್ಚೆಯಾಗಿಲ್ಲ.

ಕೊರೊನಾ ಆರ್ಥಿಕ ಹೊಡೆತಕ್ಕೆ ಸರ್ಕಾರದ ಆಸ್ತಿ ಮಾರುವ ಯೋಚನೆಯಲ್ಲಿ ಸೌದಿ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಕಾರ, ಈ ವರ್ಷ ಸೌದಿ ಅರೇಬಿಯಾದ ಆರ್ಥಿಕತೆ 6.8 ಪರ್ಸೆಂಟ್ ಕುಸಿತ ಆಗಬಹುದು. ಇದು ಮೂವತ್ತು ವರ್ಷಗಳಲ್ಲೇ ಅತ್ಯಂತ ಹೀನಾಯ ಸ್ಥಿತಿ ಆಗಿದೆ. ಸೌದಿ ಅರೇಬಿಯಾದ ಆರ್ಥಿಕ ಸ್ಥಿತಿ ಉತ್ತೇಜನಕ್ಕೆ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (ವ್ಯಾಟ್) ಮೂರು ಪಟ್ಟು ಹೆಚ್ಚಿಸಿದೆ. ಆಮದು ಸುಂಕ ಹೆಚ್ಚಿಸಿದೆ ಹಾಗೂ ಸರ್ಕಾರಿ ನೌಕರರಿಗೆ ಅನುಕೂಲಗಳನ್ನು ರದ್ದುಮಾಡಿದೆ. ಇದಕ್ಕೂ ಮುನ್ನ ಇಲ್ಲಿ ತೆರಿಗೆ ಇರಲಿಲ್ಲ. ನಾಗರಿಕರಿಗೆ ಸಬ್ಸಿಡಿ ಮತ್ತಿತರ ಅನುಕೂಲ ನೀಡುತ್ತಿತ್ತು.

English summary

Corona Effect: Saudi Arabia Could Sell Assets To Revive Economy

Saudi Arabian economy hurt by Corona and other actors. So, the kingdom is now considering various options, including income tax and sale of state assets to boost income, report said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X