For Quick Alerts
ALLOW NOTIFICATIONS  
For Daily Alerts

ಕನಿಷ್ಠ 10 ರಲ್ಲಿ ಒಬ್ಬ ಭಾರತೀಯ ಕೆಲಸದಿಂದ ವಜಾ: ನೌಕರಿ ಡಾಟ್ ಕಾಮ್ ಸಮೀಕ್ಷೆ

|

ಕನಿಷ್ಠ 10 ರಲ್ಲಿ 1 ಭಾರತೀಯ ಉದ್ಯೋಗಾಕಾಂಕ್ಷಿ ಅವನು ಅಥವಾ ಅವಳನ್ನು ವಜಾಗೊಳಿಸಲಾಗಿದೆ. ಮತ್ತು 10 ಉದ್ಯೋಗಿಗಳಲ್ಲಿ ಸುಮಾರು ಮೂವರು ವಜಾಗೊಳಿಸುವ ಸಮಯ ಸನ್ನಿಹಿತವಾಗಿದೆ ಎಂದು ನೌಕರಿ ಡಾಟ್ ಕಾಮ್‌ನ ಹೊಸ ಸಮೀಕ್ಷೆಯು ಬುಧವಾರ ಬಹಿರಂಗಪಡಿಸಿದೆ.

ಈಗಾಗಲೇ ವಜಾಗೊಳಿಸಿರುವ 10 ಪರ್ಸೆಂಟ್‌ರಷ್ಟು ಉದ್ಯೋಗಾಕಾಂಕ್ಷಿಗಳಲ್ಲಿ, 15 ಪರ್ಸೆಂಟ್ ವಿಮಾನಯಾನ ಮತ್ತು ಇ-ಕಾಮರ್ಸ್ ಉದ್ಯಮದಿಂದ ಬಂದವರು ಮತ್ತು 14 ಪರ್ಸೆಂಟ್‌ರಷ್ಟು ಜನರು ಆತಿಥ್ಯ(ಹಾಸ್ಪಿಟಲಿಟಿ) ಉದ್ಯಮದಿಂದ ಬಂದವರು.

ಯಾವ ವಲಯದಲ್ಲಿ ಎಷ್ಟು ವಜಾ?
 

ಯಾವ ವಲಯದಲ್ಲಿ ಎಷ್ಟು ವಜಾ?

ವಜಾಗೊಳಿಸಿದ ನೌಕರರಲ್ಲಿ ಸುಮಾರು 13 ಪರ್ಸೆಂಟ್‌ರಷ್ಟು ಹಿರಿಯ ವೃತ್ತಿಪರರು 11 ವರ್ಷಗಳ ಕೆಲಸದ ಅನುಭವ ಹೊಂದಿದ್ದಾರೆ ಮತ್ತು ಮಾರಾಟ (12 ಪರ್ಸೆಂಟ್), ಮಾನವ ಸಂಪನ್ಮೂಲ ಮತ್ತು ನಿರ್ವಾಹಕ (12 ಪರ್ಸೆಂಟ್), ಮಾರ್ಕೆಟಿಂಗ್ (11 ಪರ್ಸೆಂಟ್) ನಷ್ಟಿದೆ.

50,000 ಸಕ್ರಿಯ ಉದ್ಯೋಗಾಕಾಂಕ್ಷಿಗಳ ಸಮೀಕ್ಷೆ

50,000 ಸಕ್ರಿಯ ಉದ್ಯೋಗಾಕಾಂಕ್ಷಿಗಳ ಸಮೀಕ್ಷೆ

70 ಪರ್ಸೆಂಟ್‌ರಷ್ಟು ಉದ್ಯೋಗಾಕಾಂಕ್ಷಿಗಳು ಉತ್ತಮ ಉದ್ಯೋಗಾವಕಾಶಗಳಿಗಾಗಿ ಹೊಸ ಉದ್ಯೋಗಗಳನ್ನು ಹುಡುಕುತ್ತಿದ್ದರೆ, ನಂತರದ ಸ್ಥಾನದಲ್ಲಿ 16 ಪರ್ಸೆಂಟ್‌ ವೇತನ ಕಡಿತ ಮತ್ತು 14 ಪರ್ಸೆಂಟ್ ಉದ್ಯೋಗದಿಂದ ವಜಾಗೊಳಿಸುವ ಭೀತಿಯಲ್ಲಿದ್ದಾರೆ. ನೌಕ್ರಿ.ಕಾಂ 50,000 ಸಕ್ರಿಯ ಉದ್ಯೋಗಾಕಾಂಕ್ಷಿಗಳನ್ನು ಒಳಗೊಂಡ ಸಮೀಕ್ಷೆಯ ಮೂಲಕ ಈ ಮಾಹಿತಿ ನೀಡಿದೆ.

ಯಾವ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮ ಬೀರಿಲ್ಲ?

ಯಾವ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮ ಬೀರಿಲ್ಲ?

ಐಟಿ, ಫಾರ್ಮಾ, ವೈದ್ಯಕೀಯ / ಆರೋಗ್ಯ ಮತ್ತು ಬಿಎಫ್‌ಎಸ್‌ಐ ಕೈಗಾರಿಕೆಗಳ ಉದ್ಯೋಗಾಕಾಂಕ್ಷಿಗಳು ವಜಾಗೊಳಿಸುವಿಕೆ ಮತ್ತು ವೇತನ ಕಡಿತದಿಂದ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಪಾರಾಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

"ಉದ್ಯೋಗ ಮಾರುಕಟ್ಟೆಯ ಭವಿಷ್ಯದ ದೃಷ್ಟಿಕೋನದ ಬಗ್ಗೆ ಎಚ್ಚರಿಕೆ ವಹಿಸುವ ಸಮೀಕ್ಷೆಯು ವಿಶಾಲ ನಿರ್ದೇಶನವನ್ನು ನೀಡುತ್ತದೆ. 10 ಪರ್ಸೆಂಟ್‌ರಷ್ಟು ಉದ್ಯೋಗಾಕಾಂಕ್ಷಿಗಳು ಸಮೀಕ್ಷೆಯ ಪ್ರಕಾರ ಅವರನ್ನು ವಜಾಗೊಳಿಸಲಾಗಿದೆ ಎಂದು ದೃಢಪಡಿಸಿದರೆ, ಸುಮಾರು 34 ಪರ್ಸೆಂಟ್‌ರಷ್ಟು ಜನರು ವಜಾಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಭಯಪಡುತ್ತಾರೆ "ಎಂದು ನೌಕರಿ ಡಾಟ್ ಕಾಮ್‌ನ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯಲ್ ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಈ ಕೋರ್ಸ್‌ಗಳಿಗೆ ಹೆಚ್ಚಿದ ಬೇಡಿಕೆ
 

ಲಾಕ್‌ಡೌನ್ ಸಮಯದಲ್ಲಿ ಈ ಕೋರ್ಸ್‌ಗಳಿಗೆ ಹೆಚ್ಚಿದ ಬೇಡಿಕೆ

ಲಾಕ್‌ಡೌನ್‌ ಸಮಯದಲ್ಲಿ ಸ್ವಯಂ-ಅಭಿವೃದ್ಧಿ ಮತ್ತು ವೃತ್ತಿಜೀವನದ ಪ್ರಗತಿಗೆ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಕೋರ್ಸ್‌ಗಳು ( 22 ಪರ್ಸೆಂಟ್), ನಂತರ ಡಿಜಿಟಲ್ ಮಾರ್ಕೆಟಿಂಗ್ ( 20 ಪರ್ಸೆಂಟ್), ಮತ್ತು ಫೈನಾನ್ಸ್ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್ ( 16 ಪರ್ಸೆಂಟ್) ಉದ್ಯೋಗಾವಕಾಶದವರು ತಮ್ಮನ್ನು ತಾವು ಕೌಶಲ್ಯದಿಂದ ಸುಧಾರಿಸಿಕೊಳ್ಳುವ ಉನ್ನತ ಕೋರ್ಸ್‌ಗಳಲ್ಲಿ ಸೇರಿವೆ.

ಇನ್ನು ಸುಮಾರು 41 ಪರ್ಸೆಂಟ್‌ರಷ್ಟು ಉದ್ಯೋಗಾಕಾಂಕ್ಷಿಗಳು ತಮ್ಮ ಸಂಸ್ಥೆಯಲ್ಲಿ ವಜಾಗೊಳಿಸುವ ಸಾಧ್ಯತೆಯಿಲ್ಲ ಎಂದು ಸಕಾರಾತ್ಮಕವಾಗಿದ್ದರು. ಈ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗಿ ಬಿಎಫ್‌ಎಸ್‌ಐ, ಐಟಿ ಮತ್ತು ಫಾರ್ಮಾ ಕೈಗಾರಿಕೆಗಳಿಂದ ಬಂದವರು ಆಗಿದ್ದಾರೆ.

"ಮತ್ತೊಂದೆಡೆ, 59 ಪರ್ಸೆಂಟ್‌ರಷ್ಟು ಉದ್ಯೋಗಾಕಾಂಕ್ಷಿಗಳು, ಹೆಚ್ಚಾಗಿ ವಿಮಾನಯಾನ ಸಂಸ್ಥೆಗಳು, ಆತಿಥ್ಯ, ಇಕಾಮರ್ಸ್ ಮತ್ತು ಬಿಪಿಓ / ಐಟಿಇಎಸ್ ಕೈಗಾರಿಕೆಗಳು, ವಜಾಗೊಳಿಸುವಿಕೆಯನ್ನು ಈಗಾಗಲೇ ಘೋಷಿಸಲಾಗಿದೆ ಅಥವಾ ಮುಂಬರುವ ದಿನಗಳಲ್ಲಿ ಸಂಭವಿಸುವ ಸಾಧ್ಯತೆಯಿದೆ ಎಂದು ದೃಢಪಡಿಸಿದೆ" ಎಂದು ಸಂಶೋಧನೆಗಳು ಹೇಳಿವೆ.

English summary

Corona Impact 1 in 10 Jobseeker Lost Job In India

At least 1 in 10 Indian jobseeker has confirmed he or she has been laid off and nearly three in 10 jobsekkers fear a layoff is imminent, a new survey by naukri.com revealed Wednesday.
Story first published: Wednesday, May 27, 2020, 17:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more